ಹೆಲ್ಪಿಂಗ್ ಹ್ಯಾಂಡ್ಸ್ ವತಿಯಿಂದ ಅಂಡೆತಡ್ಕ ಶಾಲೆಗೆ ಡೆಸ್ಕ್ ಗಳ ಕೊಡುಗೆ

0

ಇಳಂತಿಲ: ಹೆಲ್ಪಿಂಗ್ ಹ್ಯಾಂಡ್ಸ್ ಗೆಳೆಯರ ತಂಡ ಶಾಲೆಗೆ ದಾನವಾಗಿ ನೀಡಿದ ರೂ35000/- ಧನ ಸಹಾಯದೊಂದಿಗೆ ನಿರ್ಮಿಸಲಾದ ಹತ್ತು ಡೆಸ್ಕ್ ಗಳ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅಂಡೆತಡ್ಕ, ಇಳಂತಿಲ ಇಲ್ಲಿ ಜರುಗಿತು.

ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯರಾದ ಕೃಷ್ಣಪ್ಪ ಪೂಜಾರಿ ಇವರು ಕೊಡುಗೆ ನೀಡಿದ ಗೆಳೆಯರ ತಂಡಕ್ಕೆ ಶುಭ ಹಾರೈಸಿದರು. ಸಭೆಯಲ್ಲಿ ಮಾರ್ಗದರ್ಶಕರಾಗಿ ಆಗಮಿಸಿದ್ದ ಶಿಕ್ಷಕರಾದ ಧನಂಜಯ, ದಾನಿಗಳಾದ ಜಯಕುಮಾರ್ ಪೂಜಾರಿ, ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಸತೀಶ್, ಉಪಾಧ್ಯಕ್ಷೆ ನಯನಾ, ಆರೋಗ್ಯ ಕಾರ್ಯಕರ್ತೆ ಮಧುಶ್ರೀ, ಎಸ್. ಡಿ. ಎಂ. ಸಿ ಸದಸ್ಯರು, ಪೋಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here