ಮಚ್ಚಿನ: ಸುದ್ದಿ ಕೃಷಿ ಮಾಹಿತಿ ಕೇಂದ್ರದ ವತಿಯಿಂದ ಸುದ್ದಿ ಮಾಹಿತಿ ಕಾರ್ಯಾಗಾರ ಕೃಷಿ ಖುಷಿ ಮಾಹಿತಿ ಕಾರ್ಯಕ್ರಮ ಡಿ.5 ರಂದು ಬಳ್ಳಮಂಜ ಸಮುದಾಯ ಭವನದಲ್ಲಿ ನಡೆಯಿತು.
ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರು ಸಂಪಾದಕ ಡಾ.ಯು.ಪಿ. ಶಿವಾನಂದ ಮಾತನಾಡುತ್ತಾ, ಕೃಷಿ ಮಾಹಿತಿ ಯೋಜನೆಯಿಂದ ಕೃಷಿಕರಿಗೆ ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಾರ್ಯಗಾರ ನಡೆಯುತ್ತಿದ್ದು, ಕೃಷಿಕರು ತಮ್ಮ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಬೆಲೆ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.ಕೃಷಿಕರು,ಸ್ವ ಉದ್ಯೋಗ, ಉದ್ಯಮ ಮಾಡುವವರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಮಚ್ಚಿನ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ,ಹಾಲಿ ಸದಸ್ಯ ಪ್ರಮೋದ್ ಕುಮಾರ್ ಮಾತನಾಡಿ ಸುದ್ದಿ ಬಿಡುಗಡೆ ಪತ್ರಿಕೆಯವರು ಕೃಷಿಕರ ಮನೆ ಮನೆಗೆ ಭೇಟಿ ನೀಡಿ ಕೃಷಿಕರಿಗೆ ಸಿಗುವ ಸವಲತ್ತು ಮತ್ತು ಮಾರುಕಟ್ಟೆ ಬಗ್ಗೆ ಸಲಹೆ ನೀಡುತ್ತಿರುವುದು ಮತ್ತು ಇಲಾಖೆ ಮಾಹಿತಿ ನೀಡುತ್ತಿರುವ ಮೂಲಕ ಕೃಷಿ ಕರೊಂದಿಗೆ ಕೈಜೋಡಿಸಿರುವುದು ಸಂತಸ ತಂದಿದೆ ಎಂದರು. ಬೆಳಾಲು ಸಹಕಾರಿ ಸಂಘದ ನಿರ್ದೇಶಕ ಸುಲೈಮಾನ್ ಮಿಶ್ರ ಕೃಷಿಯ ಬಗ್ಗೆ ಹಾಗೂ ತೋಟಗಾರಿಕಾ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಸುದ್ದಿ ಪ್ರತಿನಿಧಿ ಹರ್ಷ, ಸಂಜೀವಿನಿ ಘಟಕ ಸಂಚಾಲಕಿ ನಿಶಾಲತಾ, ಪ್ರತಿನಿಧಿ ಶ್ವೇತಾ ಹರ್ಷ ಉಪಸ್ಥಿತರಿದ್ದರು.
ಸುದ್ದಿ ಪತ್ರಿಕೆ ವರದಿಗಾರ ಹಾಗೂ ಸುದ್ದಿ ಕೃಷಿ ಮಾಹಿತಿ ಮುಖ್ಯಸ್ಥ ತುಕಾರಾಂ ವಾಸ್ತವಿಕವಾಗಿ ಮಾತನಾಡಿದರು. ಸುದ್ದಿ ಕೃಷಿ ಮಾಹಿತಿ ಬಗ್ಗೆ ಕೃಷಿಕರಿಗೆ ಸುದ್ದಿ ಪತ್ರಿಕೆ, ಚಾನಲ್ ವರದಿಗಾರ ಅಭಿಷೇಕ್ ಮಾಹಿತಿ ನೀಡಿದರು. ಸುದ್ದಿ ಪತ್ರಿಕೆಯ ವರದಿಗಾರ ಈಶ್ವರ್ ಪಿ ಹೆಚ್, ಸುದ್ದಿ ಸಿಬ್ಬಂದಿ ಕು.ದೀಪ್ತಿ,ಚಾಲಕ ದುರ್ಗಾ ಪ್ರಸಾದ್ ,ವಿವಿಧ ಬೇಕರಿ ಉತ್ಪನ್ನಗಳ ತಯಾರಕರು, ಪ್ರಗತಿಪರ ಕೃಷಿಕರು, ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಈ ವೇಳೆ ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ ಉತ್ತಮ ಸೇವೆಗೆ ಪುರಸ್ಕಾರ ಘೋಷಣೆಯನ್ನು ಮಾಡಲಾಯಿತು.
ಮಚ್ಚಿನ ವಲಯದ ಸುದ್ದಿ ಪ್ರತಿನಿಧಿ ಹರ್ಷ ಸ್ವಾಗತಿಸಿದರು. ಸುದ್ದಿ ಪತ್ರಿಕೆ ವರದಿಗಾರ ಹಾಗೂ ಪ್ರತಿನಿಧಿ ಮುಖ್ಯಸ್ಥ ಕೆ.ಎನ್.ಗೌಡ ಧನ್ಯವಾದವಿತ್ತರು.