ಉಜಿರೆ: ನೂತನವಾಗಿ ಲೋಕಾರ್ಪಣೆಗೊಂಡ ದಿ ಓಷ್ಯನ್ ಪರ್ಲ್ ಹೋಟೆಲ್ ನಲ್ಲಿ ಎಸ್.ಡಿ. ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಅವರ ಹುಟ್ಟುಹಬ್ಬ ಆಚರಣೆ ಅತ್ಯಂತ ಸಂಭ್ರಮದಿಂದ ಜರಗಿತು.
ಡಿ.ಹರ್ಷೇಂದ್ರ ಕುಮಾರ್ ಹಾಗೂ ಸುಪ್ರಿಯಾ ಹರ್ಷೇಂದ್ರ ಕುಮಾರ್ ದಂಪತಿಯನ್ನು ಓಷ್ಯನ್ ಪರ್ಲ್ ಉಜಿರೆಯ ಮಾಲೀಕರಾದ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಹಾಗೂ ಓಷ್ಯನ್ ಪರ್ಲ್ ಗ್ರೂಪ್ ನ ವೈಸ್ ಪ್ರೆಸಿಡೆಂಟ್ ಬಿ ಎನ್ ಗಿರೀಶ್ ಸ್ವಾಗತಿಸಿ ಹುಟ್ಟು ಹಬ್ಬದ ಶುಭಾಶಯ ಕೋರಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಖ್ಯಾತ ಯಕ್ಷಗಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ತಂಡ ಯಕ್ಷಗಾನ ನಾಟ್ಯ ವೈಭವದ ಮೂಲಕ ವಿಶೇಷವಾಗಿ ದಂಪತಿಗಳಿಗೆ ದೀಪಾರತಿ ಬೆಳಗುವ ಮೂಲಕ ಶುಭಾಶಯ ಸಲ್ಲಿಸಿದರು.
ಈ ವೇಳೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಶ್ರದ್ಧಾ ಅಮಿತ್, ಶ್ರೇಯಸ್ ಕುಮಾರ್, ನಿಶ್ಚಲ್ ಕುಮಾರ್, ಮೈತ್ರಿ, ಮಾನ್ಯ, ಆರ್ಯಾಮಾನ್, ಕಿಯಾಂಶ್, ಹಾಗೂ ಹರ್ಷೇಂದ್ರ ಕುಮಾರ್ ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅತಿಥಿ ಸತ್ಕಾರ,ಸ್ವಚ್ಛತೆ ಹಾಗೂ ಗುಣಮಟ್ಟದ ಆಹಾರ ಬಗ್ಗೆ ಹೆಗ್ಗಡೆ ಕುಟುಂಬಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು, ಈ ಸಂದರ್ಭದಲ್ಲಿ ಓಷ್ಯನ್ ಪರ್ಲ್ ಸಂಸ್ಥೆಯವರು ವಿಶೇಷವಾಗಿ ನಿರ್ಮಿಸಿದ ಡಿ. ಹರ್ಷೇಂದ್ರ ಕುಮಾರ್ ಅವರ ಜೀವನದ ಹಲವು ಮಜಲುಗಳನ್ನು ಪರಿಚಯಿಸುವ ಕಿರು ಚಿತ್ರವನ್ನು ಪ್ರಸ್ತುತ ಪಡಿಸಿದರು.