ಬಳಂಜ: ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ಅರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯರಿರುವಾಗ ಶಿಬಿರದಲ್ಲಿ ಪಾಲ್ಗೊಂಡು ಉಚಿತ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗ ಪಡೆಯಬೇಕು.ಸಂಘ ಸಂಸ್ಥೆಗಳು ಇಂತಹ ಕಾರ್ಯಕ್ರಮ ಆಯೋಜನೆ ಮಾಡಬೇಕು. ವಿಶೇಷವಾಗಿ ಯುವಶಕ್ತಿ ಫ್ರೆಂಡ್ಸ್ ನಾಲ್ಕೂರು ಯುವ ಸಂಘಟನೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಬರುತ್ತಿರುವುದು ಶ್ಲಾಘನೀಯವಾದದ್ದು ಎಂದು ವಿಧಾನಪರಿಷತ್ ಶಾಸಕ ಕೆ ಪ್ರತಾಪ್ ಸಿಂಹ ನಾಯಕ್ ಹೇಳಿದರು.
ಅವರು ರೋಟರಿ ಕ್ಲಬ್ ಬೈಕಂಪಾಡಿ,ಯುವಶಕ್ತಿ ಫ್ರೆಂಡ್ಸ್ ಹಾಗೂ ಶ್ರೀನಿವಾಸ್ ಆಸ್ಪತ್ರೆ ಮಂಗಳೂರು ವತಿಯಿಂದ ರವಿವಾರ ಬಳಂಜದಲ್ಲಿ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಬೈಕಂಪಾಡಿ ಅಧ್ಯಕ್ಷ ಅಶೋಕ್ ಎನ್ ವಹಿಸಿ ಮಾತನಾಡಿ ಬಳಂಜದಲ್ಲಿ ಕಳೆದ 13 ವರ್ಷಗಳಿಂದ ರೋಟರಿ ಕ್ಲಬ್ ಬೈಕಂಪಾಡಿ ಸಂಸ್ಥೆಯು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇಲ್ಲಿಯ ಸಂಘ ಸಂಸ್ಥೆಗಳ ಸಹಕಾರ ಅದ್ಭುತವಾಗಿದೆ ಎಂದರು.
ವೇದಿಕೆಯಲ್ಲಿ ಉಭಯ ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಕೆ.ವಸಂತ ಸಾಲಿಯಾನ್,ಬೆಂಗಳೂರು ಉದ್ಯಮಿ ಹರೀಶ್ ಶೆಟ್ಟಿ ಕರ್ಮಿತ್ತಿಲ್ಲು ನಾಲ್ಕೂರು,ರೋಟರಿ ಕ್ಲಬ್ ಬೈಕಂಪಾಡಿಯ ಪೂರ್ವಾಧ್ಯಕ್ಷ ಭರತ್ ಶೆಟ್ಟಿ, ಪ್ರಗತಿ ಪರ ಕೃಷಿಕ ಸತೀಶ್ ರೈ ಬಾರ್ದಡ್ಕ,ಮುಂಬಯಿ ಉದ್ಯಮಿ ಶೇಖರ್ ದೇವಾಡಿಗ ಪಾಲಬೆ,ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಹೆಚ್.ಎಸ್, ಬಳಂಜ ವಾಲಿಬಾಲ್ ಕ್ಲಬ್ ಅಧ್ಯಕ್ಷ ರಾಕೇಶ್ ಹೆಗ್ಡೆ,ಶ್ರೀನಿವಾಸ್ ಆಸ್ಪತ್ರೆಯ ನೇತ್ರ ತಜ್ಞೆ ಡಾ.ಮಾಳವಿಕಾ,ಪ್ರಗತಿಪರ ಕೃಷಿಕ ಸಂತೋಷ್ ಕುಮಾರ್ ಕಾಪಿನಡ್ಕ, ಬಳಂಜ ಶಾಲಾ ಮುಖ್ಯೋಪಾಧ್ಯಾಯರಾದ ವಿಲ್ಪ್ರೆಡ್ ಪಿಂಟೋ,ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರತ್ನಾಕರ ಪೂಜಾರಿ ಉಪಸ್ಥಿತರಿದ್ದರು.
ಯುವಶಕ್ತಿ ಫ್ರೆಂಡ್ಸ್ ನಾಲ್ಕೂರು ಇದರ ಸದಸ್ಯ ಸಂತೋಷ್ ಪಿ ಕೋಟ್ಯಾನ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿ, ಯುವ ಸಾಹಿತಿ ಚಂದ್ರಹಾಸ ಬಳಂಜ ನಿರೂಪಿಸಿ ವಂದಿಸಿದರು.
ಯುವಶಕ್ತಿ ಫ್ರೆಂಡ್ಸ್ ನಾಲ್ಕೂರು ತಂಡದ ಸದಸ್ಯರಾದ ಯೋಗೀಶ್ ಆರ್,ಸಂತೋಷ್ ಕುಮಾರ್,ರಂಜಿತ್, ಪ್ರವೀಣ್ ಡಿ ಕೋಟ್ಯಾನ್, ಶರತ್ ಅಂಚನ್,ಸಂಪತ್ ಕೋಟ್ಯಾನ್,ಮಹೇಶ್,ಯೋಗೀಶ್ ಕೊಂಗುಳ,ವಿಜಯ ಯೈಕುರಿ,ಕರುಣಾಕರ ಹೆಗ್ಡೆ, ಯತೀಶ್ ವೈ.ಎಲ್,ಅವಿನಾಶ್,ಪ್ರಣಾಮ್, ಪ್ರಶಾಂತ್ ಎಂ,ಜಗದೀಶ್ ಕೋಟ್ಯಾನ್,ಸುಧೀಶ್,ಜಯಪ್ರಸಾದ್ ಕೋಟ್ಯಾನ್,ಸುದೀರ್ ಕುಮಾರ್ ರಾಕೇಶ್ ಹಾಗೂ ಗ್ರಾ.ಪಂ ಸದಸ್ಯ ಯಶೋಧರ ಶೆಟ್ಟಿ, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಗಣೇಶ್ ದೇವಾಡಿಗ ಸಂಭ್ರಮ ಸಹಕರಿಸಿದರು.
ಹಳೆವಿಧ್ಯಾರ್ಥಿ ಸಂಘದಿಂದ ಸನ್ಮಾನ:-
ಕಾರ್ಯಕ್ರಮದಲ್ಲಿ ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಳಂಜ ಪ್ರೌಢಶಾಲಾ ವಿದ್ಯಾರ್ಥಿ ನೋಯಲ್ ಹಾಗೂ ಪ್ರಾಥಮಿಕ ಶಾಲಾ ವಿಧ್ಯಾರ್ಥಿ ಕೀರ್ತಿ ಇವರನ್ನು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಉದ್ಯಮಿಹರೀಶ್ ಶೆಟ್ಟಿ ಕರ್ಮಿತ್ತಿಲ್ಲು ನಾಲ್ಕೂರು ಇವರು ಕ್ರೀಡಾಪಟು ಕೀರ್ತಿಯವರಿಗೆ ಕ್ರೀಡಾಪರಿಕರಗಳನ್ನು ಕೊಡುಗೆಯಾಗಿ ನೀಡಿದರು.
ಯುವಶಕ್ತಿ ಸಂಘಟಣೆಯಿಂದ ಜನಪರ ಕೆಲಸ: ಶಾಸಕ ಹರೀಶ್ ಪೂಂಜ
ಕಳೆದ ಕೆಲವು ಸಮಯದ ಹಿಂದೆ ನಾಲ್ಕೂರಿನಲ್ಲಿ ಸ್ಥಾಪನೆಗೊಂಡ ಯುವಶಕ್ತಿ ಫ್ರೆಂಡ್ಸ್ ಸಂಘಟನೆ ಜನಪರ ಕೆಲಸ ಕಾರ್ಯಗಳನ್ನು ಮಾಡುತ್ತ ಬರುತ್ತಿರುವುದು ಸಂತೋಷ ತಂದಿದೆ.ಉಚಿತ ವೈದ್ಯಕೀಯ ತಪಾಸಣಾ ಶಿಬಿರದ ಪ್ರಯೋಜನವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕು ಎನ್ನುತ್ತಾ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಬಳಂಜ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ತಲಾ 5ಸಾವಿರ ನಗದು ನೀಡಿ ಗೌರವಿಸಿದರು.