ಎ.ಎಸ್.ಐ ಸುಭಾಷ್ ಶೆಣೈ ಬೆಳ್ಳಾರೆ ನಿಧನ

0

 

ವೇಣೂರು ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಭಾಷ್ ಶೆಣೈ ಬೆಳ್ಳಾರೆ ಅನಾರೋಗ್ಯದಿಂದ ಅ.15 ರಂದು ಮಧ್ಯಾಹ್ನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅವರಿಗೆ 52 ವರ್ಷ ಪ್ರಾಯವಾಗಿತ್ತು.

ಮೂಲತಃ ಬೆಳ್ಳಾರೆ ನಿವಾಸಿಯಾಗಿರುವ ಸುಭಾಷ್ ಶೆಣೈ ಅವರು ಬಿಸಿರೋಡ್ ಬಳಿ ಮನೆ ಮಾಡಿ ವಾಸವಾಗಿದ್ದರು.

ಕಾಸ್ಟೇಬಲ್ ಆಗಿ ಪೊಲೀಸ್ ಇಲಾಖೆಗೆ ಸೇರಿದ್ದು ಮಂಗಳೂರು ಸಂಚಾರಿ ಠಾಣೆ, ಬಂಟ್ವಾಳ, ಪುಂಜಾಲಕಟ್ಟೆ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ನಂತರ ಹೆಡ್ ಕಾಸ್ಟೇಬಲ್ ಅಗಿ ಬಡ್ತಿ ಹೊಂದಿ, ನಂತರ ವಿವಿಧ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಎಎಸ್‌ಐ ಆಗಿ ವೇಣೂರು ಪೊಲೀಸ್ ಠಾಣೆಯಲ್ಲಿ ಕಳೆದ ಮೂರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು.

ವೇಣೂರು ಪೊಲೀಸ್ ಠಾಣೆಯಲ್ಲಿ ಸಹೋದ್ಯೋಗಿಗಳ ಜೊತೆ ಆಯುಧ ಪೂಜೆಯಲ್ಲಿ ಭಾಗವಹಿಸಿ ನಂತರ ಮನೆಗೆ ಹೋದ ಮರುದಿನವೇ ಅನಾರೋಗ್ಯದಿಂದ ಮಂಗಳೂರು ಕೆ.ಎಮ್.ಸಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಮಧ್ಯಾಹ್ನ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಮೃತರು ತಂದೆ,ತಾಯಿ,ಪತ್ನಿ ,ಪುತ್ರ ,ಪುತ್ರಿ ಹಾಗೂ ಸಹೋದರರು, ಕುಟುಂಬಸ್ಥರು ,ಬಂಧುಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here