ಬಾಳಿಲ: ಭಾ.ಕಿ.ಸಂಘದ ಆಶ್ರಯದಲ್ಲಿ ಬಲರಾಮ ಜಯಂತಿ ಮತ್ತು ವಾರ್ಷಿಕೋತ್ಸವ

0

 

 

ಭಾರತೀಯ ಕಿಸಾನ್ ಸಂಘ ಬಾಳಿಲ- ಮುಪ್ಪೇರ್ಯ ಇದರ ಆಶ್ರಯದಲ್ಲಿ ಬಲರಾಮ ಜಯಂತಿ ಮತ್ತು 19ನೇ ವಾರ್ಷಿಕೋತ್ಸವ ಅ 9ರಂದು ಬಾಳಿಲ ವಿದ್ಯಾಬೋಧಿನೀ ಹಿ.ಪ್ರಾ. ಶಾಲಾ ಸಭಾಂಗಣದಲ್ಲಿ ನಡೆಯಿತು. ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಎನ್.ಜಿ ಪ್ರಭಾಕರ್ ರೈ ಯವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾ.ಕಿ.ಸಂಘ ದ.ಕ. ಜಿಲ್ಲಾಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆ, ಅಧ್ಯಯನ ಶೀಲ ಪ್ರಗತಿಪರ ಕೃಷಿಕ ರಮೇಶ್ ದೇಲಂಪಾಡಿ, ಪ್ರಗತಿಪರ ಹೈನುಗಾರಿಕಾ ಕೃಷಿಕ ಹಿಂದಾರು ಜಯಗುರು ಆಚಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜಿಲ್ಲಾ ಪ್ರತಿನಿಧಿ ಶ್ರೀಮತಿ ಶಾಂಭವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಗತಿಪರ ಕೃಷಿಕರಾದ ವೆಂಕಟರಮಣ ಭಟ್ ಪವನ, ಪ್ರಗತಿಪರ ಹೈನುಗಾರಿಕಾ ಕೃಷಿಕರಾದ ಶ್ರೀಮತಿ ಶಾಂಭವಿ ಏನ್.ರೈ ಪಿಜಾವು ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಇವರ ಸನ್ಮಾನಪತ್ರವನ್ನು ಭಾ.ಕಿ.ಸಂಘ ಎಣ್ಮೂರು ವಲಯದ ಕಾರ್ಯದರ್ಶಿ ಯದುನಂದನ ಓಣಿಯಡ್ಕ ಮತ್ತು ಸಂಘದ ಎಣ್ಮೂರು ವಲಯದ ಮಾಜಿ ಅಧ್ಯಕ್ಷ ರಮೇಶ್ ಕೋಟೆ ವಾಚಿಸಿದರು. ಸುಳ್ಯ ತಾಲೂಕು ಕಿಸಾನ್ ಸಂಘದ ನಿಕಟಪೂರ್ವ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ ನೆಟ್ಟಾರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಿ.ಎಸ್. ಪ್ರಸನ್ನ ಮತ್ತು ಬಿ.ಎಸ್‌. ಪವನ್ ಪ್ರಾರ್ಥಸಿದರು. ಭಾರತೀಯ ಕಿಸಾನ್ ಸಂಘ ಬಾಳಿಲ-ಮುಪ್ಪೇರ್ಯ ಇದರ ಅಧ್ಯಕ್ಷ ರಾಜಾರಾಮ ನಿಡ್ಮಾರು ಸ್ವಾಗತಿಸಿದರು. ಭಾರತೀಯ ಕಿಸಾನ್ ಸಂಘದ ಜಿಲ್ಲಾ ಕಾರ್ಯದರ್ಶಿ ಸಾಯಿಶೇಖರ್ ಕರಿಕ್ಕಳ ಸಂಘದ ತಾಲೂಕು ವರದಿ ವಾಚಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಬಾಳಿಲ-ಮುಪ್ಪೇರ್ಯ ವರದಿಯನ್ನು ಕಾರ್ಯದರ್ಶಿ ಎ.ಎಂ. ಜಗನ್ನಾಥ ರೈ ವಾಚಿಸಿದರು. ಬೆಳಿಗ್ಗೆ ನೋಂದಾವಣೆಯ ನಂತರ ಸಭಾ ಕಾರ್ಯಕ್ರಮ ಬಳಿಕ ಭೋಜನ ನಡೆಯಿತು. ಕಾರ್ಯಕ್ರಮದಲ್ಲಿ ಭಾರತೀಯ ಕಿಸಾನ್ ಸಂಘ ಸುಳ್ಯ ತಾಲೂಕು, ಭಾರತೀಯ ಕಿಸಾನ್ ಸಂಘ ಎಣ್ಮೂರು ವಲಯ ಮತ್ತು ಭಾರತೀಯ ಕಿಸಾನ್ ಸಂಘ ಗುತ್ತಿಗಾರು ಸಹಭಾಗಿತ್ವ ನೀಡಿತು. ಸಂಘದ ಸದಸ್ಯರು, ಕೃಷಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

 

LEAVE A REPLY

Please enter your comment!
Please enter your name here