ದೀಪ್ತಿ- ಜೋಮೇಶ್ ಅವರ ಮಾದರಿ ನಿಶ್ಚಿತಾರ್ಥ ಕಾರ್ಯಕ್ರಮ: ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ

0

ನೆರಿಯ : ನೆರಿಯ ಗ್ರಾಮದ ದೇವಗಿರಿ ಚರ್ಚ್ ಸಭಾಂಗಣದಲ್ಲಿ ನೆರಿಯ ಗ್ರಾಮದ ವೆಲ್ಲಪುಲ್ಲಿ ಥೋಮಸ್ ಮತ್ತು ನೆರಿಯ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಮರಿಯಮ್ಮ ರವರ ಮಗಳು ದೀಪ್ತಿ ಹಾಗೂ ಪುದುವೆಟ್ಟು ಗ್ರಾಮದ ಪೆಲತ್ತೇರಿ ಓನಚ್ಚನ್ ಮತ್ತು ಮೇರಿ ರವರ ಮಗ ಜೋಮೇಶ್ ರವರ ನಿಶ್ಚಿತಾರ್ಥ ಕಾರ್ಯಕ್ರಮ ಅ.19ರಂದು ನಡೆಯಿತು.

ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಸಾಧಕರ ಸನ್ಮಾನ ಕಾರ್ಯಕ್ರಮ ನಡೆಸುವ ಮೂಲಕ ಮಾದರಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಿತು.ಕರ್ನಾಟಕ ಸರ್ಕಾರದ ಗ್ಯಾರಂಟಿ ಅನುಷ್ಠಾನ ಸಮಿತಿ ಬೆಳ್ತಂಗಡಿ ತಾಲೂಕು ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ , ಪಿಎಚ್ಡಿ ಪದವಿ ಪಡೆದ ಉಪನ್ಯಾಸಕ ನೆರಿಯ ಗ್ರಾಮದ ಪುತ್ಯೇಟ್ಟು ಪಡವಿಲ್ ಸೆಬಾಸ್ಟಿಯನ್ ಪಿ.ಎಂ , ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಫರ್ನಾಂಡೀಸ್ ಹಳ್ಳಿಮನೆ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿ ನೂತನ ಸದಸ್ಯ ರೋಹಿ ಪುದುವೆಟ್ಟು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸೆಬಾಸ್ಟಿಯನ್ ಕಳೆಂಜ , ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ನವೀನ್ ಗೌಡ ಸವಣಾಲು , ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಾಫಿ ಕಾಶಿಪಟ್ಣ , ನೆರಿಯ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಲಕ್ಷ್ಮಣ ಆಲಂಗಾಯಿ , ನೆರಿಯ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಜೆ ಸೆಬಾಸ್ಟಿಯನ್ , ಮಾಜಿ ಸದಸ್ಯರಾದ ರಮೇಶ್ ಕೆ.ಎಸ್ , ಜೋಸೆಫ್ ಪಿ.ಸಿ , ಫಿಲಿಪ್ ಪಿ.ಜೆ ಮುಖಂಡರಾದ ಜಾರ್ಜ್‌ ತೋಟತ್ತಾಡಿ , ಶಾಜು ದೇವಗಿರಿ ,ಅಶ್ವಥ್ ಗಂಡಿಬಾಗಿಲು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here