






ದೋಂಡೋಲೆ: ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಧರ್ಮಸ್ಥಳ ಇದರ ವತಿಯಿಂದ ದೋಂಡೋಲೆಯಲ್ಲಿ ನೂತನವಾಗಿ ಆರಂಭಗೊಂಡ ‘ಶ್ರೀ ರಾಮ ಮಕ್ಕಳ ಭಜನಾ ತಂಡ’ (ಕುಣಿತ ಭಜನೆ) ಉದ್ಘಾಟನಾ ಸಮಾರಂಭವು ಇತ್ತೀಚೆಗೆ ಶ್ರದ್ಧಾ-ಭಕ್ತಿಗಳೊಂದಿಗೆ ನೆರವೇರಿತು.


ಈ ಕಾರ್ಯಕ್ರಮದಲ್ಲಿ ಭಜನಾ ಗುರುಗಳಾದ ನಾಗೇಶ್ ಬಿ. ನೆರಿಯ ಹಾಗೂ ಮಾಲಿನಿ ಹೆಗ್ಡೆ ಮುಖ್ಯ ಉಪಸ್ಥಿತರಿದ್ದು ಮಕ್ಕಳಿಗೆ ಮಾರ್ಗದರ್ಶನ ನೀಡಿದರು.
ಅಂತೆಯೇ, ಧರ್ಮಸ್ಥಳ ಮಹಿಳಾ ಭಜನಾ ಮಂಡಳಿಯ ಸಂಚಾಲಕರಾದ ಮಮತಾ ಪ್ರಮಿಳ ಮತ್ತು ಊರಿನ ಹಿರಿಯ ಮಹಿಳಾ ಭಜನಾ ಮಂಡಳಿಯ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದು, ಮಕ್ಕಳ ನೂತನ ಭಜನಾ ತಂಡಕ್ಕೆ ಶುಭ ಹಾರೈಸಿದರು.









