ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು : 2004- 05ನೇ ಸಾಲಿನ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

0

 

ಉಪನ್ಯಾಸಕರುಗಳಿಗೆ ಗೌರವ – ಕಾಲೇಜಿಗೆ ದೇಣಿಗೆ ಹಸ್ತಾಂತರ

ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ೨೦೦೪ – ೦೫ನೇ ಸಾಲಿನಲ್ಲಿ ಪಿಯುಸಿ ಕಲಿಯುತ್ತಿದ್ದ ವಿದ್ಯಾರ್ಥಿಗಳು ೧೭ ವರ್ಷಗಳ ಬಳಿಕ ಅದೇ ಕಾಲೇಜಿನಲ್ಲಿ ಸೇರಿ ಸ್ನೇಹ ಸಮ್ಮಿಲನ ಕಾರ್ಯಕ್ರಮ ಮೂಲಕ ೧೭ ವರ್ಷಗಳ ಹಿಂದೆ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದವರನ್ನು ಗೌರವಿಸಿ ಹಾಗೂ ಕಾಲೇಜಿಗೆ ದೇಣಿಗೆ ಹಸ್ತಾಂತರ ಕಾರ್ಯಕ್ರಮ ಅ.೨೪ರಂದು ನಡೆಯಿತು.

ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿರುವ ಮೋಹನ್ ಗೌಡ ಬೊಮ್ಮೆಟ್ಟಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

ನಿವೃತ್ತ ಪ್ರಾಂಶುಪಾಲೆ ಡಾ| ರೇವತಿ ನಂದನ್ ಕಾರ್ಯಕ್ರಮಕ್ಕೆ ದೀಪ ಬೆಳಗಿ ಚಾಲನೆ ನೀಡಿದರು. ೨೦೦೪-೦೫ರಲ್ಲಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, ಪ್ರಸ್ತುತ ಮಂಡ್ಯ ಮಂಗಳ ಪಿಯು ಕಾಲೇಜು ಪ್ರಾಂಶುಪಾಲರಾಗಿರುವ ಅಣ್ಣಪ್ಪ ಸ್ವಾಮಿ, ಮಂಡ್ಯ ಮಳವಳ್ಳಿ ಪಿಯು ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಕಾವೇರಿ, ಉಪ್ಪಿನಂಗಡಿ ಪಿಯು ಕಾಲೇಜಿನ ಉಪನ್ಯಾಸಕಿ ನಮಿತಾ, ನೆಲ್ಯಾಡಿ ಸೈಂಟ್ ಜಾರ್ಜ್ ಕಾಲೇಜು ಉಪನ್ಯಾಸಕಿ ಶಾರದಾ, ಪುತ್ತೂರು ವಿವೇಕಾನಂದ ಕಾಲೇಜು ಬಿಎಡ್ ವಿಭಾಗ ಉಪನ್ಯಾಸಕಿ ಭುವನೇಶ್ವರಿ, ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಹಸೀನಾಭಾನು, ಶ್ರೀಮತಿ ಜಾನಕಿ ಗೋಪಾಲಕೃಷ್ಣ ಬನ, ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ದೈ.ಶಿ.ಶಿಕ್ಷಕ ನಟರಾಜ್ ಎಂ.ಎಸ್. ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಎಲ್ಲ ಉಪನ್ಯಾಸಕರುಗಳನ್ನು ಗೌರವಿಸಲಾಯಿತು.
ಸುಮಾರು ೫೦ ಮಂದಿ ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ, ಹಿಂದಿನ ನೆನಪುಗಳನ್ನು ಮೆಲುಕು ಹಾಕಿದರಲ್ಲದೆ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕೆಲಸಗಳ ಕುರಿತು ಅನಿಸಿಕೆ ಹಂಚಿಕೊಂಡರು.


ದೇಣಿಗೆ ಹಸ್ತಾಂತರ : ಕಾರ್ಯಕ್ರಮ ಆಯೋಜಿಸಿದ ೨೦೦೪-೦೫ನೇ ಸಾಲಿನ ವಿದ್ಯಾರ್ಥಿಗಳು ಕಾಲೇಜಿಗೆ ತಮ್ಮ ಹೆಸರಿನಲ್ಲಿ ರೂ.೪೦ ಸಾವಿರ ದೇಣಿಗೆಯನ್ನು ಕಾಲೇಜಿನ ಪ್ರಾಂಶುಪಾಲ ಮೋಹನ್ ಗೌಡ ಬೊಮ್ಮೆಟ್ಟಿಯವರಿಗೆ ಹಸ್ತಾಂತರಿಸಿದರು.
ಉದ್ಯಮಿ ಸತ್ತಾರ್ ಪೈಚಾರ್ ಸ್ವಾಗತಿಸಿದರು. ಪತ್ರಕರ್ತ ಶಿವಪ್ರಸಾದ್ ಕೇರ್ಪಳ ಪ್ರಾಸ್ತಾವಿಕ ಮಾತನಾಡಿದರು. ಯುವಜನ ಸಂಯುಕ್ತ ಮಂಡಳಿ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಹಾಗೂ ಉಪನ್ಯಾಸಕಿ ನವ್ಯಾ ಅನಿಸಿಕೆ ವ್ಯಕ್ತ ಪಡಿಸಿದರು. ಶಿಕ್ಷಕಿ ಅಕ್ಷತಾ ಕುಡ್ನಕಜೆ ಹಾಗೂ ಕ.ಸಾ.ಪ. ನಿರ್ದೇಶಕಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು. ತಾ.ಪಂ. ಉದ್ಯೋಗಿ ಸಂತೋಷ್ ಕ್ರಾಸ್ತ ದುಗಲಡ್ಕ ಉಪನ್ಯಾಸಕರನ್ನು ಪರಿಚಯಿಸಿದರು. ಕಾರ್ಯಕ್ರಮ ಸಂಘಟಕಿ ಸುನಿತಾ ಮಚಾದೋ ವಂದಿಸಿದರು. ಕಾಲೇಜಿನ ಸಮಾಜ ಶಾಸ್ತ ಉಪನ್ಯಾಸಕ ಶಿವರಾಮ ನಾಯ್ಕ್, ೨೦೦೪-೦೫ನೇ ಸಾಲಿನ ವಿದ್ಯಾರ್ಥಿಗಳು ಹಾಗೂ ಪ್ರಸ್ತುತ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಸಹಕಾರ ನೀಡಿದರು.

LEAVE A REPLY

Please enter your comment!
Please enter your name here