ಪದ್ಮುಂಜ ಪ್ರೌಢ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ

0

ಪದ್ಮುಂಜ :ಇಲ್ಲಿಯ ಸರಕಾರಿ ಪ್ರೌಢ ಶಾಲೆಯಲ್ಲಿ ವಾರ್ಷಿಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಡಿ.16 ರಂದು ಕಣಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಾಯತ್ರಿಯವರ ಅಧ್ಯಕ್ಷತೆಯಲ್ಲಿ ಜರಗಿತು.

ಉದ್ಯಮಿ ಆಹಾರೋಧ್ಯಮ ರೈತ ಬಂದು ಶಿವ ಶಂಕರ್ ನಾಯಕ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶುಭಹಾರೈಸಿದರು. ಮುಖ್ಯೋಪಾಧ್ಯಾಯರಾದ ಸುಮತಿ ಯವರು ಪ್ರಾಸ್ತಾವಿಕ ಭಾಷಣ ಮಾಡಿದರು. ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಶ್ರೀಲತಾ, ಸದಸ್ಯ ಯುವರಾಜ ಇಂದ್ರ ಪಂ ಸದಸ್ಯ ಸೀತಾರಾಮ ಮಡಿವಾಳ, ನಾರಾಯಣ ಗೌಡ ಉಪಸ್ಥಿತರಿದ್ದರು.

ಬಂದಾರು ಶಾಲೆಯ ದೈಹಿಕ ಶಿಕ್ಷಕ ಪ್ರಶಾಂತ್ ಹಾಗೂ ಸದಾಶಿವ ಜೋಗಿಯವರನ್ನು ಸನ್ಮಾನಿಸಲಾಯ್ತು. ಶಿಕ್ಷಕಿ ಆಶಾಲತಾ ರವರು ಸನ್ಮಾನಿತರ ವ್ಯಕ್ತಿ ಪರಿಚಯ ಮಾಡಿದರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿಜೇತರ ಪಟ್ಟಿಯನ್ನು ಶಿಕ್ಷಕಿಯರಾದ ಸವಿತಾ ಸೌಮ್ಯ, ರೇಣುಕಾ, ಅನಂತಕೃಷ್ಣರವರು ಓದಿ ಹೇಳಿದರು. ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಸಲಾಯಿತು.

ದೈಹಿಕ ಶಿಕ್ಷಕ ವಿನಯ ಕುಮಾರ್ ರವರು ಸ್ವಾಗತಿಸಿದರು. ಬಿ ಎಡ್ ತರಬೇತಿ ವಿಧ್ಯಾರ್ಥಿಗಳಾದ ನಿಶ್ಮಿತ, ಅಕ್ಷತ, ಮಮತಾರವರು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಸದಾನಂದ ಬಿರಾದಾರ್ ರವರು ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here