ಮಡಂತ್ಯಾರು : ಮಡಂತ್ಯಾರು ಪಾರೆಂಕಿ ಗ್ರಾಮದ, ಪಾರೆಂಕಿ ರಸ್ತೆಯ, ಪಶು ಆಸ್ಪತ್ರೆಯ ಎದುರು ಇರುವ ಅನುಗ್ರಹ ಕಾಂಪ್ಲೆಕ್ಸ್‌ನಲ್ಲಿ ಅನುಗ್ರಹ ಕ್ಲಿನಿಕ್, ಫ್ಯಾಮಿಲಿ ಹೆಲ್ತ್ ಸೆಂಟರ್ ಮತ್ತು ಶಾರದಾ ಕ್ಲಿನಿಕಲ್ ಲ್ಯಾಬೋರೇಟರಿಯ ಡಿ.11 ರಂದು ಶುಭಾರಂಭಗೊoಡಿದೆ.
ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಜೋಸೆಫ್ ಎನ್.ಎಂ ಉದ್ಘಾಟಿಸಿದರು. ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್‌ನ ಧರ್ಮಗುರು ವಂ.ಫಾ| ಬೇಸಿಲ್ ವಾಸ್ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿಯ ಉಪ ತಹಶೀಲ್ದಾರ್ ಶ್ರೀಮತಿ ಜಯ ಕೆ., ಮಡಂತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಪ್ರಭಾ; ಶಾರದಾ ಕ್ಲಿನಿಕಲ್ ಲ್ಯಾಬೋರೇಟರಿಯ ಆಡಳಿತಾಧಿಕಾರಿ ಶ್ರೀಮತಿ ಆಶಾ, ರೆಸಿಡೆನ್ಸಿಯಲ್ ವೈದ್ಯಾಧಿಕಾರಿ ಡಾ| ಅನುರೂಪ್ ಎಂ.ಬಿ.ಬಿ.ಎಸ್ ಎಂ.ಎಸ್, ಶಸ್ತ್ರಚಿಕಿತ್ಸಾ ತಜ್ಞ, ಮನೋರೋಗ ತಜ್ಞ ಡಾ| ಅವಿನಾಶ್ ಜ್ಯೋ., ಎಂ.ಬಿ.ಬಿ.ಎಸ್ ಎಂ.ಡಿ.ಡಿ.ಎನ್.ಬಿ, ಆರ್ಥೋಡಾಂಟಿಕ್ಸ್ ಮತ್ತು ಡೆಂಟೋಫೇಶಿಯಲ್ ಸರ್ಜರಿ ತಜ್ಞ ಡಾ| ಜಾನ್ಸಿರಾನಿ ಸಿ, ಬಿ.ಡಿ.ಎಸ್.ಎಂ.ಡಿ.ಎಸ್., ಡಾ| ಜಾಫಿ ಕಾನ್ಸ್‌ಟಿನ್ ಪಿ.ಎನ್., ಎಂ.ಬಿ.ಬಿ.ಎಸ್.ಎಂ.ಎಸ್ ಓಬಿಜಿ ಮೊದಲಾದವರು ಭಾಗವಹಿಸಿದ್ದರು. ಸೈಂಟ್ ಮೇರಿಸ್ ಕಾಲೇಜು ಶಿರ್ವದ ನಿವೃತ್ತ ಪ್ರಾಂಶುಪಾಲ ರಾಜನ್ ವಿ.ಎನ್, ಮತ್ತು ಸೇಕ್ರೆಡ್ ಹಾರ್ಟ್ ಕಾಲೇಜಿನ ವಾಣಿಜ್ಯ ವಿಭಾಗದ ನಿವೃತ್ತ ಎಚ್.ಒ.ಡಿ ಶ್ರೀಮತಿ ಆಗ್ರೇಸ್ ರೊಡ್ರಿಗಸ್ ಆಗಮಿಸಿದ ಅಥಿತಿ ಗಣ್ಯರನ್ನು ಸತ್ಕರಿಸಿದರು.