






ಬೆಳಾಲು : ಶ್ರೀ ಅನಂತಪದ್ಮನಾಭ ದೇವಸ್ಥಾನ ಅನಂತೋಡಿ ಬೆಳಾಲು ಇಲ್ಲಿ ಡಿಸೆಂಬರ್ 25 ಮತ್ತು 26 ರಂದು ನಡೆಯುವ ವಾರ್ಷಿಕ ಜಾತ್ರಾಮಹೋತ್ಸವ ಹಾಗೂ ಪರಿವಾರ ದೈವಗಳ ನರ್ತನ ಸೇವೆಯ ಬಗ್ಗೆ ಪೂರ್ವಭಾವಿ ಸಭೆಯು ದೇವಸ್ಥಾನದ ಅಕ್ಷೋಭ್ಯ ಭವನದಲ್ಲಿ ಅ. 18ರಂದು ನಡೆಯಿತು.
ಸಭೆಯಲ್ಲಿ ವಾರ್ಷಿಕ ಜಾತ್ರಾಮಹೋತ್ಸವಕ್ಕೆ ನೂತನ ಪ್ರಧಾನ ಸಂಚಾಲಕರಾಗಿ ಶ್ರೀಮತಿ ಸರೋಜಿನಿ ಭೀಮಂಡೆ ಇವರನ್ನು ಆಯ್ಕೆ ಮಾಡಲಾಯಿತು ಮತ್ತು ಜಾತ್ರೋತ್ಸವಕ್ಕೆ ವಿವಿಧ ಉಪಸಮಿತಿಗಳಿಗೆ ಸಂಚಾಲಕರು ಹಾಗೂ ಸಹ ಸಂಚಾಲಕರನ್ನು ಆಯ್ಕೆ ಮಾಡಲಾಯಿತು.


ಸಭಾಧ್ಯಕ್ಷತೆಯನ್ನು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಗೌಡ ವಹಿಸಿದ್ದರು. ವೇದಿಕೆಯಲ್ಲಿ ವ್ಯವಸ್ಥಾಪನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್ ಕೇರ್ಮುನ್ನಾಯ, ವ್ಯವಸ್ಥಾಪನಾ ಸಮಿತಿಯ ಉಪಾಧ್ಯಕ್ಷೆ ಮಮತಾ ದಿನೇಶ್ ಪೂಜಾರಿ ಉಪ್ಪಾರು, ಮಹಿಳಾ ಸಮಿತಿಯ ಅಧ್ಯಕ್ಷೆ ಹೇಮಲತಾ ಶ್ರೀನಿವಾಸ್, ಬೆಳಾಲುಗುತ್ತು ಮನೆಯ ಹೇಮಲತಾ ಜೀವಂಧರ ಕುಮಾರ್ ಜೈನ್, ಭಜನಾ ಮಂಡಳಿಯ ಅಧ್ಯಕ್ಷ ಹರೀಶ್ ಪೂಜಾರಿ ಪೋಸೊಟ್ಟು ಉಪಸ್ಥಿತರಿದ್ದರು.
ಸಭೆಯಲ್ಲಿ ವಿವಿಧ ಬೈಲುವಾರು ಸಮಿತಿಯ ಸದಸ್ಯರು,ಮಹಿಳಾ ಸಮಿತಿಯ ಗೌರವಾಧ್ಯಕ್ಷೆ ವಿದ್ಯಾ ಶ್ರೀನಿವಾಸ್, ಹಿರಿಯ ಸದಸ್ಯರಾದ ಉದಿತ್ ಕುಮಾರ್ ಜೈನ್, ದೇಜಪ್ಪ ಗೌಡ ಅರಣೆಮಾರು, ಸುಂದರ ಎಂ ಕೆ,ಜಾರಪ್ಪ ಗೌಡ ಅರಣೆಮಾರು,ಬಾಬು ಆಚಾರ್ಯ ಸೀತಾರಾಮ ಬಿ.ಎಸ್, ಶ್ರೀನಿವಾಸಗೌಡ ಗಣಪನಗುತ್ತು, ಮೋನಪ್ಪ ಪೂಜಾರಿ ಪೋಸೋಟ್ಟು , ಅನಂತೇಶ್ವರ ಭಜನಾ ಮಂಡಳಿಯ ಪದಾಧಿಕಾರಿಗಳು, ಅನಂತೇಶ್ವರ ಫ್ರೆಂಡ್ಸ್ ಇದರ ಪದಾಧಿಕಾರಿಗಳು ಮತ್ತು ಊರಿನ ಭಕ್ತಭಿಮಾನಿಗಳು ಉಪಸ್ಥಿತರಿದ್ದರು.
ವ್ಯವಸ್ಥಾಪನಾ ಸಮಿತಿಯ ಕಾರ್ಯದರ್ಶಿ ಸತೀಶ್ ಗೌಡ ಎಳ್ಳುಗದ್ದೆ ಸಾಗತವಿತ್ತು, ದೇವಸ್ಥಾನದ ಲೆಕ್ಕ ಪರಿಶೋಧಕ ನಾರಾಯಣ ಗೌಡ ಎಳ್ಳುಗದ್ದೆ ಅನಂತ ಚತುರ್ದಶಿಯ ಲೆಕ್ಕಪತ್ರ ವಾಚಿಸಿದರು. ದೇವಸ್ಥಾನದ ಕಚೇರಿ ಮೇಲ್ವಿಚಾರಕ ಶಿವಪ್ರಸಾದ್ ಗೊಲ್ಲ ಮತ್ತು ಕಿರಣ್ ಸುವರ್ಣ ಇರಂತ್ಯಾರು ಕಾರ್ಯಕ್ರಮ ನಿರೂಪಿಸಿ, ಹೇಮಲತಾ ಶ್ರೀನಿವಾಸ್ ಧನ್ಯವಾದವಿತ್ತರು.









