






ಬೆಳ್ತಂಗಡಿ : ರೋಟರಿ ಕ್ಲಬ್ ಬೆಳ್ತಂಗಡಿ ,ಆನ್ಸ್ ಕ್ಲಬ್ ಬೆಳ್ತಂಗಡಿ ಜೊತೆಯಾಗಿ “ರೋಟರಿ ನವರಂಗ್ ” ಎನ್ನುವ ನವರಾತ್ರಿಯ ವಿಶೇಷ ದಾಂಡಿಯಾ ಕಾರ್ಯಕ್ರಮವನ್ನು ಆಯೋಜಿಸಿತು.
ಕಾರ್ಯಕ್ರಮವು ರೋಟರಿಯ ಮೀಟಿಂಗ್ ಮುಖಾಂತರ ಆರಂಭವಾಯಿತು. ರೋಟರಿ ಕ್ಲಬ್ ಅಧ್ಯಕ್ಷ ರೊ. ಶ್ರೀಧರ ಕೆ.ವಿ. ಸ್ವಾಗತಿಸಿದರು ಈ ಸಂಧರ್ಭದಲ್ಲಿ ರೋಟರಿ ಕಾರ್ಯದರ್ಶಿ ರೊ.ಡಾ. ರಾಘವೇಂದ್ರ ಪಿದಮಲೆ , ಆನ್ಸ್ ಕ್ಲಬ್ ಅಧ್ಯಕ್ಷೆ ಆನ್ ರಾಜಶ್ರೀ ರಾವ್, ಕಾರ್ಯದರ್ಶಿ ಆನ್ ಅಪರ್ಣಾ ವಾಟ್ವೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಂತರ ನವರಾತ್ರಿಯ ನವರಂಗ್ ಕಾರ್ಯಕ್ರಮ ಆರಂಭವಾಯಿತು . ಉಜಿರೆಯ ಎಸ್.ಡಿ.ಎಂ ಕಲಾ ವೈಭವದ ವಿದ್ಯಾರ್ಥಿಗಳ ದಾಂಡಿಯಾ ನೃತ್ಯದೊಂದಿಗೆ ಕಾರ್ಯಕ್ರಮ ಆರಂಭ ಗೊಂಡಿತು ನಂತರ ರೋಟರಿ ಬೆಳ್ತಂಗಡಿಯ ಸದಸ್ಯರುಗಳು ಹಾಗೂ ಆನ್ಸ್ ಕ್ಲಬ್ ಸದಸ್ಯೆಯರು ಒಂದರ ನಂತರ ಒಂದರಂತೆ ಬೇರೆ ಬೇರೆ ಹಾಡುಗಳಿಗೆ ದಾಂಡಿಯಾ ನೃತ್ಯ ಮಾಡುತ್ತಾ ನಲಿದಾಡಿದರು.


ಈ ನಡುವೆ ರೋಟರಿ ಸದಸ್ಯರಾದ ಜಗದೀಶ ಪ್ರಸಾದ್ ಹಾಗೂ ಶೈಲಾ ಜಗದೀಶ್ , ನಾರಾಯಣ ಭಟ್ ಹಾಗೂ ಡಾ ಅನುರಾಧಾ ಭಟ್, ಅರವಿಂದ ಕಾರಂತ್ ಹಾಗೂ ಉಷಾ ಕಿರಣ ಕಾರಂತ್, ರೇಶ್ಮಾ ಹೆಗ್ಡೆ ಹಾಗೂಗಣರಾಜ ಕಾಮತ್ , ಡಾ ವಿಶು ಕುಮಾರ ಶೆಟ್ಟಿ ಹಾಗೂ ಡಾ ತಾರಕೇಶ್ವರಿ ಇವರುಗಳ ವೈವಾಹಿಕ ದಿನದ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.
ನಂತರ ರೋಟರಿ ಕ್ಲಬ್ ಆನ್ಸ್ ಕ್ಲಬ್ ಜೊತೆಯಾಗಿ ಪುಂಜಾಲಕಟ್ಟೆಯ ಬಳಿಯ ಊರ್ಲಾ ಎಂಬಲ್ಲಿಯ ಅಂಗನವಾಡಿಯೊಂದರ ರಿಪೇರಿ ಹಾಗೂ ಪೈಂಟಿಂಗ್ ಕೆಲಸವನ್ನು ಉಚಿತವಾಗಿ ಮಾಡಿದ ಮುಖೇಶ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ನಿರೂಪಕರಾದ ವಿನ್ಯಾಸ್ ಭಂಡಾರಿ ಅವರ ಹುಟ್ಟು ಹಬ್ಬವನ್ನು ಕೇಕ್ ಕಟ್ ಮಾಡುವ ಮೂಲಕ ಆಚರಿಸಲಾಯಿತು. ರೋಟರಿ ಕ್ಲಬ್ ಆನೆಟ್ ಆದ್ಯಾತ್ಮಿ ಅವರನ್ನು ಎಂ.ಬಿ.ಎ. ಕೋರ್ಸ್ ಮುಗಿಸಿ IDFC FIRST ಬ್ಯಾಂಕ್ನಲ್ಲಿ ನೌಕರಿ ಸಿಕ್ಕಿದ ಹಿನ್ನಲೆಯಲ್ಲಿ ಕ್ಲಬ್ ಪರವಾಗಿ ಅಭಿನಂದಿಸಲಾಯಿತು. ಕಾರ್ಯದರ್ಶಿ ರೊ ಡಾ ರಾಘವೇಂದ್ರ ಪಿದಮಲೆ ವಂದಿಸಿದರು.









