ಚಾರ್ಮಾಡಿ: ಅಂಬುಲೆನ್ಸ್ ಮತ್ತು ಆಟೋ ಮುಖಾಮುಖಿ ಡಿಕ್ಕಿ

0

ಚಾರ್ಮಾಡಿ ಘಾಟ್ ನ ತಿರುವಿನಲ್ಲಿ ಆಂಬುಲೆನ್ಸ್ ಮತ್ತು ಆಟೋ ಮುಖಾಮುಖಿ ಡಿಕ್ಕಿಯಾದ ಘಟನೆ ಇಂದು (ನ.24 ರಂದು) ನಡೆದಿದೆ.

ಮಂಗಳೂರಿನಿಂದ ಮೂಡಿಗೆರೆಗೆ ರೋಗಿಯನ್ನು ಬಿಟ್ಟು ಹೋಗುತ್ತಿದ್ದ ಆಂಬುಲೆನ್ಸ್ ನ ಚಾಲಕನ ನಿಯಂತ್ರಣ ತಪ್ಪಿ ಚಾರ್ಮಾಡಿ ಘಾಟ್ ನ ಒಂದನೇ ತಿರುವಿನಲ್ಲಿ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಆಟೋದಲಿದ್ದ ನಾಲ್ವರಿಗೆ ಪೆಟ್ಟಾಗಿದ್ದು ಕಕ್ಕಿಂಜೆ ಆಸ್ಪತ್ರೆಗೆ ರವಾನಿಸಲಾಗಿದೆ.

ಬಣಕಲ್ ಪಟ್ಟಣದ ಆಟೋವಾಗಿದ್ದು, ಆಟೋದಲಿದ್ದ ಪ್ರಯಾಣಿಕರು ಧರ್ಮಸ್ಥಳ ಕ್ಕೆ ಹೋಗಿ ದರ್ಶನ ಮುಗಿಸಿ ಬರುವಾಗ ನಡೆದ ಅಪಘಾತವಾಗಿದೆ.

ವಾಹನಗಳು ಮುಕಾಮುಖಿ ಡಿಕ್ಕಿ ಆದ್ದರಿಂದ ಎರಡು ವಾಹನಗಳು ಜಖಂಗೊಂಡಿದೆ.

LEAVE A REPLY

Please enter your comment!
Please enter your name here