






ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 59ನೇ ವರ್ಧಂತ್ಯುತ್ಸವದ ಶುಭ ಸಂದರ್ಭದಲ್ಲಿ, ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ (SKPA) ಬೆಳ್ತಂಗಡಿ ವಲಯದ ಪದಾಧಿಕಾರಿಗಳು ಹಾಗೂ ಸದಸ್ಯರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಅವರನ್ನು ಗೌರವಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ವಲಯದ ಅಧ್ಯಕ್ಷರಾದ ರವಿ ಪೂಜಾರಿ ನಾರಾವಿ, ಗೌರವಾಧ್ಯಕ್ಷರಾದ ವಿಲ್ಸನ್ ಗೋನ್ಸಾಲಿಸ್ ಬೆಳ್ತಂಗಡಿ, ಉಪಾಧ್ಯಕ್ಷರಾದ ಉಮೇಶ್ ಕುಲಾಲ್ ಗುರುವಾಯನಕೆರೆ, ಪ್ರಧಾನ ಕಾರ್ಯದರ್ಶಿ ದಾಮೋದರ್ ಗುರುವಾಯನಕೆರೆ, ಕೋಶಾಧಿಕಾರಿ ಸುಜಿತ್ ರೈ ಪದ್ಮುಂಜ, ಕ್ರೀಡಾ ಕಾರ್ಯದರ್ಶಿ ಸಂದೀಪ್ ಪೊಳಲಿ ಹಾಗೂ ಛಾಯಾ ಕಾರ್ಯದರ್ಶಿ ಸಂದೇಶ್ ನಿಡ್ಲೆ ಉಪಸ್ಥಿತರಿದ್ದರು.


ಅಲ್ಲದೆ, ವಲಯದ ಮಾಜಿ ಅಧ್ಯಕ್ಷರಾದ ಉಮೇಶ್ (ರಾಕೇಶ್ ಸ್ಟುಡಿಯೋ, ಟಿ.ಬಿ. ಕ್ರಾಸ್ ಉಜಿರೆ), ಅಶೋಕ್ ಆಚಾರ್ಯ ನಾವೂರು, ಉಮೇಶ್ ಮದ್ದಡ್ಕ ಸೇರಿದಂತೆ ವಲಯದ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಸರ್ವ ಸದಸ್ಯರು ಈ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ: ಮನು ಮದ್ದಡ್ಕ









