ಫೆ. 19-27: ವೇಣೂರು ದೇಗುಲದ ಅಷ್ಠಬಂಧ ಬ್ರಹ್ಮಕಲಶೋತ್ಸವ: ಸಾಮೂಹಿಕ ಒಗ್ಗಟ್ಟಿನಿಂದ ಯಶಸ್ವಿ ಬ್ರಹ್ಮಕಲಶೋತ್ಸವ: ಶಾಸಕ ಹರೀಶ್ ಪೂಂಜ

0

ವೇಣೂರು: ದೇವರ ಇಚ್ಚೆಯಿಂದ ರಾಜ್ಯದ ಇತಿಹಾಸಲ್ಲೇ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ದೇಗುಲಗಳಿಗೆ ಬಹುದೊಡ್ಡ ಅನುದಾನ ಬಂದಿದೆ. ಈ ಬಾರಿ ತಾಲೂಕಿನಲ್ಲಿ ೨೪ ದೇಗುಲದ ಬ್ರಹ್ಮಕಲಶ ನಡೆಯಲಿದ್ದು, ಸಾಮೂಹಿಕ ಒಗ್ಗಟ್ಟಿನಿಂದ 2023ರ ಫೆ. 19 ರಿಂದ 27ರವರೆಗೆ ವೇಣೂರು ದೇಗುಲದ ಬ್ರಹ್ಮಕಲಶೋತ್ಸವ ಅದ್ಬುತ ಯಶಸ್ಸು ಕಾಣಲಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಜೀರ್ಣೋದ್ಧಾರಗೊಳ್ಳುತ್ತಿರುವ ಅಜಿಲಸೀಮೆಯ ಇತಿಹಾಸ ಪ್ರಸಿದ್ಧ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಸಮಿತಿ ರಚನೆಯ ಪೂರ್ವಭಾವಿಯಾಗಿ ನ. ೨೫ರಂದು ದೇಗುಲದಲ್ಲಿ ಕರೆದ ಸಭೆಯಲ್ಲಿ ಅವರು ಮಾತನಾಡಿದರು.

ಅರಸರ ಸಮ್ಮುಖದಲ್ಲಿ ಹಿರಿಯರ ಕಟ್ಟುಕಟ್ಟಲೆಯಂತೆ ಅರಮನೆಯಲ್ಲೇ ಬ್ರಹ್ಮಕಲಶೋತ್ಸವಕ್ಕೆ ದಿನ ನಿಗದಿಪಡಿಸುವ ಕೆಲಸ ಅಗಿದೆ. ಸಮಾರೋಪಾದಿಯಲ್ಲಿ ನಾವು ಕೆಲಸ ನಿರ್ವಹಿಸಬೇಕಿದೆ. ಅವರವರ ಭಾವನೆಯಂತೆ ಬ್ರಹ್ಮಕಲಶೋತ್ಸವಕ್ಕೆ ಸೇರಿಕೊಳ್ಳುತ್ತಾರೆ. ಆದರೆ ಸೀಮೆಯ ಪ್ರತಿಯೊಬ್ಬರಿಗೂ ದೇಗುಲದಲ್ಲಿ ಸೇವೆ ಮಾಡಲು ಅವಕಾಶ ಒದಗಿಸಬೇಕು. ಸೀಮೆಯ ಪ್ರತೀ ಬಂಧುಗಳು ಕರಸೇವೆಯಲ್ಲಿ ಪಾಲ್ಗೊಳ್ಳುವಂತಾಗಬೇಕು. ಈ ಮೂಲಕ 50 ಸಾವಿರ ಭಕ್ತರು ಪಾಲ್ಗೊಳ್ಳುವ ಮೂಲಕ ಅತ್ಯದ್ಭುತ ಯಶಸ್ವಿನ ಬ್ರಹ್ಮಕಲಶ ನಡೆಯಬೇಕು ಎಂದರು. ಬ್ರಹ್ಮಕಲಶೋತ್ಸವ ಸಮಿತಿ, ಉಪಸಮಿತಿಗಳ ರಚನೆಗೆ ಡಿ.೪ಕ್ಕೆ ಸಭೆ ಕರೆಯುವಂತೆ ಅವರು ಸೂಚಿಸಿದರು.

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ.ಯನ್. ಪುರುಷೋತ್ತಮ ರಾವ್ ಪ್ರಸ್ತಾವಿಸಿ, ಸ್ವಾಗತಿಸಿದರು. ವೇಣೂರು ಗ್ರಾ.ಪಂ. ಅಧ್ಯಕ್ಷ ನೇಮಯ್ಯ ಕುಲಾಲ್, ಕುಕ್ಕೇಡಿ ಗ್ರಾ.ಪಂ. ಅಧ್ಯಕ್ಷ ಜನಾರ್ಧನ ಪೂಜಾರಿ, ಆರಂಬೋಡಿ ಗ್ರಾ.ಪಂ. ಅಧ್ಯಕ್ಷೆ ವಿಜಯಾರಮೇಶ್, ಹೊಸಂಗಡಿ ಗ್ರಾ.ಪಂ. ಅಧ್ಯಕ್ಷ ಕರುಣಾಕರ ಪೂಜಾರಿ, ಎಸ್‌ಕೆಡಿಆರ್‌ಡಿಪಿ ಯೋಜನಾಧಿಕಾರಿ ಯಶವಂತ್ ಎಸ್., ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷರಾದ ಸುಂದರ ಹೆಗ್ಡೆ ಬಿ.ಇ., ಆನಂದ ಶೆಟ್ಟಿ , ಕಾರ್ಯದರ್ಶಿ ವಿ. ಪ್ರಭಾಕರ ಹೆಗ್ಡೆ ಹಟ್ಟಾಜೆ, ತಾಂತ್ರಿಕ ಸಮಿತಿ ಸಂಚಾಲಕ ಯಜ್ಞನಾರಾಯಣ ಭಟ್, ವ್ಯವಸ್ಥಾಪನ ಹಾಗೂ ಜೀರ್ಣೋದ್ಧಾರ ಸಮಿತಿ ಸದಸ್ಯರು ಮತ್ತು ಸೀಮೆಯ ಭಕ್ತರು ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here