ರೋಟರಿ ಕ್ಲಬ್ ವತಿಯಿಂದ ಕ್ರಿಸ್ಮಸ್ ಮತ್ತು ಹೊಸ ವರ್ಷ ಆಚರಣೆ

0

ಬೆಳ್ತಂಗಡಿ :ರೋಟರಿಕ್ಲಬ್ ಬೆಳ್ತಂಗಡಿ ವತಿಯಿಂದ ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ ರೋಟರಿ ಕ್ಲಬ್ ಬೆಳ್ತಂಗಡಿ ಹಾಗೂ ಆ್ಯನ್ಸ. ಸದಸ್ಯರು ಡಿ.30 ರಂದು ರೋಟರಿ ಸೇವಾಭವನದಲ್ಲಿ ಕುಟುಂಬ ಸದಸ್ಯರೊಡಗೂಡಿ ಕ್ರಿಸ್ಮಸ್ ಹಾಗೂ ಹೊಸವರ್ಷವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಉಜಿರೆಯ ತ್ರತೀಯ ಬಿಕಾಂ ಪ್ರತಿಭಾನ್ವಿತ ವಿದ್ಯಾರ್ಥಿನಿ ಕು. ಶಿವಕುಮಾರಿಗೆ ಕಾಲೇಜು ಶುಲ್ಕ ಪ್ರಯುಕ್ತ ರೂ. 12,740/- ನೀಡಿ ಪುರಸ್ಕರಿಸಲಾಯಿತು. ಮಕ್ಕಳಿಗೆ ಹಾಗೂ ಸದಸ್ಯರಿಗೆ ವಿವಿಧ ಮನೋರಂಜನಾ ಆಟಗಳು , ಸಾಂತಾಕ್ಲಾಸ್ ನಿಂದ ಉಡುಗೊರೆಗಳನ್ನು ಏರ್ಪಡಿಸಲಾಗಿತ್ತು. ಕ್ಲಬ್ ಸದಸ್ಯ ರೊ. ಆ್ಯಂಟನಿಯವರು ಕ್ರಿಸ್ಮಸ್ ಆಚರಣೆ ಕುರಿತಾಗಿ ಮಾಹಿತಿಯನ್ನು ನೀಡಿದರು. ರೋಟರಿಕ್ಲಬ್ ಅಧ್ಯಕ್ಷೆ ರೊ. ಮನೋರಮಾ ಭಟ್ ಸ್ವಾಗತಿಸಿ ಕಾರ್ಯದರ್ಶಿ ರೊ. ರಕ್ಷಾ ರಾಘ್ನೀಶ್ ಧನ್ಯವಾದ ಸಮರ್ಪಿಸಿದರು. ವಿಧಾನ ಪರಿಷತ್ ಸದಸ್ಯ ರೊ. ಪ್ರತಾಪಸಿಂಹ ನಾಯಕ್ ಸೇರಿದಂತೆ ಕ್ಲಬ್ ನ ಹಿರಿಯ ಸದಸ್ಯರುಗಳು, ಪೂರ್ವಾಧ್ಯಕ್ಷರುಗಳು ಕುಟುಂಬ ಸಮೇತವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸದಸ್ಯರುಗಳೇ ಮನೆಯಿಂದ ತಯಾರಿಸಿ ತಂದ ವಿವಿಧ ರೀತಿಯ ಖಾದ್ಯಗಳನ್ನು ಒಳಗೊಂಡ ಭೋಜನ ವಿಶೇಷ ಆಕರ್ಷಣೆಯಾಗಿತ್ತು.

LEAVE A REPLY

Please enter your comment!
Please enter your name here