ವಾಣಿ ಶಿಕ್ಷಣ ಸಂಸ್ಥೆಯಲ್ಲಿ ರಂಗುರಂಗಿತ ಸಾಂಸ್ಕೃತಿಕ ಉತ್ಸವ

0

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಆಡಳಿತಕ್ಕೆ ಒಳಪಟ್ಟ ವಾಣಿ ಶಿಕ್ಷಣ ಸಂಸ್ಥೆ ಗಳ ವತಿಯಿಂದ ನಡೆದ ರಂಗುರಂಗಿತ ಸಾಂಸ್ಕೃತಿಕ ಉತ್ಸವದಲ್ಲಿ ಖ್ಯಾತ ವಾಗ್ಮಿ ಸುಧಾ ಬರಗೂರು ಅವರು ಹಾಸ್ಯ ರಸದೌತಣ ಉಣಬಡಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕ ಮಹಾಬಲ ಗೌಡ ಸನ್ಮಾನ ಪತ್ರ ವಾಚಿಸಿದರು.ಕಾಲೇಜಿನ ಉಪ ಪ್ರಾಂಶುಪಾಲ ವಿಷ್ಣುಪ್ರಕಾಶ್ .ಎಂ ಕಾರ್ಯಕ್ರಮ ನಿರ್ವಹಿಸಿದರು.

ವಿದುಷಿ ವಿದ್ಯಾಮನೋಜ್ ಅವರ ತಂಡದ ಸದಸ್ಯರಾದ ವಿದುಷಿ ಮಹಿಮಾ, ವಿದುಷಿ ಶ್ರೀದೇವಿ ಚೈತ್ರ ಕೊಪ್ಪ, ಕೃತಿ. ಆರ್, ಶರಣ್ಯ ಕೊಟ್ಟಾರಿ, ಸುರಕ್ಷಾ.ಯಸ್ ಇವರಿಂದ ಹರಿಸುಂದರ್ ನಂದ ಮುಕುಂದ,ಭಜನ್ ಮೈಲ್ ಕವಿಕೆ, ನವಿಲು ಕುಣಿತ,ಬೃಂದಾವನಿ ವೇಣು, ಅಭಂಗ್ ಗುಜರಾತಿ ಗರ್ಭ, ಸಾಂಪ್ರದಾಯಿಕ ನೃತ್ಯ ಮತ್ತು ಅಂಜನಾ.ಕೆ.ರಾವ್, ಕೀರ್ತನಾ ಕೆ.ರಾವ್, ನಮೃತಾ.ಯಂ, ನವಮಿ.ಯಂ, ಹರಿಪ್ರಿಯಾ, ರಕ್ಷಾ ಶೈಣೈ, ಈಶಾ ಇವರಿಂದ ಷಣ್ಮುಖ ಕೌತ್ವಂ,ಶಿವ ಸ್ತುತಿ, ಈಶನೇ ಮತ್ತು ಕೆಡ್ಡಸ ಬತ್ತ್ಂಡ್-ಜನಪದ ನೃತ್ಯ ವೈಭವ ನಡೆಯಿತು. ಈ ಕಾರ್ಯಕ್ರಮವನ್ನು ಉಪನ್ಯಾಸಕಿ ಅನುರಾಧ .ಕೆ.ರಾವ್ ನಿರ್ವಹಿಸಿದರು.

ನಂತರ ವಾಣಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಕೀಬೋರ್ಡ್, ಸಾಕ್ಸೋಫೋನ್,ತಬಲ ಜುಗಲ್ ಬಂದಿ,ನೃತ್ಯ ಪ್ರದರ್ಶನ ನಡೆಯಿತು.ಮತ್ತು ವಾಣಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಯಕ್ಷ ನೃತ್ಯ, ಫ್ಯೂಷನ್ ಡ್ಯಾನ್ಸ್, ತಯ್ಯಂ ಪ್ರದರ್ಶನಗೊಂಡಿತು.ಈ ಕಾರ್ಯ ಕ್ರಮವನ್ನು ಉಪನ್ಯಾಸಕ ಬೆಳಿಯಪ್ಪ. ಕೆ ನಿರ್ವಹಿಸಿದರು.
ಸಂಜೆ ಸಿಟಿ ಗಯ್ಸ್ ಡ್ಯಾನ್ಸ್ ಕ್ರಿವ್(ಕುಡ್ಲ ಕ್ವೀನ್ಸ್) ನೃತ್ಯ ತಂಡದಿಂದ ಆಕರ್ಷಕವಾದ ನೃತ್ಯ ಪ್ರದರ್ಶನ ನಡೆದಿದ್ದು, ತಂಡದ ಸದಸ್ಯೆ ಜೀ ಕನ್ನಡ ಡ್ಯಾನ್ಸ್ ಕರ್ನಾಟಕ ರಿಯಾಲಿಟಿ ಶೋ ದಲ್ಲಿ ಪ್ರಥಮ ಸ್ಥಾನ ಪಡೆದಿರುವ ಶಿಫಾಲಿ ಅವರಿಂದ ವಿಶೇಷ ಡ್ಯಾನ್ಸ್ ಶೋ ಅಲ್ಲದೆ ಸಂಗೀತ ರಸಮಂಜರಿ, ಮಿಮಿಕ್ರಿ ಕಾರ್ಯಕ್ರಮಗಳು ನಡೆಯಿತು.

ಉಪನ್ಯಾಸಕ ಹರ್ಷಿತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here