ಬೇಂಗಮಲೆಯಲ್ಲಿ ತ್ಯಾಜ್ಯ ಎಸೆದವರಿಗೆ ಪಂಚಾಯತ್ ನಿಂದ ದಂಡ

0

 

ತ್ಯಾಜ್ಯ ಎಸೆದವರಿಂದಲೇ ವಿಲೇವಾರಿಗೊಳಿಸಿದ ಪಂ.ಅಭಿವೃದ್ಧಿ ಅಧಿಕಾರಿ

ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಂಗಮಲೆ ಎಂಬಲ್ಲಿ ತ್ಯಾಜ್ಯ ಎಸೆದ ಸುಳ್ಯದ ನಿವಾಸಿಗಳಿಗೆ ರೂ 8000.00 ದಂಡ ವಿಧಿಸಿದ ಘಟನೆ ಅ.14 ರಂದು ನಡೆದಿದೆ.


ಬೇಂಗಮಲೆ ಪರಿಸರದಲ್ಲಿ ತ್ಯಾಜ್ಯ ತುಂಬಿದ್ದ ಬ್ಯಾಗ್ ಎಸೆದು ಹೋಗಿದ್ದಾರೆ ಎಂಬ ಮಾಹಿತಿ ಪಡೆದ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ಯಾಮ್ ಪ್ರಸಾದ್ ಎಂ ಆರ್ ರವರು ಅ.12 ರಂದು ಬೇಂಗಮಲೆ ಪರಿಸರಕ್ಕೆ ಭೇಟಿ ನೀಡಿ ಸಿ ಸಿ ಕ್ಯಾಮರಾ ದೃಶ್ಯ ಪರಿಶೀಲಿಸಿ ಹಾಗೂ ಅಲ್ಲಿ ತ್ಯಾಜ್ಯ ಎಸೆದ ಬ್ಯಾಗ್ ಗಳನ್ನು ಪರಿಶೀಲಿಸಿ ತ್ಯಾಜ್ಯ ಬಿಸಾಡಿದ ಸುಳ್ಯದ ಶೈಲೇಶ್ ಮುರಗನ್ ರವರನ್ನು ಪತ್ತೆ ಹಚ್ಚಿ ರೂ 8000.00 ದಂಡ ವಿಧಿಸಿದ್ದು ತ್ಯಾಜ್ಯ ಎಸೆದವರಿಂದಲೇ ತ್ಯಾಜ್ಯವನ್ನು ವಿಲೇವಾರಿಗೊಳಿಸಲಾಯಿತು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿಗಳ ಕೆಲಸವನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ.

LEAVE A REPLY

Please enter your comment!
Please enter your name here