ಕೊಯ್ಯೂರು ಆದೂರು ಪೇರಾಲ್ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ

0

ಕೊಯ್ಯೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಯ್ಯೂರು ವಿಭಾಗದ ಸ್ವ-ಸಹಾಯ ಸಂಘಗಳ ಮತ್ತು ಶ್ರೀ ಕೃಷ್ಣ ಭಜನಾ ಮಂಡಳಿ (ರಿ) ಆದೂರು ಪೇರಲ್ ಕೊಯ್ಯೂರು ಇವುಗಳ ಸಹಭಾಗಿತ್ವದಲ್ಲಿ ಕೊಯ್ಯೂರಿನ ಆದೂರು ಪೇರಾಲ್ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಳ್ಳಲಾಗಿತ್ತು.
ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಮಂಡಳಿಯ ಅಧ್ಯಕ್ಷ ವಿಶ್ವನಾಥ ಗೌಡ ಬಚ್ಚಿರೆದಡಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಲಾಯಿಲ ವಲಯದ ಮೇಲ್ವಿಚಾರಕ ಸುಶಾಂತ್, ಸೇವಾ ಪ್ರತಿನಿಧಿ ಕುಸುಮಾವತಿ, ಊರಿನ ಹಿರಿಯರಾದ ಜಯರಾಮ್ ಭಟ್, ಭಜನಾ ಮಂಡಳಿಯ ಪದಾಧಿಕಾರಿಗಳಾದ ಲಿಂಗಪ್ಪಗೌಡ, ಬಾಲಕೃಷ್ಣ ಸಾಲಿಯಾನ್ , ಹೇಮಂತಗೌಡ ಬೊಟ್ಟು , ಮನೋಜ್ ಕುಮಾರ್ ಕಜೆ , ಹೇಮಂತಗೌಡ ನಾಗನೊಡಿ , ಶೇಖರಗೌಡ ಕೋರಿಯಾರು, ಕೊಯ್ಯೂರಿನ ಆರೋಗ್ಯ ಸಹಾಯಕಿ ಶ್ರೀಮತಿ ಹರಿಣಾಕ್ಷಿ ಗ್ರಾ.ಪಂ ಸದಸ್ಯೆ ಶ್ರೀಮತಿ ಹೇಮಾವತಿ, ಗ್ರಾ ಪಂ ಮಾಜಿ ಅಧ್ಯಕ್ಷರಾದ ಶ್ರೀಮತಿ ಶಶಿಕಲ ಮತ್ತು ಶ್ರೀಮತಿ ಸುಶೀಲ, ಊರವರಾದ ಮಾಧವ ಗೌಡ ಬೆಲ್ದೆ, ರಮೇಶ್ ಗೌಡ ಮೈಂದ ಕೊಡಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೊಯ್ಯೂರು ವಿಭಾಗದ ಸ್ವ-ಸಹಾಯ ಸಂಘಗಳ ಪದಾಧಿಕಾರಿಗಳು ಸದಸ್ಯರುಗಳು ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರುಗಳು ಉಪಸ್ಥಿತರಿದ್ದರು.

ಮಂಡಳಿಯ ಸಲಹೆಗಾರ ಪಿ ಚಂದ್ರಶೇಖರ್ ಸಾಲ್ಯಾನ್ ಸ್ವಾಗತಿಸಿ, ವಂದಿಸಿದರು. ಭಜನಾ ಮಂಡಳಿಯ ಸದಸ್ಯರಾದ ದಯಾನಂದ ಆಚಾರ್, ಓಬಯ್ಯ ನಾಯ್ಕ ,ರೋಹಿತಾಾಕ್ಷ ಉಮಿಯ ಮತ್ತು ನಾರಾಯಣ ನಾಯ್ಕ ಸಹಕರಿಸಿದರು. ಆದೂರ್ ಪೆರಲ್ ಪೇಟೆಯ ಪರಿಸರದಿಂದ ಆದರ್ಶ ನಗರದ ಹಿಂದೂ ರುದ್ರ ಭೂಮಿಯ ವರೆಗೆ ಸ್ವಚ್ಛಗೊಳಿಸಿ ಸುಮಾರು 15 ಗೋಣಿ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಇನ್ನಿತರ ಕಸಗಳನ್ನು ತೆಗೆದು ಸ್ವಚ್ಛಗೊಳಿಸಲಾಯಿತು. ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸುಮಾರು 42 ಜನರು ಭಾಗವಹಿಸಿ ಸಹಕಾರ ನೀಡಿದರು.

LEAVE A REPLY

Please enter your comment!
Please enter your name here