







ಬೆಳ್ತಂಗಡಿ: ಸಂತ ತೆರೇಸಾ ಪದವಿ ಪೂರ್ವ ಕಾಲೇಜಿನಲ್ಲಿ ಅಕ್ಟೋಬರ್ 27 ರಂದು ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟವು ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಉದ್ಯಮಿ ರೊನಾಲ್ಡ್ ಲೋಬೊ ರವರು ನೆರವೇರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಸಂತ ತೆರೇಸಾ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರಾದ ವಂ| ಭಗಿನಿ ತೆರೇಸಿಯ ಶೇರಾ ರವರು ಅಧ್ಯಕ್ಷತೆ ವಹಿಸಿ ದೀಪ ಬೆಳಗಿಸಿದರು. ಕಾಲೇಜಿನ ಪ್ರಾಂಶುಪಾಲರಾದ ವಂ| ಭಗಿನಿ ಮೋಲಿ ಡಿಕುನ್ನರವರು ಸ್ವಾಗತಿಸಿದರು.


ವೇದಿಕೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಆಲ್ವಿನ್ ಪಿಂಟೋ ಹಾಗೂ ದೈಹಿಕ ಶಿಕ್ಷಕ ನವೀನ್ ಉಪಸ್ಥಿತರಿದ್ದರು.ಈ ಪಂದ್ಯಾಟದಲ್ಲಿ ತಾಲೂಕಿನ ಒಟ್ಟು 15 ಬಾಲಕ ಮತ್ತು ಬಾಲಕಿಯರ ತಂಡಗಳು ಭಾಗವಹಿಸಿದ್ದವು.
ಪಂದ್ಯಾಟದ ಫಲಿತಾಂಶ:ಬಾಲಕರ ವಿಭಾಗ: ವಾಣಿ ಪದವಿ ಪೂರ್ವ ಕಾಲೇಜು, ಬೆಳ್ತಂಗಡಿ (ಪ್ರಥಮ) ಹಾಗೂ ಸಂತ ತೆರೇಸಾ ಪದವಿ ಪೂರ್ವ ಕಾಲೇಜು, ಬೆಳ್ತಂಗಡಿ (ದ್ವಿತೀಯ).ಬಾಲಕಿಯರ ವಿಭಾಗ: ಸರಕಾರಿ ಪದವಿ ಪೂರ್ವ ಕಾಲೇಜು, ಪುಂಜಾಲಕಟ್ಟೆ (ಪ್ರಥಮ) ಹಾಗೂ ವಾಣಿ ಪದವಿ ಪೂರ್ವ ಕಾಲೇಜು, ಬೆಳ್ತಂಗಡಿ (ದ್ವಿತೀಯ).ಸಂತ ತೆರೇಸಾ ಕಾಲೇಜಿನ ವಿನ್ಯಾಸ್ ‘ಆಲ್ರೌಂಡರ್’ ಪ್ರಶಸ್ತಿ ಪಡೆದು ಕಾಲೇಜಿಗೆ ಕೀರ್ತಿ ತಂದರು.
ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಉಪನ್ಯಾಸಕರಾದ ಪ್ರದೀಪ ಪಿಂಟೋ ಹಾಗೂ ಕೀರ್ತಿಕ ಕಾರ್ಯಕ್ರಮ ನಿರೂಪಿಸಿ, ಝೀಟ ಡಿಸೋಜ ವಂದಿಸಿದರು.









