ಸುಲ್ಕೇರಿ: ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘ ಬ್ರಹ್ಮಗಿರಿ, ಸುಲ್ಕೇರಿ ಇದರ ಮಾಸಿಕ ಸಭೆಯು ಸಂಘದ ಅಧ್ಯಕ್ಷ ಕೊರಗಪ್ಪ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ನಾರಾಯಣ ಗುರುಗಳ ಜೀವನಚರಿತ್ರೆ ಬಗ್ಗೆ ಮಾಹಿತಿ ನೀಡಿ, ಗುರುಮಂದಿರ ನಿರ್ಮಾಣಕ್ಕೆ 25 ಚೀಲ ಸಿಮೆಂಟ್ ನೀಡುವುದಾಗಿ, ಪ್ರಸ್ತಾಪಿಸಿ, ಶೀಘ್ರದಲ್ಲೇ ಬ್ರಹ್ಮಗಿರಿಯಲ್ಲಿ ಗುರುಮಂದಿರ ನಿರ್ಮಾಣವಾಗಲೆಂದು
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ನಾರಾಯಣ ಗುರು ವೈದಿಕ ಸಮಿತಿ(ರಿ)ಮಂಗಳೂರು, ರಾಜ್ಯಾಧ್ಯಕ್ಷ ಗೌರವಾನ್ವಿತ ಸೋಮನಾಥ ಶಾಂತಿಯವರು ಶುಭಹಾರೈಸಿ, ಮಾನ್ಯ ವಿ.ಕೆ. ನೆಕ್ಕಿನಡ್ಕ ಇವರ ಕೊಡುಗೆಯಾದ ನಾರಾಯಣ ಗುರುಗಳ ಜೀವನ ಚರಿತ್ರೆಯ ಕಿರು ಪುಸ್ತಕವನ್ನು ಭಾಗವಹಿಸಿದ ಸದಸ್ಯರಿಗೂ ವಿತರಿಸಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಎಸ್.ಪಿ ಸುಧೀರ್, ಸೂರ್ಯನಾರಾಯಣ ಕೃಪಾ, ಉಪಾಧ್ಯಕ್ಷ ನಾರಾಯಣ ಪೂಜಾರಿ ಬೊಳುವಾಲ್, ಕಾರ್ಯದರ್ಶಿಯಾದ ಡೀಕಯ್ಯ ಪೂಜಾರಿ, ಜೊತೆ ಕಾರ್ಯದರ್ಶಿಗಳಾದ ಪ್ರದೀಪ್ ,ಶ್ರೀ ಸಿದ್ದೀವಿನಾಯಕ, ವಿಶ್ವನಾಥ ಪೂಜಾರಿ ನೆಕ್ಕಿನಡ್ಕ ಕೋಶಾಧಿಕಾರಿ ಹರೀಶ್ ಪೂಜಾರಿ ,ಮಾತೃ ಶ್ರೀ ನಿಲಯ ಬೊಳುವಾಲು., ಗೌರವ ಸಲಹೆಗಾರ ಪ್ರವೀಣ್ ಪೂಜಾರಿ, ಆನಂದ ಪೂಜಾರಿ ಕುತ್ಯಾರು, ರಮೇಶ್ ಪೂಜಾರಿ ಬೊಳುವಾಲ್ ,ವಸಂತ ಪೂಜಾರಿ ಸದ್ಗುರು ಪಲ್ಕೆ, ರಮೇಶ್ ಪೂಜಾರಿ, ಗಿರಿಜಾ ನಿವಾಸ, ಸುನಿಲ್ ಪೂಜಾರಿ , ಗುರುರಾಜ್ ಪೂಜಾರಿ, ಮಂಜುಶ್ರೀ ನಿಲಯ, ಯಶೋಧರ ಪೂಜಾರಿ, ಪಿಜಾತ್ಯಾರು, ಶಂಕರ್ ಪೂಜಾರಿ ಪಿಲಿಕುಡೆಲು, ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು. ಸಭೆಗೆ ಆಗಮಿಸಿದಂತ ಸದಸ್ಯರಿಗೂ ಲಘು ಉಪಹಾರದ ವ್ಯವಸ್ಥೆಯನ್ನು ನಂದನ ಹಿತ್ಲು ಮನೆಯ ಸಹೋದರರಾದ ಅಜಿತ್ ಮತ್ತು ಶರತ್ ನೆರವೇರಿಸಿಕೊಟ್ಟರು.
ಡೀಕಯ್ಯ ಪೂಜಾರಿ ಕಾರ್ಯಕ್ರಮ ನಿರೂಪಿಸಿ, ವಸಂತಿಯವರು ಸ್ವಾಗತಿಸಿ, ಕಾರ್ಯಕ್ರಮಕ್ಕೆ ಧನ್ಯವಾದವಿತ್ತರು.