ನ.4: ಸುಳ್ಯ ರಾಮ ಭಜನಾ ಮಂದಿರದಲ್ಲಿ 80 ನೇ ವರ್ಷದ ಏಕಾಹ ಭಜನೆ

0

 

ಸುಳ್ಯ ಶ್ರೀ ರಾಮ ಪೇಟೆಯಲ್ಲಿರುವ ಶ್ರೀ ರಾಮ ಭಜನಾ ಮಂದಿರದಲ್ಲಿ 80 ನೇ ವರ್ಷದ ಏಕಾಹ ಭಜನೆ ಯು ನ‌.4 ರಂದು ನಡೆಯಲಿರುವುದು.
ಪ್ರಾತ: ಕಾಲ ಸೂರ್ಯೋದಯಕ್ಕೆ ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಯವರು ದೀಪ ಸ್ಥಾಪನೆ ನೆರವೇರಿಸಲಿರುವರು.
ಮಧ್ಯಾಹ್ನ ಮಹಾ ಪೂಜೆಯಾಗಿ ಸಂಜೆ ವಿಶೇಷವಾಗಿ ಹೂವಿನ ಅಲಂಕಾರ ಪೂಜೆಯು ನಡೆಯಲಿದೆ. ರಾತ್ರಿ ಗಂಟೆ 8.00 ರಿಂದ ಭಜನ್ ಸಂಧ್ಯಾ ಕಾರ್ಯಕ್ರಮ ಗಾನಸಿರಿ ಕಲಾ ಕೇಂದ್ರ ಪುತ್ತೂರು ತಂಡದವರಿಂದ ನಡೆಯಲಿರುವುದು. ರಾತ್ರಿ ಗಂಟೆ 12.30 ಕ್ಕೆ ಮಹಾ ಪೂಜೆಯಾಗಿ ಪ್ರಸಾದ ವಿತರಣೆ ಯಾಗಲಿರುವುದು‌. ನಿರಂತರ 24 ಗಂಟೆಗಳ ಕಾಲ ನಡೆಯಲಿರುವ ಭಜನಾ ಸೇವೆಯಲ್ಲಿ ತಾಲೂಕಿನ ವಿವಿಧ ಸಂತ ಮಂಡಳಿಯ ಸದಸ್ಯರು ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾತ್ರಿ ರಾಮ ಸೇವಾ ಸಮಿತಿ ಜಟ್ಟಿಪಳ್ಳ, ಚೆನ್ನಕೇಶವ ದೇವಸ್ಥಾನದ ಬಳಿ,ಬಂಗ್ಲೆಗುಡ್ಡೆ ಬಳಿ, ಗಜಾನನ ಭಜನಾ ಮಂದಿರ ಜಯನಗರ,ಮಂಜುನಾಥೇಶ್ವರ ಭಜನಾ ಮಂದಿರ ಬೆಟ್ಟಂಪಾಡಿ, ದಿ.ಗಣಪಯ್ಯ ಆಚಾರ್ ಸ್ಮರಣಾರ್ಥ ಮಕ್ಕಳ ಸೇವೆ, ಧರ್ಮದರ್ಶಿ ಮಂಡಳಿಯ ವತಿಯಿಂದ ಸೇವಾ ರೂಪದ ಉಲುಪೆ ಮೆರವಣಿಗೆಯು ಮಂದಿರ ಕ್ಕೆ ಆಗಮಿಸಲಿದೆ. ನ.5 ರಂದು ಸೂರ್ಯೋದಯಕ್ಕೆ ಮಹಾ ಮಂಗಳಾರತಿಯಾಗಿ ಭಜನಾ ಕಾರ್ಯಕ್ರಮ ಸಂಪನ್ನ ಗೊಳ್ಳಲಿರುವುದು. ಆಗಮಿಸಿದ ಎಲ್ಲಾ ಭಜನಾ ಮಂಡಳಿಯವರಿಗೆ ಸ್ಮರಣಿಕೆ ಮತ್ತು ಪ್ರಸಾದ ವಿತರಿಸಲಾಗುವುದು. ಎಲ್ಲಾ ಭಗವದ್ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗುವುದು ಎಂದು ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಕೆ.ಉಪೇಂದ್ರ ಪ್ರಭು ರವರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here