ಬೆಳ್ತಂಗಡಿ: ಮಚ್ಚಿನ ಗ್ರಾಮದ ಸತ್ಯ ಚಾವಡಿ ತರವಾಡು ಮಾನ್ಯ ಇದರ ಜೀರ್ಣೊದ್ದಾರಕ್ಕೆ ಶಿಲಾನ್ಯಾಸ ಕಾರ್ಯಕ್ರಮವು ನಡೆಯಿತು.
ಶಾಸಕ ಹರೀಶ್ ಪೂಂಜರವರು ತರವಾಡು ಮನೆಯ ಶಿಲನ್ಯಾಸ ನೆರವೇರಿಸಿ ಮಾತಾನಾಡಿ ತರವಾಡಿನ ಅಭಿವೃದ್ಧಿ ದೃಷ್ಟಿಯಿಂದ ಇಗಾಗಲೇ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಜೀರ್ಣೋದ್ದಾರ ಮತ್ತು ಬ್ರಹ್ಮ ಕಲಶೋತ್ಸವಕ್ಕೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಚ್ಚಿನ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ, ಸದಸ್ಯರಾದ ಪ್ರಮೋದ್ , ಜಯನಂದ ಕಲ್ಲಾಪು, ರುಕೇಶ್ ಮುಂದಿಲ, ಅನಿಲ್ ಪಾಲೇದು, ಹೇಮಲತಾ, ಸೋಮವತಿ ಹಾಗೂ ತರವಾಡಿನ ಹಿರಿಯರಾದ ಸಂಜೀವ ಪೂಜಾರಿ ಮಾನ್ಯ, ಜನಾರ್ಧನ ಪೂಜಾರಿ ಕಡ್ತಿಲ, ದಿನಕರ ಪೂಜಾರಿ ಕಡ್ತಿಲ, ಬಾಬು ಪೂಜಾರಿ ಕಡ್ತಿಲ, ಗುಣಾಕಾರ ಪೂಜಾರಿ ಕಡ್ತಿಲ, ಕೃಷ್ಣಪ್ಪ ಪೂಜಾರಿ ಮಾನ್ಯ, ವಿನಯ ಜೆಂಕ್ಯಾರ್, ಚಂದ್ರ ಶೇಖರ್ ಚಿಪುಲ್ ಕೋಟೆ, ರಾಜೇಶ್ ಪೂಜಾರಿ ಮಂಗಳೂರು,ಯೋಗಿಶ್ ಪೂಜಾರಿ ಕಡ್ತಿಲ, ಪ್ರಸಾದ್ ಕಡ್ತಿಲ, ಮಹೇಶ್ ಕೋಟ್ಯಾನ್ ಜೆಂಕ್ಯಾರ್,ವಿವಿಧ ಸಮಿತಿಯ ಅಧ್ಯಕ್ಷ, ಕಾರ್ಯದರ್ಶಿಯವರು, ಕುಟುಂಬಸ್ಥರು, ಬಂಧುಗಳು, ಊರವರು ಉಪಸ್ಥಿತರಿದ್ದರು.