ಬೆಳ್ತಂಗಡಿ: ಇತ್ತೀಚಿಗೆ ಬಂಟ ಸಮುದಾಯದ ಯುವ ನ್ಯಾಯವಾದಿ ಕುಲದೀಪ್ ಶೆಟ್ಟಿ ಇವರ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಬೆಳ್ತಂಗಡಿ ತಾಲೂಕು ಬಂಟರ ಸಂಘದ ಅಧ್ಯಕ್ಷ ಜಯರಾಮ್ ಶೆಟ್ಟಿ ಮುಂಡಾಡಿಗುತ್ತು ತೀವ್ರವಾಗಿ ಖಂಡಿಸಿದ್ದಾರೆ.
ಸಮಾಜದ ನ್ಯಾಯಸಮ್ಮತ ವ್ಯವಸ್ಥೆಯಲ್ಲಿ ಪೋಲೀಸರ ಪಾಲು ಬಹು ದೊಡ್ಡದು. ಓರ್ವ ವಕೀಲರ ಮೇಲೆ ಪೂರ್ವಪರ ಯೋಚಿಸದೆ ಅಮಾನಿಯವಾಗಿ ಅರೆಬೆತ್ತಲೆಗೊಳಿಸಿ ಮಧ್ಯ ರಾತ್ರಿ ಬಾರ್ಯ ಮನೆಯಿಂದ ಕರೆದುಕೊಂಡು ಹೋಗಿರುವ ಕ್ರಮಕ್ಕೆ ತಾಲೂಕು ಬಂಟ ಸಮುದಾಯ ಖಂಡಿಸುತ್ತದೆ. ಪುಂಜಾಲಕಟ್ಟೆ ಆರಕ್ಷಕ ಉಪನಿರೀಕ್ಷಕರ ಅಮಾನವೀಯ ಕ್ರಮದ ಬಗ್ಗೆ ಸರಕಾರವು ತಕ್ಷಣ ತನಿಖೆ ನಡೆಸಿ ಸೇವೆಯಿಂದ ಅಮಾನತುಗೊಳಿಸಿ ಯುವ ನ್ಯಾಯವಾದಿ ಕುಲದೀಪ್ ಶೆಟ್ಟಿಯವರಿಗೆ ನ್ಯಾಯ ದೊರಕಿಸಿಕೊಟ್ಟು ಸಮಾಜದಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು ಎಂದು ಬಂಟರ ಸಂಘ ತಿಳಿಸಿದೆ.
ಬಂಟರ ಸಂಘದಲ್ಲಿ ನಡೆದ ಸಭೆಯಲ್ಲಿ ತಾಲೂಕು ಬಂಟರ ಸಂಘದ ಅಧ್ಯಕ್ಷ ಜಯರಾಮ್ ಶೆಟ್ಟಿ ಮುಂಡಾಡಿಗುತ್ತು, ಉಪಾಧ್ಯಕ್ಷ ವಿಠಲ ಶೆಟ್ಟಿ ಕೊಲ್ಲೊಟ್ಟು, ಕಾರ್ಯದರ್ಶಿ ಸಂಜೀವ ಶೆಟ್ಟಿ ಕುಂಟಿನಿ, ಕೋಶಾಧಿಕಾರಿ ಆನಂದ ಶೆಟ್ಟಿ ಐಸಿರಿ, ಮಾಜಿ ಅಧ್ಯಕ್ಷರುಗಳಾದ ಎಸ್. ಜಯರಾಮ ಶೆಟ್ಟಿ ಪಡಂಗಡಿ, ಜಯರಾಮ್ ಭಂಡಾರಿ ಧರ್ಮಸ್ಥಳ, ಯುವ ವಿಭಾಗದ ಅಧ್ಯಕ್ಷ ಸುಜಯ ಶೆಟ್ಟಿ ಗರ್ಡಾಡಿ, ಮಹಿಳಾ ವಿಭಾಗದ ಅಧ್ಯಕ್ಷೆ ಶೋಭಾ ವಿ. ಶೆಟ್ಟಿ, ನಿರ್ದೇಶಕರುಗಳಾದ ವಿಠಲ ಶೆಟ್ಟಿ ಉಜಿರೆ, ಜಯರಾಮ್ ಶೆಟ್ಟಿ ಗರ್ಡಾಡಿ,ವಸಂತ್ ಶೆಟ್ಟಿ ಶ್ರದ್ಧಾ, ನಾರಾಯಣ್ ಶೆಟ್ಟಿ ಬೆಳ್ತಂಗಡಿ, ಕಿರಣ್ ಕುಮಾರ್ ಶೆಟ್ಟಿ, ಪುಷ್ಪಾವತಿ ಆರ್. ಶೆಟ್ಟಿ ಉಜಿರೆ, ಪದ್ಮಲತಾ ರೈ, ಸಾರಿಕಾ ಶೆಟ್ಟಿ ಧರ್ಮಸ್ಥಳ, ಸೀತಾರಾಮ ಶೆಟ್ಟಿ ಉಜಿರೆ, ವಿಜಯ ಬಿ. ಶೆಟ್ಟಿ, ವನಿತಾ ಶೆಟ್ಟಿ, ಸದಾಶಿವ ಶೆಟ್ಟಿ ಬಳಂಜ ಮುಂತಾದವರು ಉಪಸ್ಥಿತರಿದ್ದರು.