ಓಡಿಲ್ನಾಳ: ಶ್ರೀ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆ ಡಿ.26 ರಂದು ಜರುಗಿತು. ಶ್ರೀ ಕ್ಷೇತ್ರ ಕರಿಂಜೆ ಓಂ ಶ್ರೀ ಶಕ್ತಿ ಗುರುಮಠ ರಾಘವೇಂದ್ರ ಪೀಠದ ಶ್ರೀ ಶ್ರೀ ಮುಕ್ತಾನಂದ ಸ್ವಾಮಿಜಿ ಮೂಡಬಿದ್ರೆ ಆಶೀರ್ವಚನ ನೀಡಿದರು. ಕುವೆಟ್ಟು ಗ್ರಾ ಪಂ ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಸಿದ್ಧ ವಾಗ್ಮಿ ಪ್ರಕಾಶ್ ಮಲ್ಪೆ ಧಾರ್ಮಿಕ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಗೇರುಕಟ್ಟೆ ಕಳಿಯ ಪ್ರಾಥಮಿಕ ಕ್ರಷಿ ಪತ್ತಿನ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷರು ವಸಂತ ಮಜಲು, ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ನಿರ್ದೇಶಕರು ಪದ್ಮನಾಭ ಶೆಟ್ಟಿ ಅರ್ಕಜೆ , ಉಡುಪಿ ಸಿವಿಲ್ ಕಂಟ್ರಾಕ್ಟರ್ ಕೊರಗಪ್ಪ ಕುಲಾಲ್ , ಶ್ರೀ ನಾಗಬ್ರಹ್ಮ ದೇವಸ್ಥಾನ ಪಣೆಜಾಲು ಐಸಿರಿ ಅಧ್ಯಕ್ಷರು ಆನಂದ ಶೆಟ್ಟಿ , ಮಡಂತ್ಯಾರು ಜೆ ಸಿ ಐ ಅಧ್ಯಕ್ಷರು ಅಶೋಕ್ ಗುಂಡಿಯಲ್ಕೆ, ಉದ್ಯಮಿ, ದುರ್ಗಾ ವುಡ್ ಇಂಡಸ್ಟ್ರೀಸ್ ಮಡಂತ್ಯಾರು ಉಮೇಶ್ ಶೆಟ್ಟಿ, ಕುವೆಟ್ಟು ಗ್ರಾಮ ಪಂ ಸದಸ್ಯರು ವಿಜಯಲಕ್ಷ್ಮಿ ರೇಷ್ಮೆರೋಡು, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಧ್ಯಕ್ಷ ರಾಜ್ ಪ್ರಕಾಶ್ ಪಡ್ಡೈಲು, ಪ್ರಧಾನ ಕಾರ್ಯದರ್ಶಿ ದರಣೇಂದ್ರ ಜೈನ್, ಕೋಶಾಧಿಕಾರಿ ಮನೋಹರ್ ಪಿ ಸಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ಜಯಕರ ಶೆಟ್ಟಿ ಸ್ವಾಗತಿಸಿ, ಸಂತೋಷ್ ಕುಲಾಲ್ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸುರೇಶ್ ಬಟ್ಟೆಮಾರ್ ವಂದಸಿದರು. ಸಾಯಂಕಾಲ ಓಡೀಲು ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಮಕ್ಕಳ ಕುಣಿತ ಭಜನೆ, ಸ ಹಿ ಪ್ರಾಥಮಿಕ ಶಾಲೆ ಗುರುವಾಯನಕೆರೆ ಹಾಗೂ ಅಂಗನವಾಡಿ ಶಕ್ತಿ ಕೇಂದ್ರ ಶಕ್ತಿನಗರ ಇಲ್ಲಿಯ ಮಕ್ಕಳಿಂದ ಸಾಂಸ್ಕೃತಿಕ ಸಿಂಚನ ಹಾಗೂ ರಾಷ್ಟ್ರ ದೇವೋಭವ ಖ್ಯಾತಿಯ ಮಂಗಳೂರು ಸನಾತನ ನಾಟ್ಯಲಾಯ ಕರ್ನಾಟಕ ಕಲಾಶ್ರೀ ವಿಧುಷಿ ಶಾರಾದಮಣಿ ಶೇಖರ್ ಹಾಗೂ ವಿದುಷಿ ಶ್ರೀಲತಾ ನಾಗರಾಜ್ ನ್ರತ್ಯ ನಿರ್ದೇಶನದ ಪ್ರಖರ ವಾಗ್ಮಿ ಆದರ್ಶ ಗೋಕುಲೆ ಕಾರ್ಕಳ ನಿರೂಪಣೆಯ ರಾಷ್ಟ್ರ ಮತ್ತು ಧರ್ಮಜಾಗ್ರತಿಯ ನೃತ್ಯ ವೈವಿಧ್ಯ ಪುಣ್ಯಭೂಮಿ ಭಾರತ ಕಾರ್ಯಕ್ರಮ ಜರುಗಿತು.