ಬೆಳಾಲು : ಓಡಿಲ್ನಾಳ ಗ್ರಾಮದ ಮೈರಲ್ಕೆಕಿರಾತ ಮೂರ್ತಿ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಿ.25 ರಿಂದ ಪ್ರಾರಂಭವಾಗುವ ಬ್ರಹ್ಮಕಲಶೋತ್ಸವದ ಕಳಸ ಕೂಪನ್ ಮತ್ತು ವಿಜ್ಞಾನಪನಾ ಪತ್ರ ಬಿಡುಗಡೆ ಡಿ.11ರಂದು ಬೆಳಾಲು ಶ್ರೀ ಮಾಯ ಮಹಾದೇವ ದೇವಸ್ಥಾನದಲ್ಲಿ ನಡೆಯಿತು.
ಮೈರಲ್ಕೆ ಧರ್ಮೋತ್ತನಾ ಟ್ರಸ್ಟ್ ಅಧ್ಯಕ್ಷ ವೃಷಭ ಅರಿಗ ರವರು ಕಳಸ ಕೂಪನ್ ಮತ್ತು ಮನವಿ ಪತ್ರ ಮಾಯಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಚ್. ಪದ್ಮ ಗೌಡ ರಿಗೆ ಹಸ್ತಾಂತರ ಮಾಡಿ ಮಾತನಾಡಿದರು. ಪದ್ಮ ಗೌಡರು ಮಾತನಾಡಿ ಕಳೆದ 75 ವರ್ಷಗಳಿಂದ ಇಲ್ಲಿ ಪೂಜಿಸುತ್ತಾ ಬರುತ್ತಿದ್ದ ದೇವರನ್ನು ಮೂಲ ಸ್ಥಾನಕ್ಕೆ ಕಳುಹಿಸುವ ಕಾರ್ಯ ಡಿ.22 ರಂದು ನಡೆಯಲಿದೆ. ಎಲ್ಲಾ ಭಕ್ತರು ಆಗಮಿಸಿ ಅಲ್ಲಿ ನಡೆಯುವ ಪ್ರತಿಷ್ಠಾಪನೆಯಲ್ಲಿ ಭಾಗವಹಿಸಿ ಸಹಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿಂದೂ ಜಾಗರಣ ವೇದಿಕೆಯ ಮಾತೃ ಸುರಕ್ಷಾ ಪ್ರಮುಖ್ ಪಿ. ಗಣರಾಜ್ ಭಟ್, ಸನಾತನ ಸಂಸ್ಥೆಯ ಆನಂದ ಗೌಡ, ಹಿಂದೂ ಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಧಿಕಾರಿ ಪವಿತ್ರ ಕುಡ್ವ, ಮಾಯಾ ದೇವಸ್ಥಾನದ ವ್ಯವಸ್ಥಾಪಕ ಶೇಖರ ಗೌಡ ಕೊಲ್ಲಿಮಾರು, ಮೈರಲ್ಕೆ ದೇವಸ್ಥಾನ ದ ಕಳಸ ಸಮಿತಿ ಸಂಚಾಲಕ ಸನ್ಮತಿ ಜೈನ್,ಮಾಯಾ ಭಜನಾ ಮಂಡಳಿ ಅಧ್ಯಕ್ಷ ಕೃಷ್ಣಪ್ಪ ಗೌಡ, ಕಾರ್ಯದರ್ಶಿ ಹರೀಶ್ ಆಚಾರ್ಯ, ಸದಸ್ಯರು, ವ್ಯವಸ್ಥಾಪನಾ ಸಮಿತಿ ಸದಸ್ಯರು, ಊರ ಭಕ್ತರು ಹಾಜರಿದ್ದರು.