ಉಜಿರೆಯಲ್ಲಿ ಸಂಪನ್ನಗೊಂಡ 38ನೇ ಉಚಿತ ಟೈಲರಿಂಗ್ ತರಬೇತಿ ಶಿಬಿರ:* ಉಜಿರೆ

0

ಸೇವಾಭಾರತಿ(ರಿ.), ಕನ್ಯಾಡಿ ಇದರ ನೇತೃತ್ವದಲ್ಲಿ ಸಬಲಿನಿ ಯೋಜನೆಯಡಿ ಲಯನ್ಸ್ ಕ್ಲಬ್, ಬೆಳ್ತಂಗಡಿ ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟ(ರಿ.), ಉಜಿರೆ, ಮಹಾತ್ಮಾ ಗಾಂಧಿ ಗ್ರಾಮ ಪಂಚಾಯತ್, ಉಜಿರೆ ಮತ್ತು ಶ್ರೀ ದುರ್ಗಾಮಾತೃ ಮಂಡಳಿ, ಕನ್ಯಾಡಿ ಇದರ ಸಹಭಾಗಿತ್ವದಲ್ಲಿ ಮಹಿಳೆಯರಿಗಾಗಿ 38 ನೇ ಉಚಿತ ಟೈಲರಿಂಗ್ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಅಕ್ಟೋಬರ್ 23 ರಂದು ಸಂಜೀವಿನಿ ಕಟ್ಟಡ ಗ್ರಾಮ ಪಂಚಾಯತ್ ಉಜಿರೆಯಲ್ಲಿ ನಡೆಯಿತು.

ಬೆಳ್ತಂಗಡಿ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲಯನ್ ರಘುರಾಮ ಶೆಟ್ಟಿ ”ಸಾಧನಾ'” ರವರು ಕಲಿತಂತ ವಿದ್ಯೆಯನ್ನು ಅರ್ಧಕ್ಕೆ ಕೈ ಬಿಡದೆ ಮುಂದುವರಿಸಿಕೊಂಡು ಹೋಗಿ ಎಂದು ಶುಭಹಾರೈಸಿದರು.

ಕನ್ಯಾಡಿ ಸೇವಾಭಾರತಿಯ ಟ್ರಸ್ಟಿ ಹಾಗೂ ಬೆಳ್ತಂಗಡಿ ತಾಲೂಕು ಮಹಿಳಾ ಸಹಕಾರಿ ಸಂಘ( ನಿ.)ದ CEO ಶ್ರೀಮತಿ ಸ್ವರ್ಣಗೌರಿ ಮಾತನಾಡಿ ಟೈಲರಿಂಗ್ ಕಲಿಯುವುದರಿಂದ ಬೇರೆ ಬೇರೆ ರೀತಿಯ ಸ್ವ – ಉದ್ಯೋಗದ ಅವಕಾಶವಿರುತ್ತದೆ. ಕಲಿತ ವಿದ್ಯೆ ಎಂದಿಗೂ ನಮಗೆ ಶಾಶ್ವತ ಮಹಿಳೆಯರು ಯಾವತ್ತಿಗೂ ಇನ್ನೊಬ್ಬರಿಗೆ ಅವಲಂಬಿತವಾಗದೆ ಸ್ವಾವಲಂಬಿ ಜೀವನವನ್ನು ನಡೆಸುವುದು ಅತ್ಯಗತ್ಯ ಕಲಿತಂತ ವಿದ್ಯೆಯನ್ನು ಅರ್ಧಕ್ಕೆ ಕೈ ಬಿಡದೆ ಮುಂದುವರಿಸಿಕೊಂಡು ಹೋಗಿ ಎಂದು ಶುಭಹಾರೈಸಿದರು. ಟೈಲರಿಂಗ್ ತರಬೇತುದಾರರಾದ ಲಲಿತಾರವರು ಎಲ್ಲರಿಗೂ ಶುಭಹಾರೈಸಿ ಸಂತಸ ವ್ಯಕ್ತಪಡಿಸಿದರು.

ಬೆಳ್ತಂಗಡಿ ಲಯನ್ಸ್ ಕ್ಲಬ್ ನ ವತಿಯಿಂದ ಲಲಿತಾ ರವರಿಗೆ ಗೌರವಧನವನ್ನು ನೀಡಿ ಸಹಕರಿಸಿದ್ದು. ಇದನ್ನು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ರಘುರಾಮ ಶೆಟ್ಟಿ ಸಾಧನಾ ರವರು ಹಸ್ತಾಂತರಿಸಿದರು. ಶಿಬಿರಾರ್ಥಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ನಂತರ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ಉಜಿರೆ ಗ್ರಾಮ ಪಂಚಾಯತ್, ಆಡಳಿತಾಧಿಕಾರಿಗಳು ಶ್ರೀ ಮಹಾವೀರ ಶೇಬಣ್ಣವರ, ಉಜಿರೆ ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟ(ರಿ.), ದ ಅಧ್ಯಕ್ಷರಾದ ವಿನುತಾ ರಜತ್ ಗೌಡ, NRLM ಬೆಳ್ತಂಗಡಿ ತಾಲ್ಲೂಕು ವ್ಯವಸ್ಥಾಪಕರಾದ ಪ್ರತಿಮಾ, ಕನ್ಯಾಡಿ ಶ್ರೀ ದುರ್ಗಾಮಾತೃ ಮಂಡಳಿ ಅಧ್ಯಕ್ಷರಾದ ಮಮತಾ ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಒಟ್ಟು 50 ಮಂದಿ ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರುಬೆಳ್ತಂಗಡಿ ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟದ ಶಾಶ್ವಿತ ಸ್ವಾಗತಿಸಿ, ಸಂಧ್ಯಾ ಎಂ.ಬಿ.ಕೆ ನಿರೂಪಿಸಿ, ಭಾಗೀರಥಿ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here