ಸುದ್ದಿ ದೀಪಾವಳಿ ವಿಶೇಷಾಂಕ ಅದೃಷ್ಟವಂತ ಓದುಗರ ಆಯ್ಕೆ: ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

0

ಬೆಳ್ತಂಗಡಿ: ಸುದ್ದಿಬಿಡುಗಡೆ ಪತ್ರಿಕೆ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷ ದೀಪಾವಳಿ ವಿಶೇಷಾಂಕ-2022 ರಲ್ಲಿ ಓದುಗರಿಗೆ ಆಯೋಜಿಸಲಾದ 25 ಮಂದಿ ಅದೃಷ್ಟವಂತ ಓದುಗರಿಗೆ ತಲಾ ರೂ.1 ಸಾವಿರದಂತೆ ರೂ.25 ಸಾವಿರ ನಗದು ಬಹುಮಾನ ನೀಡುವ ಕೂಪನ್‌ಗಳ ಆಯ್ಕೆ ಮತ್ತು ವಿಶೇಷಾಂಕದಲ್ಲಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಡಿ.12 ರಂದು ಬೆಳ್ತಂಗಡಿ ಸುದ್ದಿ ಬಿಡುಗಡೆ ಕಛೇರಿಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಬಿ ಶಿರ್ಲಾಲು ಬಹುಮಾನದ ಕೂಪನ್‌ಗಳ ಆಯ್ಕೆಯನ್ನು ನಡೆಸಿ, ಬಳಿಕ ದೀಪಾವಳಿ ವಿಶೇಷಾಂಕದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಿ, ಶುಭ ಹಾರೈಸಿದರು.

ಬೆಳ್ತಂಗಡಿ ಸುದ್ದಿ ಚಾನೆಲ್ ವಿಬಾಗದ ತಾಂತ್ರಿಕ ಮುಖ್ಯಸ್ಥ ಪ್ರವೀಣ್ ಭಾಗವಹಿಸಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಶುಭಹಾರೈಸಿದರು. ಸುದ್ದಿ ಕಚೇರಿ ವ್ಯವಸ್ಥಾಪಕ ಮಂಜುನಾಥ ರೈ ಸ್ವಾಗತಿಸಿದರು. ದೀಪಾವಳಿ ವಿಶೇಷಾಂಕದ ಕಾರ್ಯ ನಿರ್ವಾಹಕ ಜಾರಪ್ಪ ಪೂಜಾರಿ ವಂದಿಸಿದರು. ವರದಿಗಾರ ಹೆರಾಲ್ಡ್ ಪಿಂಟೋ ವಿಜೇತರ ಪಟ್ಟಿ ವಾಚಿಸಿದರು. ಸಂತೋಷ್ ಪಿ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ವರದಿಗಾರರಾದ ತಿಮ್ಮಪ್ಪ ಗೌಡ, ಪಿ.ಹೆಚ್. ಈಶ್ವರ್ ಗೌಡ, ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಆನಂದ ಗೌಡ ಹಾಗೂ ಸುದ್ದಿ ಪತ್ರಿಕೆ ಮತ್ತು ಸುದ್ದಿ ಚಾನೆಲ್ ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು. ದೀಪಾವಳಿ ವಿಶೇಷಾಂಕದ ವಿವಿಧ ಸ್ಪರ್ಧೆಗಳ ವಿಜೇತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಬ್ಬರು ಸ್ಪರ್ಧಾ ವಿಜೇತರಾದ ಅಂಕಿತ ಹೆಬ್ಬಾರ್ ಮತ್ತು ಆಶಾ ಆಡೂರು ಅನಿಸಿಕೆ ವ್ಯಕ್ತಪಡಿಸಿ ಸುದ್ದಿ ಬಿಡುಗಡೆ ಪತ್ರಿಕೆ ಹಾಗೂ ದೀಪಾವಳಿ ಸಂಚಿಕೆಯ ಮೂಲಕ ನಮ್ಮಂತಹ ಬರಹಗಾರರನ್ನು ಗುರುತಿಸುವ ಕಾರ್ಯವನ್ನು ಮಾಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕೂಪನ್ ವಿಜೇತರು:

ಹರ್ಷಿಲ್ ನೆರಿಯ, ಕೆ ರಾಮನಾಯಕ ಕಾಯರ್ಪಾಡಿ ಇಳಂತಿಲ, ಹರಿಣಾಕ್ಷಿ ಆಲಂಗಾರು ಪಟ್ರಮೆ, ಸ್ವಸ್ಥಿಕ್ ಲುಮಿನರಸ್ ಪಡಂಗಡಿ, ಸಂಪತ್ ಜೈನ್ ನೂರಾಳ್ ಬೆಟ್ಟು ಹೊಸ್ಮಾರು, ಶರತ್ ಪೂಜಾರಿ ಮಂಗಳೂರು, ಸರೋಜ ಉಜಿರೆ, ಪ್ರಿಯರ್ಶಿ ದಯಾನಂದ ಕೈಪ್ಲೋಡಿ ಲಾಯಿಲ, ಅರುಣ ಪ್ರಶಾಂತ್ ಕಡಿರುದ್ಯಾವರ , ಇಂಚರ ಇಶಾನ್ ಲಾಯಿಲ, ನೋಣಯ್ಯ ಪೂಜಾರಿ ಕುಕ್ಕಾವು ಮಿತ್ತಬಾಗಿಲು, ಚಿತ್ತರಂಜನ್ ಮಿಲಿಟ್ ಕೆಫೆ ಸಿರಿ, ಪ್ರಜ್ವಲ್ ನಾಯಕ್ ಬೆಳ್ತಂಗಡಿ, ಯೋಗಿಶ್ ನಿಟ್ಟಡ್ಕ, ಮೈಜಯಂತಿಮಾಲ ನೇಮಿರಾಜ್ ಜೈನ್ ಉಜಿರೆ, ತ್ರಿವೇಣಿ ಜಯಾನಂದ ಅಂಕಾಜೆ ಲಾಯಿಲ, ಶಾನ್ವಿ ಕೆ ವಿನಯ ಕೊಯ್ಯೂರು, ಅನ್ವಿತಾ ಟಿ ಮಜಲು ತೋಟತ್ತಾಡಿ, ರಾಜೇಂದ್ರ ಜೈನ್ ಮುಗುಳಿ, ಶಾಜಿದ ಕಾಜೂರು, ಸುರೇಶ್ ನಾಯ್ಕ ಉರೆಸಾಗು ಮಾಲಾಡಿ, ಸಂತೋಷ್ ಜೈನ್ ವೀರನಿವಾಸ ಬೆಳ್ತಂಗಡಿ, ಅಶ್ವತ್ ಕೋಟ್ಯಾನ್ ಅಮೈ ಕುಂಡದಬೆಟ್ಟು, ಪಿ ಆನಂದ ಗೌಡ ಹೋಟೆಲ್ ದಿಡುಪೆ, ಶರ್ವಿನ್ ಲೋಬೋ ಬೆಳ್ತಂಗಡಿ.

LEAVE A REPLY

Please enter your comment!
Please enter your name here