ಡಾ। ಅಶ್ವಿನಿ ಜಿ. ಕಿರಿಭಾಗ ಎಂ. ಡಿ. ವ್ಯಾಸಂಗಕ್ಕಾಗಿ ಲಕ್ನೋ ಸಂಜಯ ಗಾಂಧಿ ಮೆಡಿಕಲ್ ಕಾಲೇಜಿಗೆ ಆಯ್ಕೆ

0

 

 

ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪೂರೈಸಿರುವ ಡಾ। ಅಶ್ವಿನಿ ಜಿ. ಕಿರಿಭಾಗ ರವರು ಎಂ.ಡಿ. ಪದವಿ ವ್ಯಾಸಂಗಕ್ಕಾಗಿ ಉತ್ತರಪ್ರದೇಶದ ಲಕ್ನೋದಲ್ಲಿರುವ ಸಂಜಯಗಾಂಧಿ ಸ್ನಾತಕೋತ್ತರ ಮೆಡಿಕಲ್ ಕಾಲೇಜ್ ಗೆ ಆಯ್ಕೆಯಾಗಿದ್ದಾರೆ.

ಕೊಲ್ಲಮೊಗ್ರ ಗ್ರಾ. ಪಂ. ಮಾಜಿ ಅಧ್ಯಕ್ಷ ಕೆ. ಪಿ. ಗಿರಿಧರ- ಸವಿತಾ ದಂಪತಿಯ ಪುತ್ರಿಯಾದ ಡಾ। ಅಶ್ವಿನಿ ಜಿ. ಯವರು ಕೊಲ್ಲಮೊಗ್ರು ಮಯೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಆರರಿಂದ ಪಿಯುಸಿವರೆಗೆ ಮುಡಿಪು ಜವಾಹರ್ ನವೋದಯ ಶಾಲಾ ವಿದ್ಯಾರ್ಥಿನಿಯಾಗಿದ್ದು, ಎಂಬಿಬಿಎಸ್ ವ್ಯಾಸಂಗವನ್ನು ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ಪೂರೈಸಿ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ 1 ವರ್ಷ ಸೇವೆ ಸಲ್ಲಿಸಿದ್ದರು. ಇದೀಗ ನೀಟ್ ಪಿ.ಜಿ. ಪರೀಕ್ಷೆಯಲ್ಲಿ 971ನೇ ರ್‍ಯಾಂಕ್ ಪಡೆದಿರುವ ಡಾ। ಅಶ್ವಿನಿಯವರು ರೇಡಿಯೊ ಡಯಾಗ್ನೊಸಿಸ್ ನಲ್ಲಿ ಎಂ.ಡಿ. ವ್ಯಾಸಂಗ ಮಾಡುವುದಕ್ಕಾಗಿ ಲಕ್ನೋದ ಸಂಜಯಗಾಂಧಿ ಪೋಸ್ಟ್ ಗ್ರ್ಯಾಜುಯೇಷನ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಗೆ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here