ತಾಲೂಕು ಮಟ್ಟದ ಕ್ರೀಡಾಕೂಟ : ಮರಿಯಾoಬಿಕ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಬೆದ್ರಬೆಟ್ಟು : ದ.ಕ.ಜಿ. ಪ. ಹಿ.ಪ್ರಾ. ಶಾಲೆ ಪೆರಿಂಜೆ, ಹೊಸಂಗಡಿ ಹಾಗೂ ಉಜಿರೆಯ ರತ್ನವರ್ಮ ಹೆಗ್ಡೆ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಮರಿಯಾoಬಿಕ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, 17ರ ವಯೋಮಾನದ ಹರ್ಡಲ್ಸ್ ನಲ್ಲಿ 10ನೇ ತರಗತಿಯ ಫಾತಿಮತ್ ನಿಝ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

14ರ ವಯೋಮಾನದ ಗುಂಡು ಎಸೆತದಲ್ಲಿ 8ನೇ ತರಗತಿಯ ಅಲೋನ ಫ್ರಾನ್ಸಿಸ್ ದ್ವಿತೀಯ ಸ್ಥಾನವನ್ನು ಮತ್ತು ಪ್ರಾಥಮಿಕ ಶಾಲಾ ವಿಭಾಗದ ಹರ್ಡಲ್ಸ್ ನಲ್ಲಿ 7ನೇ ತರಗತಿಯ ತರುಣ್ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

ಶಾಲಾ ದೈಹಿಕ ಶಿಕ್ಷಕರಾದ ಕಿಶನ್ ರಾಜ್ ರೈ ಇವರು ತರಬೇತಿಯನ್ನು ನೀಡಿದ್ದಾರೆ. ಶಾಲಾ ಸಂಚಾಲಕರಾದ ರೆ. ಫಾ. ಜೋಜಿ, ಮುಖ್ಯೋಪಾಧ್ಯಾಯನಿಯಾದ ರೆ. ಸಿ. ಶೆರಿನ್ ಹಾಗೂ ಶಿಕ್ಷಕರು ಅಭಿನಂದಿಸಿರುತ್ತಾರೆ.

LEAVE A REPLY

Please enter your comment!
Please enter your name here