ನಿಟ್ಟಡೆ: ಕುಂಭಶ್ರೀ ವೈಭವ ಕಾತುರದ ವ್ಯಾಪ್ತಿ ವರ್ಷದಿಂದ ವರ್ಷಕ್ಕೆ ವಿಸ್ತಾರವಾಗುತ್ತಿದೆ ಎಂದು ಶಾಸಕ ಹರೀಶ್ ಪೂಂಜ ಬಣ್ಣಿಸಿದರು. ಅವರು ನಿಟ್ಟಡೆ ಕುಂಭಶ್ರೀ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆಯ ಆವರಣದಲ್ಲಿ ಜರಗಿದ ಕುಂಭಶ್ರೀ ವೈಭವದ ಉದ್ಘಾಟನ ಸಮಾರಂಭದಲ್ಲಿ ಮಾತನಾಡಿದರು. ಬೆಳ್ತಂಗಡಿ ಧರ್ಮಪ್ರಾಂತ್ಯದ ಬಿಷಪ್ ಫಾ| ಲಾರೆನ್ಸ್ ಮುಕ್ಕುಯಿ ಮಾತನಾಡಿ, ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ವಿದ್ಯೆಯಿಂದ ಮಾತ್ರ ಸಾಧ್ಯ ಎಂದರು. ಕುಂಡದಬೆಟ್ಟು ಜುಮಾ ಮಸೀದಿಯ ಖತೀಬರಾದ ಕೆ.ಎಂ. ಹನೀಫ್ ಸಖಾಫಿ ಮಾತನಾಡಿ ಕುಂಭಶ್ರೀ ವೈಭವ ಶಾಲೆಯ ಶಿಕ್ಷಣ ವ್ಯವಸ್ಥೆಯ ವೈಭವವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಶುಭ ಹಾರೈಸಿದರು. ಸಂಸ್ಥೆಯ ಸಂಸ್ಥಾಪಕ ಗಿರೀಶ್ ಕೆ.ಎಚ್. ಅಧ್ಯಕ್ಷತೆ ವಹಿಸಿದ್ದರು. ಕುಕ್ಕೇಡಿ ಗ್ರಾ.ಪಂ. ಅಧ್ಯಕ್ಷ ಜನಾರ್ಧನ ಪೂಜಾರಿ ಧ್ವಜಾರೋಹಣ ನೆರವೇರಿಸಿದರು. ವೇಣೂರು ಗ್ರಾ.ಪಂ. ಅಧ್ಯಕ್ಷ ನೇಮಯ್ಯ ಕುಲಾಲ್ ವಸ್ತು ಪ್ರದರ್ಶನದ ಉದ್ಘಾಟನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಖ್ಯಾತ ತುಳು ಚಿತ್ರನಟ ಭೋಜರಾಜ ವಾಮಂಜೂರು, ಕಕ್ಕಿಂಜೆ ಕಾರುಣ್ಯ ಆಂಗ್ಲಮಾಧ್ಯಮ ಶಾಲೆಯ ಸಂಸ್ಥಾಪಕ ಮಹಮ್ಮದ್ ಕೆ., ಕುಕ್ಕೇಡಿ ಗ್ರಾ.ಪಂ. ಸದಸ್ಯೆ ಗುಣವತಿ ಡಿ., ಕುಂಭಶ್ರೀ ವೈಭವ ಸಮಿತಿಯ ಹರೀಶ್ ಕುಮಾರ್, ಗುರುಪ್ರಕಾಶ್ ಕಕ್ಕೆಪದವು, ಶರಬಯ್ಯ, ಬಾಲಕೃಷ್ಣ ಭಟ್, ಜಗದೀಶ್, ಪ್ರಶಾಂತ್, ಗಣೇಶ್ ಕುಂದರ್, ಮುಖ್ಯಶಿಕ್ಷಕಿ ಉಷಾ ಜಿ., ವಿದ್ಯಾರ್ಥಿ ಸಂಘದ ನಾಯಕಿ ಸಿಂಚನಾ ಭಟ್ ಉಪಸ್ಥಿತರಿದ್ದರು.
ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಅಶ್ವಿತ್ ಕುಲಾಲ್ ಸ್ವಾಗತಿಸಿ, ಪ್ರಾಂಶುಪಾಲೆ ಓಮನಾ ವರದಿ ವಾಚಿಸಿದರು. ಶಿಕ್ಷಕಿ ಶ್ವೇತಾ ವಂದಿಸಿದರು. ಅಕ್ಷತಾ ಮತ್ತು ವಿನಯ್ ನಿರೂಪಿಸಿದರು.
ಸನ್ಮಾನ-ಪ್ರತಿಭಾ ಪುರಸ್ಕಾರ
ಚಿತ್ರನಟ ಭೋಜರಾಜ ವಾಮಂಜೂರು, ಡಾ| ಶಾಂತಿಪ್ರಸಾದ್, ಸುಂದರ ಹೆಗ್ಡೆ ಬಿ.ಇ., ನಿತೀಶ್ ಎಚ್., ಕಾಮಿಡಿ ಕಿಲಾಡಿ ಖ್ಯಾತಿಯ ಅನೀಶ್ ಅಮೀನ್, ಕೆ. ಭಾಸ್ಕರ ಪೈ, ಅಮ್ಮಾಜಿ ಪೂಜಾರಿ, ಅಶೋಕ್ ಪಾಣೂರು, ಮೊಲಿ ಟೆಲ್ಲಿಸ್, ಅಶೋಕ್ ದೇವಾಡಿಗ ಅವರನ್ನು ಸಮ್ಮಾನಿಸಲಾಯಿತು. ಕಳೆದ ಸಾಲಿನಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಾಂಸ್ಕೃತಿಕ ಹಾಗೂ ಕ್ರೀಡೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು.