ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ 18 ನೇ ಶಾಖೆ ಹಿರಿಯಡ್ಕದಲ್ಲಿ ಶುಭಾರಂಭ

0

ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಪ್ರಧಾನ ಕಚೇರಿ ಬೆಳ್ತಂಗಡಿ ಇದರ 18 ನೇ ಶಾಖೆ ಹಿರಿಯಡ್ಕದ ಶ್ರೀ ದುರ್ಗಾ ಕಾಂಪ್ಲೆಕ್ಸ್‌ ಇಲ್ಲಿ ಜ.06 ರಂದು ಶುಭಾರಂಭಗೊಂಡಿತು.
ಕರ್ನಾಟಕ ಸರಕಾರದ ಮಾಜಿ ಸಚಿವ ವಿನಯ್‌ ಕುಮಾರ್ ಸೊರಕೆ ಕಚೇರಿ ಉದ್ಘಾಟಿಸಿ ಮಾತನಾಡಿ ಸಂಘದ ಬೆಳವಣಿಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಹಕಾರ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಯನ್ನು ಮಾಡುವಂತೆ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎನ್. ಪದ್ಮನಾಭ ಮಾಣಿಂಜ ವಹಿಸಿದ್ದರು. ಭದ್ರತಾ ಕೋಶದ ಉದ್ಘಾಟನೆ ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕ ಲಾಲಾಜಿ ಆರ್. ಮೆಂಡನ್‌ ಉದ್ಘಾಟಿಸಿದರು. ಬೆಳ್ತಂಗಡಿ ಮಾಜಿ ಶಾಸಕ ಸಂಘದ ನಿರ್ದೇಶಕ ಕೆ ವಸಂತ ಬಂಗೇರ ಗಣಕಯಂತ್ರವನ್ನು ಉದ್ಘಾಟಿಸಿದರು. ನಿರಖು ಠೇವಣಿ ಸರ್ಟಿಫಿಕೇಟ್ ವಿತರಣೆಯನ್ನು ಅಶೋಕ್ ಕುಮಾರ್ ಶೆಟ್ಟಿ, ನಿರ್ದೇಶಕರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ನಿ) ಹಾಗೂ ಅಧ್ಯಕ್ಷರು, ರೈತರ ಸೇವಾ ಸಹಕಾರಿ ಸಂಘ, ಹಿರಿಯಡ್ಕ, ಉಳಿತಾಯ ಖಾತೆ ಪುಸ್ತಕ ವಿತರಣೆಯನ್ನು ಸುರೇಶ್ ನಾಯಕ್ , ಅಧ್ಯಕ್ಷರು, ಗ್ರಾಮ ಪಂಚಾಯತ್, ಬೊಮ್ಮಾರಬೆಟ್ಟು ಹಾಗೂ ಮಲ್ಪೆ ರಾಘವೇಂದ್ರ, ಅಧ್ಯಕ್ಷರು, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ, ಹಿರಿಯಡ್ಕ ಇವರು ನೆರವೇರಿಸಿದರು.

ಭಾ.ಜ.ಪ ಉಡುಪಿ ಜಿಲ್ಲಾಧ್ಯಕ್ಷ ಲಾಡಿ ಸುರೇಶ್ ನಾಯಕ್, ವಿಜಯ ಬ್ಯಾಂಕ್‌ನ ನಿವೃತ ಮ್ಯಾನೇಜರ್ ಹಾಗೂ ಹಿರಿಯಡ್ಕ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಗೌರವಾಧ್ಯಕ್ಷ ಬಿ.ಎಂ ಶೇಖ‌, ಕಟ್ಟಡ ಮಾಲಕ ಕೃಷ್ಣ ನಾಯ್ಕ, ನಮ್ಮ ಬಿರುವೆ‌ ಇದರ ಅಧ್ಯಕ್ಷ ರವಿ ಎಸ್ ಪೂಜಾರಿ, ಉದ್ಯಮಿಗಳು ಮಹಮ್ಮದ್ ಅಶ್ರಫ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಭಗೀರಥ ಜಿ ಇವರು ಸ್ವಾಗತಿಸಿದರು, ಮೋನಪ್ಪ ಪೂಜಾರಿ ಕಂಡತ್ಯರು ಪ್ರಸ್ತಾಪಿಸಿದರು, ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶ್ವತ್ ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಸಂಘದ ನಿರ್ದೇಶಕ ಚಂದ್ರಶೇಖರ ವಂದಿಸಿದರು . ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಸಂಜೀವ ಪೂಜಾರಿ, ಜಗದೀಶ್ಚಂದ್ರ ಡಿ.ಕೆ. ಶೇಖರ ಬಂಗೇರ, ಚಂದ್ರಶೇಖರ್, ಕೆ.ಪಿ ದಿವಾಕರ್, ಡಾ. ರಾಜರಾಮ್ ಕೆ.ಬಿ,ಜಯವಿಕ್ರಮ್‌ ,ಹಿರಿಯಡ್ಕ ಶಾಖೆಯ ಶಾಖಾವ್ಯವಸ್ಥಾಪಕ ನಿರಂಜನ್, ಶಾಖಾ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here