






ಬೆಳ್ತಂಗಡಿ : ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ಇರುವ ಪೃಥ್ವಿ ಮಹಲ್ ಬಿಲ್ಡಿಂಗ್ನ ಪ್ರಥಮ ಅಂತಸ್ತಿನಲ್ಲಿರುವ ಶ್ರೀ ಗೋಕರ್ಣನಾಥ ಕೋ-ಓಪರೇಟಿವ್ ಬ್ಯಾಂಕ್ನ ನವೀಕೃತ ಶಾಖೆಯ ಉದ್ಘಾಟನೆ ಹಾಗೂ ಗ್ರಾಹಕರ ಸಭೆಯು ಅ.23ರಂದು ನಡೆಯಿತು.
ಶ್ರೀ ಗೋಕರ್ಣನಾಥ ಕೋ ಓಪರೇಟಿವ್ ಬ್ಯಾಂಕ್ ಅಧ್ಯಕ್ಷರಾದ ಚಂದ್ರಶೇಖರ ಕುಮಾರ್ ಅವರು ನವೀಕೃತ ಶಾಖೆಯ ಉದ್ಘಾಟನೆಯನ್ನು ನೆರವೇರಿಸಿ ಬಳಿಕ ನಡೆದ ಗ್ರಾಹಕರ ಸಭೆಯ ಅಧ್ಯಕ್ಷತೆ ವಹಿಸಿ, ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದರು.


ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕಿ, ಪರಿಕ್ರಮ ರೆಸಿಡೆನ್ಸಿ ಕಟ್ಟಡ ಮಾಲಕರಾದ ಉಮಾ ಆರ್. ರಾವ್ ಹಾಗೂ ಶಾಖೆಯ ಉಸ್ತುವಾರಿ ನಿರ್ದೇಶಕರಾದ ಕೆ. ರಮೇಶ್ ಬಂಗೇರ ಅವರು ಭಾಗವಹಿಸಿ ಮಾತನಾಡಿ ಬ್ಯಾಂಕ್ನ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಬ್ಯಾಂಕ್ನ ಉಪಾಧ್ಯಕ್ಷ ಜಯರಾಮ್ ಪೂಜಾರಿ, ನಿರ್ದೇಶಕರಾದ ಜಯರಾಮ್ ಕಾರಂದೂರು, ರಾಜೇಶ್ ಸುವರ್ಣ, ಶ್ರವಣ್ ಕುಮಾರ್, ಗಾಯತ್ರಿ ಗಣೇಶ್, ಜಗದೀಶ್ ಎನ್., ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ್ ಪಿ., ಶಾಖಾಧಿಕಾರಿ ರಶ್ಮಿ, ಮಾಜಿ ನಿರ್ದೇಶಕರಾದ ಜೈ ಶಂಕರ್ ಮತ್ತು ಗಂಗಾಧರ ಮಿತ್ತಮಾರು, ಸಿಬ್ಬಂದಿ ವರ್ಗದವರು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.
ಗ್ರಾಹಕಿ ದಿವ್ಯ ಪ್ರಾರ್ಥಿಸಿದರು. ಶಾಖೆಯ ಉಸ್ತುವಾರಿ ನಿರ್ದೇಶಕ ಕೆ. ರಮೇಶ್ ಬಂಗೇರ ಅವರು ಸ್ವಾಗತಿಸಿ, ಶಾಖಾಧಿಕಾರಿ ರಶ್ಮಿ ವಂದಿಸಿದರು.









