ಗೂನಡ್ಕ ಪೇರಡ್ಕ ಮಸೀದಿಯಲ್ಲಿ ಮುಹಮ್ಮದ್ ಪೈಗಂಬರ್ ರವರ ಜನ್ಮದಿನಾಚರಣೆ ಪ್ರಯುಕ್ತ ಶಮೀಮೆ ಮದೀನಾ ಮದರಸ, ವಿದ್ಯಾರ್ಥಿಗಳಿಂದ ಕಲಾ ಸಾಹಿತ್ಯ ಸ್ಪರ್ಧೆಗೆ ಚಾಲನೆ

0

 

ತೆಕ್ಕಿಲ್ ಮಹಮ್ಮದ್ ಹಾಜಿ ಮೆಮೋರಿಯಲ್ ತಕ್ವೀಯತುಲ್ ಇಸ್ಲಾಂ ಮದರಸ ಪೇರಡ್ಕ ಗೂನಡ್ಕ ಸಂಪಾಜೆ , ಮೋಹಿಯುದ್ದಿನ್ ಜುಮಾ ಮಸ್ಜಿದ್ ಪೇರಡ್ಕ ಗೂನಡ್ಕ ಸಂಪಾಜೆ ಇವುಗಳ ಜಂಟಿ ಆಶ್ರಯದಲ್ಲಿ ಈದ್ ಮಿಲಾದ್ ಪ್ರಯುಕ್ತ ಮದರಸ ವಿದ್ಯಾರ್ಥಿಗಳ ಕಲಾಸಾಹಿತ್ಯ ಸ್ಪರ್ಧಾ ಕಾರ್ಯಕ್ರಮಕ್ಕೆ ದುವಾ ಮೂಲಕ ಖತೀಬರಾದ ಅಲ್ ಹಾಜ್ ರಿಯಾಸ್ ಫೈಜ್ಹಿ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಆಲಿ ಹಾಜಿ ವಹಿಸಿದರು . ಮದರಸ ಸದರ್ ನೂರುದ್ದಿನ್ ಅನ್ಸಾರಿ , ಸಹಾಯಕ ಅಧ್ಯಾಪಾಕ ಹಂಸ ಮುಸ್ಲಿಯರ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷರಾದ ಆಲಿ ಹಾಜಿ ಧ್ವಜಹರೋಹಣ ನಂತರ ಪೇರಡ್ಕ ವಳಿಯುಲ್ಲಾಹಿ ದರ್ಗಾ ಶರೀಫ್ ವರೆಗೆ ಮೆರವಣಿಗೆ ಹಾಗೂ ದಫ್ ಪ್ರದರ್ಶನ ಏರ್ಪಡಿಸಗಿತ್ತು, ಮಸ್ಜಿದ್ ಗೌರವ ಅಧ್ಯಕ್ಷ,ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಾಹಿದ್ ತೆಕ್ಕಿಲ್ ಮಾತನಾಡಿ ಪ್ರವಾದಿಯ ಆದರ್ಶದಲ್ಲಿ ಮುನ್ನಡೆಯಲು ಸಮಾಜದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಲು ಒಳ್ಳೆಯ ಧಾರ್ಮಿಕ ಶಿಕ್ಷಣ ಪಡೆಯುವಂತೆ ಕರೆ ನೀಡಿ ನಾಡಿನ ಸಮಸ್ತ ಜನತೆಗೆ ಪ್ರವಾದಿಯವರ 1497 ಹುಟ್ಟು ಹಬ್ಬದ ಶುಭಾಶಯ ತಿಳಿಸಿದರು. ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ ಮಾತನಾಡಿ ಸಮುದಾಯದ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ಆದರ್ಶ ವಿದ್ಯಾರ್ಥಿಗಳಾಗಿ ಒಳ್ಳೆಯ ಧಾರ್ಮಿಕ ವಿದ್ಯಾಭ್ಯಾಸ ಪಡೆಯಲು ಕರೆ ನೀಡಿ ವಿದ್ಯಾರ್ಥಿಗಳು ದೇಶದ ಸಮುದಾಯದ ಆಸ್ತಿ ಎಂದು ಮಕ್ಕಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಪಾಂಡಿ ಅಬ್ಬಾಸ್,ಉಪಾಧ್ಯಕ್ಷ ಸಾಜೀದ್ ಆಜ್ಹಹರಿ,ಜಮಾಅತ್ ಕಾರ್ಯದರ್ಶಿ ರಜಾಕ್ ಹಾಜಿ, ಖಜಾಂಜಿ ಪಿ ಕೆ ಉಮ್ಮರ್ ಗೂನಡ್ಕ , ಎಸ್ ಕೆ ಎಸ್ ಎಸ್ ಎಫ್ ನ ಮುನೀರ್ ಧಾರಿಮಿ,ತೆಕ್ಕಿಲ್ ಮೊಹಮ್ಮದ್ ಕುನ್ಜ್ಹಿ ಪೇರಡ್ಕ, ಇಬ್ರಾಹಿಂ ಹಾಜಿ ಕರಾವಳಿ, ಇಬ್ರಾಹಿಂ ಶೆಟ್ಟಿಯಡ್ಕ, ರಝಕ್ ಅಡಿಮರಡ್ಕ, ಸರಕಾರಿ ಉದ್ಯೋಗಿ ರಝಕ್ ಗೂನಡ್ಕ ಸಹಿತ ಜಮಾತಿನ ಮಹಿಳೆಯರ ಸಹಿತ ಹಿರಿಯ ಕಿರಿಯ ಭಾಗವಹಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಕೋವಿಡ್ ನ ಮೂರು ವರ್ಷಗಳ ನಂತರ ಅತ್ಯಂತ ವಿಜೃಂಭಣೆಯಿಂದ ಪ್ರವಾದಿ ಹುಟ್ಟು ಹಬ್ಬವನ್ನು ಜನತೆ ಆಚರಿಸಿದರು.

LEAVE A REPLY

Please enter your comment!
Please enter your name here