​ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಬೆಳ್ತಂಗಡಿಯ ಕೀರ್ತಿಕಾ ಮತ್ತು ಯಶ್ಮಿತಾ ಆಯ್ಕೆ!

0

ಬೆಳ್ತಂಗಡಿ: (ಅ.17) ಉತ್ತರ ಕನ್ನಡ ಜಿಲ್ಲೆ ಕುಮಟಾ ಮಹಾತ್ಮಾ ಗಾಂಧಿ ಕ್ರೀಡಾoಗಣದಲ್ಲಿ ಅಕ್ಟೋಬರ್ 17 ರಂದು ನಡೆದ 17 ರ ವಯೋಮಾನದ ರಾಜ್ಯಮಟ್ಟದ ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಪಾಣೆಕಲ್ಲು ನಿವಾಸಿ ಕು. ಕೀರ್ತಿಕಾ ಮತ್ತು ಮೊಗ್ರು ಗ್ರಾಮದ ಪರಕ್ಕಾಜೆ ನಿವಾಸಿ ಯಶ್ಮಿತಾ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಂದಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂದಾರು ಗ್ರಾಮದ ಪಾಣೆಕಲ್ಲು ನಿವಾಸಿ ಶ್ರೀಮತಿ ಸುಮಿತ್ರಾ ಮತ್ತು ಶಿವಪ್ಪ ದಂಪತಿಗಳ ಪುತ್ರಿ ಕು. ಕೀರ್ತಿಕಾ ಹಾಗೂ ಮೊಗ್ರು ಗ್ರಾಮದ ಪರಕ್ಕಾಜೆ ನಿವಾಸಿ ಶ್ರೀಮತಿ ನೀಲಾವತಿ ಮತ್ತು ರಾಮಣ್ಣ ಗೌಡ ದಂಪತಿಗಳ ಪುತ್ರಿ ಕು. ಯಶ್ಮಿತಾ ಇವರಿಬ್ಬರು ಬಂದಾರು ಪ್ರಾಥಮಿಕ ಶಾಲೆಯಲ್ಲಿ 8 ನೇ ತರಗತಿ ವಿದ್ಯಾಭ್ಯಾಸ ಪೂರೈಸಿ, ಮುಂಡಾಜೆ ಪ್ರೌಢಶಾಲೆಯಲ್ಲಿ 10 ತರಗತಿ ವ್ಯಾಸಂಗ ಮಾಡುತಿದ್ದಾರೆ. ಇದೇ ಬರುವ ಡಿಸೆಂಬರ್ ರಾಜಸ್ಥಾನದಲ್ಲಿ ನಡೆಯುವ ರಾಷ್ಟ್ರಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ.

ಇವರಿಬ್ಬರು ಬಾಲ್ಯದಿಂದಲೇ ವಾಲಿಬಾಲ್ ಪಂದ್ಯಾಟದಲ್ಲಿ ಹಲವಾರು ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ. 17ರ ವಯೋಮಾನದ ರಾಜ್ಯ ಮಟ್ಟದ ಬಾಲಕಿಯರ ವಿಭಾಗದಲ್ಲಿ ಸ್ಪರ್ಧಿಸಿ ದ್ವಿತೀಯ ಸ್ಥಾನ ಪ್ರಶಸ್ತಿ ಪಡೆದು ಇವರಿಬ್ಬರು ಕರ್ನಾಟಕ ತಂಡವನ್ನು ಪ್ರತಿನಿಧಿಸಿ ರಾಷ್ಟ ಮಟ್ಟದ ಪಂದ್ಯಾಟದಲ್ಲಿ ಆಡಲಿದ್ದಾರೆ.

ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾರವರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಇಬ್ಬರ ಸಾಧನೆಗೂ ಮೆಚ್ಚುಗೆ ವ್ಯಕ್ತಪಡಿಸಿ ತಾಲೂಕಿನ ಸಮಸ್ತ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಿದರು.ಬಂದಾರು ಹಾಗೂ ಮೊಗ್ರು ಗ್ರಾಮಸ್ಥರು ಶುಭಹಾರೈಸಿ, ಮೆಚ್ಚುಗೆ ವ್ಯಕ್ತಪಡಿಸಿದರು .

LEAVE A REPLY

Please enter your comment!
Please enter your name here