ಬೆಳಾಲು :ಶ್ರೀ ಸರಸ್ವತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಇದರ ವಾರ್ಷಿಕೋತ್ಸವ ಡಿ.31 ರಂದು ಜರುಗಿತು.
ಸಂಜೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಾಲು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸತೀಶ್ ಗೌಡ ಎಳ್ಳುಗದ್ದೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಹಳೆ ವಿದ್ಯಾರ್ಥಿ ಉಪ್ಪಿನಂಗಡಿ ವಲಯ ಉಪ ಅರಣ್ಯಾಧಿಕಾರಿ ಬಿ. ಜೆರಾಲ್ಡ್ ಡಿಸೋಜಾ, ಮೈಸೂರಿನ ಶ್ರೀ ಮಂಜುನಾಥ ಅಗ್ರೋ ಕೇರ್ ಸಂಸ್ಥೆಯ ಆಡಳಿತ ನಿರ್ದೇಶಕ ವಿಶ್ವನಾಥ ಪೂಜಾರಿ ಮಾಯ, ಭಾಗವಹಿಸಿ ಮಾತನಾಡಿದರು.ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕೆ. ರಾಜರಾಮ ಶರ್ಮ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಚಿದಾನಂದ ಕೆ. ವರದಿ ವಾಚಿಸಿದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸತೀಶ್ ನಾಯ್ಕ, ವಿದ್ಯಾರ್ಥಿ ನಾಯಕಿ ಕು. ತ್ರಿಷಾ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೆಳಿಗ್ಗೆ ಧ್ವಜ ವಂದನೆ ಬಳಿಕ ವಿವಿಧ ಕಾರ್ಯಕ್ರಮಗಳು ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಉಜಿರೆ ಹೊಳ್ಳ ಆರ್ಟ್ಸ್ ನ ವೆಂಕಟಗಿರಿ ಹೊಳ್ಳ ಮತ್ತು ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರುಗಳಾದ ಯಶವಂತಿ,ಸುಲೋಚನಾ, ವೇದಾ ದಿನೇಶ್, ಕಾವ್ಯ, ರಮ, ಸಹಕರಿಸಿದ ಬೆಳಾಲು ಮಣಿಕಂಠ ಸೌಂಡ್ಸ್ ನ ಸಂತೋಷ ಕನಿಕ್ಕಿಲ ಮತ್ತು ಸಿಬ್ಬಂದಿಗಳನ್ನು, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಮತ್ತು ಸದಸ್ಯರನ್ನು ಗೌರವಿಸಲಾಯಿತು.ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಹಾಗು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಶಾಲಾ ವಿದ್ಯಾರ್ಥಿನಿಯರ ಪ್ರಾರ್ಥನೆ ಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.ಶಿಕ್ಷಕಿಯರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.ಬಳಿಕ ಅಂಗನವಾಡಿ ಮಕ್ಕಳಿಂದ, ಶಾಲಾ ಮಕ್ಕಳಿಂದ ವಿವಿಧ ವಿನೋದವಳಿಗಳು ಹಾಗು ಉಜಿರೆ ಸಂಗಮ ಕಲಾವಿದರಿಂದ ನಾಟಕ ಪ್ರದರ್ಶನಗೊಂಡಿತು