






ಬೆಳ್ತಂಗಡಿ: 37 ವರ್ಷಗಳಿಂದ ಚಿನ್ನ, ಬೆಳ್ಳಿ ಆಭರಣಗಳ ಮೂಲಕ ಗ್ರಾಹಕರ ಪ್ರೀತಿ, ವಿಶ್ವಾಸ ಮತ್ತು ನಂಬಿಕೆಯನ್ನು ಗಳಿಸಿರುವ ಬೆಳ್ತಂಗಡಿ ನಗರದ ಮೆ। ಬಿ.ಪುಂಡಲೀಕ ಬಾಳಿಗಾ ಜುವೆಲ್ಲರ್ಸ್ ಚಿನ್ನಾಭರಣ ಮಳಿಗೆ ಇದೀಗ ನವೀಕೃತ ವಿನ್ಯಾಸದೊಂದಿಗೆ ಮೂರು ಮಾರ್ಗದ ಬಳಿ ಸುವರ್ಣ ಕಾಂಪ್ಲೆಕ್ಸ್ಗೆ ಸ್ಥಳಾಂತರಗೊಂಡು, ಅ.19ರಂದು ಶುಭಾರಂಭಗೊಂಡಿತ್ತು.
ಚಿನ್ನಾಭರಣ ಮಳಿಗೆಯ ಉದ್ಘಾಟನೆಯನ್ನು ಪುಂಜಾಲಕಟ್ಟೆ ಪುಂಡಲೀಕ ಬಾಳಿಗಾ ಮಾಲಕರಾದ ಬಿ. ಪುರುಷೋತ್ತಮ ಬಾಳಿಗಾ ನೆರವೇರಿಸಿ ಶುಭಹಾರೈಸಿದರು.


ಈ ಸಂದರ್ಭದಲ್ಲಿ ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ವಿ. ಪ. ಸದಸ್ಯ ಪ್ರತಾಪ್ ಸಿಂಹ ನಾಯಕ್, ಬೆಳ್ತಂಗಡಿ ಪುಂಡಲೀಕ ಜ್ಯುವೆಲ್ಲರ್ಸ್ ನ ಮಾಲಕರಾದ ಬಿ. ಜಗದೀಶ್ ಬಾಳಿಗಾ, ಬೆಳ್ತಂಗಡಿ ವರ್ತಕರ ಸಂಘದ ಅಧ್ಯಕ್ಷ ಶಶಿಧರ್ ಪೈ, ಸುವರ್ಣ ಕಾಂಪ್ಲೆಕ್ಸ್ ಮಾಲಕ ಭಾನುಪ್ರಸನ್ನ, ಅರ್ಚಕ ಶ್ರೀನಿವಾಸ ಭಟ್ ಲಾಯಿಲ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಶುಭಾರಂಭದ ಪ್ರಯುಕ್ತ ಚಿನ್ನಾಭರಣ ವೇಸ್ಟೇಜ್ ಮೇಲೆ ನಿಯಮಿತ ರಿಯಾಯಿತಿ, 4 ಗ್ರಾಂ ಮೇಲ್ಪಟ್ಟ ಟ್ರೈನ್ ಆಭರಣಗಳ ಮೇಲೆ ವೇಸ್ಟೇಜ್ ಶೇ. 9 (ಪುನಃ ಮಂಜೂರಿ ಇಲ್ಲ), ನಾಣ್ಯಗಳ ಮೇಲೆ ವೇಸ್ಟೇಜ್ 8 ಗ್ರಾಂ. 1%, 4. 2%, 2. 2%, 1. 2% 22. 4 ಆರ್ಡರ್ ಮಾಡಿದ ಆಭರಣ ಹಾಗೂ ಹರಳುಗಳಿರುವ ಆಭರಣಗಳಿಗೆ ಅನ್ವಯಿಸುವುದಿಲ್ಲ ಹಾಗೂ ಇದು ಅ.19 ರಿಂದ ಅ. 26 ರ ವರೆಗೆ ಮಾತ್ರ ಅನ್ವಯಿಸುತ್ತದೆ.









