ವೇಣೂರು: ನಿಟ್ಟಡೆ ಕುಂಭಶ್ರೀ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆಯಲ್ಲಿ 2022-23ನೇ ಸಾಲಿನ ಕುಂಭಶ್ರೀ ವೈಭವ ಆಚರಣೆಯ ಬಗ್ಗೆ ಪೂರ್ವಭಾವಿ ಸಭೆಯು ಡಿ. 9ರಂದು ಜರುಗಿತು.
ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕ ಗಿರೀಶ್ ಕೆ.ಎಚ್. ಅವರು ವಹಿಸಿ, 2023ರ ಜ.1ರಂದು ನಡೆಯಲಿರುವ ಕುಂಭಶ್ರೀ ವೈಭವ ಕಾರ್ಯಕ್ರಮಕ್ಕೆ ಸರ್ವರ ಸಹಕಾರ ಕೋರಿದರು. ಸಂಸ್ಥೆಯು ಎಸೆಸ್ಸೆಲ್ಸಿಯಲ್ಲಿ 9ನೇ ಬಾರಿಗೆ ಶೇ. 100 ಫಲಿತಾಂಶ ದಾಖಲಿಸಿದ್ದು, ಗುರುಕುಲ ಪದ್ದತಿಯ ಶಿಕ್ಷಣಕ್ಕೆ ಮಹತ್ವ ನೀಡಲಾಗುತ್ತಿದೆ. ಗುಣಮಟ್ಟದ ಶಿಕ್ಷಣದ ಜತೆಗೆ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಒತ್ತು ನೀಡಲಾಗುತ್ತಿದೆ ಎಂದರು.
ಕುಂಭಶ್ರೀ ಕಾಲೇಜು ವೈಭವ ಆಚರಣೆ ಸಮಿತಿಯ ಅಧ್ಯಕ್ಷ ಗುರುಪ್ರಸಾದ್ ಕಕ್ಕೆಪದವು ಮಾತನಾಡಿ, ಕಾರ್ಯಕ್ರಮದ ಯಶಸ್ವಿಯ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದರು. ಸಂಸ್ಥೆಯ ಆಡಳಿತಾಧಿಕಾರಿ ಅಶ್ವಿತ್ ಕುಲಾಲ್, ಪ್ರೌಢಶಾಲೆ ವಿಭಾಗದ ಕುಂಭಶ್ರೀ ವೈಭವ ಆಚರಣೆ ಸಮಿತಿಯ ಅಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ, ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳಾದ ಗಣೇಶ್ ಕುಂದರ್, ಗುಣವತಿ ಡಿ., ಪ್ರಶಾಂತ್, ಜಗದೀಶ್, ಪತ್ರಕರ್ತ ಪದ್ಮನಾಭ ಕುಲಾಲ್, ಕಾಲೇಜು ವಿಭಾಗದ ಪ್ರಾಚಾರ್ಯೆ ಓಮನಾ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕಿ ಶೋಭಾ ಎಲ್.ಎನ್. ರಾವ್ ಪ್ರಾರ್ಥಿಸಿ, ಪ್ರೌಢಶಾಲೆ ವಿಭಾಗದ ಮುಖ್ಯಶಿಕ್ಷಕಿ ಉಷಾ ಜಿ. ಸ್ವಾಗತಿಸಿ, ಶಿಕ್ಷಕಿ ಅಕ್ಷತಾ ವಂದಿಸಿದರು. ಶಿಕ್ಷಕಿ ಪವಿತ್ರಾ ನಿರೂಪಿಸಿದರು.