






ಬಳಂಜ: ತುಳುನಾಡಿನಲ್ಲಿ ಧಾರ್ಮಿಕ ಆಚರಣೆಗಳಿಗೆ ವಿಶೇಷ ಮಹತ್ವ ಇದ್ದು ಇಲ್ಲಿನ ಜನರು ದೇವರ ಆರಾದನೆಯಲ್ಲಿ ನಂಬಿಕೆಯುಳ್ಳವರು.ಹಿರಿಯ ಕಾಲದಿಂದಲೂ ವಿವಿಧ ಧಾರ್ಮಿಕ ಆಚರಣೆಗಳನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಿಕೊಂಡು ಬರುತ್ತಿದ್ದು ಇದು ಮುಂದಿನ ತಲೆಮಾರು ಕೂಡ ಆಚರಿಸುವಂತಾಗಬೇಕು. ಗಣೇಶ ಚತುರ್ಥಿ, ಶಾರದಾ ಪೂಜೆಯಂತಹ ಆಚರಣೆಗಳು ನಿರಂತರವಾಗಿ ನಡೆಯಬೇಕು ಬಳಂಜದಲ್ಲಿ ಕಳೆದ ನಾಲ್ಕುವರ್ಷಗಳಿಂದ ಅದ್ದೂರಿಯಾಗಿ ಶಾರದ ಪೂಜೆ ಆಚರಿಸುತ್ತಾ ಬಂದಿರುವುದು ಈ ಭಾಗದ ಜನರ ಧಾರ್ಮಿಕ ನಂಬಿಕೆಯನ್ನು ಎತ್ತಿ ತೋರಿಸುತ್ತದೆ ಎಂದು ಶ್ರಿ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ವಿ. ಶೆಟ್ಟಿ ಹೇಳಿದರು.
ಅವರು ಅ. 18ರಂದು ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಬ್ರಹ್ಮ ಶ್ರಿ ನಾರಾಯಣ ಗುರು ಸೇವಾ ಸಮಿತಿ ಬಳಂಜ ಇದರ ವತಿಯಿಂದ ನಡೆದ 4 ನೇ ವರ್ಷದ ಸಾರ್ವಜನಿಕ ಶ್ರಿ ಶಾರದೋತ್ಸವದ ದಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಕೆ ಪಿ ಸಿ ಸಿ ಪ್ತದಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಾತನಾಡಿ ಪ್ರತಿಯೊಬ್ಬರಲ್ಲೂ ದಾರ್ಮಿಕ ಪ್ರಜ್ನೆ ಬೆಳೆದಾಗ ಸುಂದರ ಸಮಾಜ ನಿರ್ಮಾಣ ಸಾದ್ಯ. ಬಳಂಕ ಶ್ರಿ ಗುರುನಾರಾಯಣ ಸಂಘ 48 ವರ್ಷಗಳಿಂದ ಹಿರಿಯರ ಮಾರ್ಗದರ್ಶನದಿಂದ ಹಲವಾರು ಕಾರ್ಯಕ್ರಮ ನಡೆಸುತ್ತಾ ಬಂದಿರುವುದು ಅಬಿನಂದನೀಯ. ಇನ್ನೆರಡು ವರ್ಷಗಳಲ್ಲಿ ಐವತ್ತನೇ ವರ್ಷ ಆಚರಿಸಲು ಸಜ್ಜಾಗಿದ್ದು ಇದನ್ನು ಅರ್ಥ ಪೂರ್ಣವಾಗಿ ಆಚರಿಸಬೇಕು ಇದಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.


ಉಜಿರೆ ಬದುಕು ಕಟ್ಟೋಣ ತಂಡದ ಸಂಚಾಲಕ ಉದ್ಯಮಿ ಕೆ. ಮೋಹನ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ದೇವರ ಆರಾದನೆ ಎಂದರೆ ಪ್ರಕ್ರುತಿಯ ಆರಾಧನೆ. ನಾವೆಲ್ಲಾ ದೇವರ ಮೇಲೆ ನಂಬಿಕೆ ಇಟ್ಟವರು ಅದಕ್ಕಾಗಿ ಇಂತಹ ಆಚರಣೆ ಆಚರಿಸಲು ಸಾದ್ಯವಾಗಿದೆ. ಬಳಂಜದಲ್ಲಿ ಹಲವಾರು ದಾರ್ಮಿಕ ಆಚರಣೆ ಜೊತೆ ಶಿಕ್ಷಣ ಸೇವೆಗಳು ನಡೆಯುತ್ತಿದ್ದು ಇದು ಇಲ್ಲಿನ ಜನರ ಮೌಲ್ಯವನ್ನು ಎತ್ತರಕ್ಕೆ ಏರಿಸಿದೆ ಎಂದರು.

ಕಾರ್ಯಮದಲ್ಲಿ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಬಂಗೇರ ಬ್ರಿಗೇಡ್ ಅಧ್ಯಕ್ಷೆ ಬಿನುತಾ ಬಂಗೇರ, ಧಾರ್ಮಿಕ ಮುಖಂಡ ಕಿರಣ್ ಕುಮಾರ್ ಪುಷ್ಪಗಿರಿ, ಸುವರ್ಣ ಸಾಂಸ್ಕೃತಿಕ ಪ್ರತಿಷ್ಟಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ, ಕರ್ನಾಟಕ ಸಾವಯವ ಕೃಷಿ ಯೋಜನೆಯ ಆಡಳಿತ ನಿರ್ದೇಶಕ ಮೋಹನ್ ಗೌಡ ಕಲ್ಮಂಜ, ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ, ಅಳದಂಗಡಿ ಮೆಸ್ಕಾಂ ಜ್ಯೂನಿಯರ್ ಇಂಜಿನಿಯರ್ ಸಂದೀಪ್ ಕುಮಾರ್ ಕೆ.ಎಸ್, ಬೆಳ್ತಂಗಡಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ತುಕರಾಮ್ ಬಿ. ಶುಭಹಾರೈಸಿದರು. ಬಳಂಜ ಬ್ರಹ್ಮ ಶ್ರಿ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಮಹಿಳಾ ಬಿಲ್ಲವ ವೇದಿಕೆಯ ಅದ್ಯಕ್ಷೆ ಭಾರತಿ ಸಂತೋಷ್ , ಯುವ ಬಿಲ್ಲವ ವೇದಿಕೆಯ ಅದ್ಯಕ್ಷ ಶರತ್ ಅಂಚನ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಾರದೋತ್ಸವದ ವತಿಯಿಂದ ವೀರು ವಿ. ಶೆಟ್ಟಿ, ಸುಮಂತ್ ಕುಮಾರ್ ಜೈನ್, ಮುಖ್ಯ ಮಂತ್ರಿ ಪದಕ ಪ್ರಶಸ್ತಿ ಪಡೆದ ಪೋಲಿಸ್ ಸಿಬ್ಬಂದಿ ವಿಜಯ್ ಇವರನ್ನು ಅಭಿನಂದಿಸಲಾಯಿತು. ಸಂತೋಷ್ ಪಿ ಕೋಟ್ಯಾನ್ ಸ್ವಾಗತಿಸಿ ಚಂದ್ರಹಾಸ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಸಾರ್ವಜನಿಕರಿಗೆ ವಿವಿಧ ಸ್ಪರ್ದೆಗಳು ನಡೆಯಿತು.









