ಹೋಲಿ ರೆಡಿಮರ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ

0

ಬೆಳ್ತಂಗಡಿ : ಹೋಲಿ ರೆಡಿಮಾರ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭವು ಡಿ.20ರಂದು ಹೋಲಿ ರೆಡಿಮಾರ್ ಚರ್ಚ್ ಮೈದಾನದಲ್ಲಿ ಜರುಗಿತು.

ಮುಖ್ಯ ಅಥಿತಿಗಳಾಗಿ ಶಾಲಾ ಸಂಚಾಲಕರಾದ ವ. ಫಾ. ಜೋಸೆಫ್ ಕರ್ಡೋಜ,ಲೊರೆಟ್ಟೋ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ವ. ಫಾ. ಜೈಸನ್ ವಿಜಯ್ ಮೋನಿಸ್, ಹೊಲಿ ರೆಡಿಮಾರ್ ಚರ್ಚ್ ನ ದಿಯೋಕೊನ್ ಜೋಯಲ್ ಪ್ರೀತಮ್ ರೇಗೊ, ಚರ್ಚ್ ಪಾಲನಾ ಪರಿಷತ್ ಕಾರ್ಯದರ್ಶಿ ಶ್ರೀಮತಿ ಪೌಲಿನ್ ರೇಗೊ, ಚರ್ಚ್ ಪಾಲನಾ ಪರಿಷತ್ ಸಂಯೋಜಕ ವಿನ್ಸೆಂಟ್ ಟಿ. ಡಿಸೋಜಾ, ಶಾಲಾ ಶಿಕ್ಷಕರ ರಕ್ಷಕರ ಸಂಘದ ಉಪಾಧ್ಯಕ್ಷ ಬೋಣವೆಂಚರ್ ಪಿಂಟೊ,ಚರ್ಚ್ ಪಾಲನಾ ಪರಿಷತ್ ನ ಮಾಜಿ ಉಪಾಧ್ಯಕ್ಷ ಎಲೋಸಿಯಸ್ ಲೋಬೊ,ಚರ್ಚ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೆನ್ನಿ ವಾಸ್, ಶಾಲಾ ಮುಖ್ಯೋಪಾಧ್ಯಾಯ ವ. ಫಾ. ಕ್ಲಿಫರ್ಡ್ ಸೈಮನ್ ಪಿಂಟೊ, ಶಿಕ್ಷಕ ಶಿಕ್ಷಕೇತರ ವೃಂದ ಪೋಷಕರು, ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಅಭಿಮಾನಿ ಬಳಗ ಉಪಸ್ಥಿತರಿದ್ದರು.

ಸಹ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಬ್ಲೆಂಡಿನ್ ವರದಿ ಮಂಡಿಸಿದರು, ಮುಖ್ಯೋಪಾಧ್ಯಯ ವ. ಫಾ. ಕ್ಲಿಫರ್ಡ್ ಸೈಮನ್ ಪಿಂಟೊ ಸ್ವಾಗತಿಸಿದರು, ಶಿಕ್ಷಕಿ ಶ್ರೀಮತಿ ದಿವ್ಯ ವಂದಿಸಿ, ಶಿಕ್ಷಕಿ ಶ್ರೀಮತಿ ಪ್ರೀತ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾಕೂಟ ಹಾಗು ಶೈಕ್ಷಣಿಕ ಸಾಧನೆ ಗೈದ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಏರ್ಪಡಿಸಿದ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

LEAVE A REPLY

Please enter your comment!
Please enter your name here