ಜೆಸಿಐ ಕೊಕ್ಕಡ ಕಪಿಲಾ: 2027ನೇ ಸಾಲಿನ ಅಧ್ಯಕ್ಷರಾಗಿ ಅಕ್ಷತ್ ರೈ ಆಯ್ಕೆಕಾರ್ಯದರ್ಶಿಯಾಗಿ ಪ್ರಜ್ವಲ್ ಲೋಬೊ

0

ಕೊಕ್ಕಡ: ಜೆಸಿಐ ಕೊಕ್ಕಡ ಕಪಿಲಾದ 2027ನೇ ಸಾಲಿನ ಅಧ್ಯಕ್ಷರಾಗಿ ಜೆಸಿ ಅಕ್ಷತ್ ರೈ ಹಾಗೂ ಕಾರ್ಯದರ್ಶಿಯಾಗಿ ಜೆಸಿ ಪ್ರಜ್ವಲ್ ಲೋಬೊ ಆಯ್ಕೆಯಾಗಿದ್ದಾರೆ.

ಸಂಘಟನೆಯ ಚುನಾವಣಾ ನೀತಿ–ನಿಯಮಗಳನ್ವಯ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿಗಳಾಗಿ ಘಟಕದ ನಿಕಟಪೂರ್ವಾಧ್ಯಕ್ಷೆ ಎಚ್‌ಜಿಎಫ್ ಡಾ. ಶೋಭಾ ಪಿ.ಜೆ., ಪೂರ್ವಾಧ್ಯಕ್ಷರಾದ ಜೆಎಫ್‌ಎಂ ಶ್ರೀಧರ್ ರಾವ್, ಜೆಸಿಐ ಸೆನೆಟರ್ ಜಿತೇಶ್ ಪಿರೇರಾ ಹಾಗೂ ಜೆಸಿ ಸಂತೋಷ್ ಜೈನ್ ಕಾರ್ಯನಿರ್ವಹಿಸಿದರು.

ಈ ಸಂದರ್ಭದಲ್ಲಿ ಘಟಕದ 2026ನೇ ಸಾಲಿನ ಅಧ್ಯಕ್ಷ ಜೆಸಿ ರಿತೇಶ್ ಸ್ಟ್ರೆಲ್ಲಾ, ಕಾರ್ಯದರ್ಶಿ ಜೆಎಫ್‌ಎಂ ಜೋಯಲ್ ಪಿರೇರಾ, ಮಾರ್ಗದರ್ಶಕ ಎಚ್‌ಜಿಎಫ್ ಜೋಸೆಫ್ ಪಿರೇರಾ, ಜೆಸಿ ಯೋಗೀಶ್ ಎಸ್.ಪಿ., ಜೆಸಿ ಧನುಷ್ ಹಾಗೂ ಘಟಕದ ಇತರ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here