





ಮೇಲಂತಬೆಟ್ಟು ಗ್ರಾಮದ ನಲ್ಕೆತ್ಯಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನ ಮತ್ತು ಶ್ರೀ ವನದುರ್ಗೆ ದೇವಸ್ಥಾನದ ಜಾತ್ರಾ ಮಹೋತ್ಸವ ಜ.14 ರ ಮಕರ ಸಂಕ್ರಮಣ ದಂದು ವೇ. ಮೂ. ಗೋಪಾಲ ಕೃಷ್ಣ ಭಟ್ ತಂತ್ರಿ ಮತ್ತು ಅರ್ಚಕ ರಂಗನಾಥ ನುರಿತ್ತಾಯರ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.



ಬೆಳಿಗ್ಗೆ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಹ ವಾಚನ, ಗಣಹೋಮ ಕಲಶಪೂಜೆ, ಪ್ರಧಾನ ಹೋಮ, ಕಲಶಾಭಿಷೇಕ, ಪಂಚಪರ್ವ ಗೊನೆ ಮುಹೂರ್ತ, ಚೆಂಡು ಹಾಕುವುದು, ತೆಂಗಿನಕಾಯಿ ಹಾಕುವುದು, ಕೋಳಿಗೂಟ, ಬೆಳಿಗ್ಗೆ ಸಂಕ್ರಮಣ ಪೂಜೆ, ಸಂಜೆ ಭಂಡಾರ ಇಳಿದು ತೋರಣ ಮುಹೂರ್ತ ನಲ್ಕೆತ್ಯಾರು ಬ್ರಹ್ಮ ಬೈದರ್ಕಳ ಊರ ಗರಡಿಯಲ್ಲಿ ಪ್ರಾರ್ಥನೆ ಧ್ವಜಾರೋಹಣ, ವನದುರ್ಗಾ ದೇವಿಗೆ ಮಹಾಪೂಜೆ, ಬಲಿ ಉತ್ಸವ, ಶ್ರೀ ಕೊಡಮಣಿತ್ತಾಯ, ಪಿಲಿಚಾಮುಂಡಿ, ಕಲ್ಲುರ್ಟಿ ಕಲ್ಕುಡ ಪರಿವಾರ ದೈವಗಳಿಗೆ ನೇಮೋತ್ಸವ ಧ್ವಜಾವರೋಹಣ ನಡೆಯಿತು.









