ಕರಿಮಣೇಲು:ದೇಲಂಪುರಿ ಬ್ರಹ್ಮಕಲಶ, ಭರದಿಂದ ಸಾಗುತ್ತಿದೆ ಜೀರ್ಣೋದ್ಧಾರ ಕೆಲಸ

0

ಕರಿಮಣೇಲು:ಶ್ರೀ ಕ್ಷೇತ್ರ ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕವು ಡಿ.24 ರಿಂದ 30 ರವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.

ಸುಮಾರು 500 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಶ್ರೀ ಕ್ಷೇತ್ರದಲ್ಲಿ ಮೂಲದೇವರಲ್ಲಿ ಈಶ್ವರ,ಗಣಪತಿ,ದುರ್ಗೆಯ ತ್ರಿಶಕ್ತಿಗಳು ಒಳಗೊಂಡಿವೆ.ಪ್ರಸ್ತುತ ಶ್ರೀ ದೇವರ ಗರ್ಭಗುಡಿ, ನಂದಿಮಂಟಪ ಹಾಗೂ ಮುಖಮಂಟಪವನ್ನು ಶಿಲಾಮಯವಾಗಿ ನವೀಕರಿಸಲಾಗಿದೆ.

ಅನಾದಿ ಕಾಲದಿಂದಲೂ ವರ್ಷಂಪ್ರತಿ ಜನವರಿ ತಿಂಗಳಲ್ಲಿ ವರ್ಷಾವಧಿ ಜಾತ್ರೋತ್ಸವ ನಡೆಯುತ್ತಾ ಬಂದಿರುವುದು ಸಂಪ್ರದಾಯ.ಮೂರು ದಿನಗಳ ಜಾತ್ರೋತ್ಸವ ಆಚರಣೆಗಳು ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ.

ಇಗಾಗಲೇ ಬ್ರಹ್ಮಕಲಶೋತ್ಸವದ ಪೂರ್ವಾಸಿದ್ದತೆ ತಯಾರಿಗಳು ಸಾಗುತ್ತಿದೆ.ಊರ ಪರವೂರ ಭಕ್ತರು ಪ್ರತಿದಿನ ಶ್ರಮದಾನದ ಮೂಲಕ ಕರಸೇವೆ ಮಾಡುತ್ತಿದ್ದಾರೆ. ದೇವಳದ ಅಭಿವೃದ್ಧಿ ದೃಷ್ಟಿಯಿಂದ ಹಲವಾರು ಕೆಲಸಗಳು ಜನರ ಸಹಕಾರ ಹಾಗೂ ಶ್ರಮದಾನದಿಂದಲೇ ನಡೆದಿದೆ ಎನ್ನುತ್ತಾರೆ ದೇವಳದ ಆಡಳಿತ ಮಂಡಳಿ ಸದಸ್ಯರು.

ಬ್ರಹ್ಮಕಲಶೋತ್ಸವಕ್ಕೆ ಊರ ಹಾಗೂ ಪರವೂರ ಸಾವಿರಾರು ಭಕ್ತರು ಆಗಮಿಸುತ್ತಿದ್ದು ಇಗಾಗಲೇ ವೇದಿಕೆ, ಅನ್ನಛತ್ರ,ಮಂಟಪ, ಅಲಂಲಕಾರ, ಚಪ್ಪರದ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದೆ.

ದೇವಳದ ಜೀರ್ಣೋದ್ದಾರ

ಶಿಲಾಮಯ ಗರ್ಭಗುಡಿ ನಿರ್ಮಾಣ,ನಂದಿ ಮಂಟಪ ನಿರ್ಮಾಣ, ಸಭಾಮಂಟಪ ನಿರ್ಮಾಣ,ಪಾಕಶಾಲೆ ನಿರ್ಮಾಣ,ಶ್ರೀ ದೇವಳದ ಮೂರು ಬದಿಗೆ ತಡೆಗೋಡೆ ನಿರ್ಮಾಣ,ಶ್ರೀ ದೇವಳದ ಗೋಪುರಕ್ಕೆ ಹಾಸುಕಲ್ಲು ಅಳವಡಿಕೆ,ಶ್ರೀ ದೇವಳದ ಗೋಪುರಕ್ಕೆ ಗ್ರಾನೈಟ್ ಅಳವಡಿಕೆ,ಶ್ರೀ ದೇವಳದ ಮುಖ ಮಂಟಪ ರಚನೆ,ಭದ್ರತಾ ಕೊಠಡಿ ನಿರ್ಮಾಣ,ಶೌಚಾಲಯ ಮತ್ತು ಸ್ನಾನಗೃಹ ನಿರ್ಮಾಣ,

LEAVE A REPLY

Please enter your comment!
Please enter your name here