ಬೆಳಾಲು ಅನಂತೋಡಿ ದೇವಸ್ಥಾನದ ವಾರ್ಷಿಕ ಜಾತ್ರೆ ಸಂಪನ್ನ

0


ಬೆಳಾಲು :ಇಲ್ಲಿಯ ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರೆ ಡಿ.25 ಮತ್ತು 26 ರಂದು ವಿವಿಧ ವೈದಿಕ, ಧಾರ್ಮಿಕ, ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೇ. ಮೂ. ನೀಲೇಶ್ವರ ಅಲಂಬಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಇದರ ಅಂಗವಾಗಿ ಡಿ.26 ರಂದು ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಜಾತ್ರೋತ್ಸವ ಸಮಿತಿ ಅಧ್ಯಕ್ಷ ದೇಜಪ್ಪ ಗೌಡ ಎಳ್ಳುಗದ್ದೆ ವಹಿಸಿದ್ದರು.

ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಶ್ರೀಶ ಕುಮಾರ್ ಧಾರ್ಮಿಕ ಭಾಷಣ ಮಾಡುತ್ತಾ ದೇವಸ್ಥಾನ ಶ್ರದ್ಧಾ ಕೇಂದ್ರಗಳ ಮೂಲಕ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಂಸ್ಕಾರ ಬೆಳೆಸುವ ಕೇಂದ್ರಗಾಲಗಬೇಕು. ಇದರಿಂದ ಊರಿನ ಅಭಿವೃದ್ಧಿ ಗಾಗುವುದು ಎಂದರು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನೋಟರಿ ವಕೀಲ ಶ್ರೀನಿವಾಸ ಗೌಡ ಶ್ರೀ ಸೌಧ ಪ್ರಸ್ತಾವಿಕವಾಗಿ ಮಾತನಾಡಿ ಊರವರ ಸಂಪೂರ್ಣ ಸಹಕಾರದಿಂದ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ ಎಂದರು. ದೇವಸ್ಥಾನದ ಆಡಳಿತ ಮೊಕ್ತೇಸರ ಜೀವಂದರ ಕುಮಾರ್ ಬೆಳಾಲು ಗುತ್ತು, ಅಸ್ರಣ್ಣ ಗಿರೀಶ್ ಬಾರಿತ್ತಾಯ ಪಾರಳ, ವ್ಯವಸ್ಥಾಪನ ಸಮಿತಿಯ ಉಪಾಧ್ಯಕ್ಷೆ ಮಮತಾ ದಿನೇಶ್ ಪೂಜಾರಿ ಉಪ್ಪಾರು, ಮಹಿಳಾ ಸಮಿತಿಯ ಅಧ್ಯಕ್ಷೆ ಹೇಮಲತಾ ಶ್ರೀನಿವಾಸ ಗೌಡ, ಶ್ರೀ ಅನಂತೇಶ್ವರ ಭಜನಾ ಮಂಡಳಿ ಅಧ್ಯಕ್ಷ ಗುರುರಾಜ ಓಡಿಪ್ರೊಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವ್ಯವಸ್ಥಾಪನ ಸಮಿತಿಯ ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್ ಕೇರ್ಮುಣ್ಣಾಯ ಸ್ವಾಗತಿಸಿ, ಕಾರ್ಯದರ್ಶಿ ಬೆಳಾಲು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸತೀಶ್ ಎಳ್ಳುಗದ್ದೆ ವಂದಿಸಿದರು. ಕಾರ್ಯಕ್ರಮದ ಮೊದಲು ದುರ್ಗಾ ಪೂಜೆ,ಶ್ರೀ ಅನಂತ ಪದ್ಮನಾಭ ದೇವರಿಗೆ ಪ್ರಸನ್ನ ರಂಗ ಪೂಜೆ ,ಶ್ರೀ ಅನಂತ ಪದ್ಮನಾಭ ಮಹಿಳಾ ಕುಣಿತ ಭಜನಾ ತಂಡದವರಿಂದ ಭಜನೆ ನಡೆಯಿತು.

ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ನಂತರ ಪರಿವಾರ ದೈವಗಳಾದ ರಕ್ತೇಶ್ವರಿ, ಭೈರವ, ಕಲ್ಲುರ್ಟಿ, ಪಂಜುರ್ಲಿ ದೈವಗಳಿಗೆ ನೃತ್ಯ ಬಲಿ ಸೇವೆ ನಡೆಯಿತು. ಕಾರ್ಯಕ್ರಮದ ಯಶಸ್ವಿಗೆ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಭಜನಾ ಮಂಡಳಿ ಸದಸ್ಯರು, ಮಹಿಳಾ ಸಮಿತಿ ಸದಸ್ಯರು,14 ಬೈಲುವಾರು ಸಮಿತಿಯ ಸಂಚಾಲಕರು, ಅರ್ಚಕ ವೃಂದದವರು, ಅನ್ನದಾನ ಮತ್ತು ಹೂವಿನ ಅಲಂಕಾರ ಸೇವಾಕರ್ತರು ಊರ ಪರಊರ ಭಕ್ತರು ಭಾಗವಹಿಸಿ ಸಹಕರಿಸಿdaru

LEAVE A REPLY

Please enter your comment!
Please enter your name here