ಕೊಕ್ಕಡ : ಸೌತಡ್ಕದಲ್ಲಿ ಅಂಗಡಿ ವ್ಯಾಪಾರ ವಿಚಾರಕ್ಕೆ ಗಲಾಟೆ: ಧರ್ಮಸ್ಥಳ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲು

0

ಬೆಳ್ತಂಗಡಿ ಕೊಕ್ಕಡದ ಸೌತಡ್ಕ ದೇವಸ್ಥಾನದ ಬಳಿ ಅಂಗಡಿ ವ್ಯಾಪಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ, ಹಲ್ಲೆ ಹಾಗೂ ಆಸ್ತಿ ಪಾಸ್ತಿ ಹಾನಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್ (FIR) ದಾಖಲಾಗಿವೆ.

ಪ್ರಕರಣ 1: ಅಂಗಡಿಗೆ ನುಗ್ಗಿ ಹಾನಿ, ಹಲ್ಲೆ ಮತ್ತು ಜೀವ ಬೆದರಿಕೆಬೆಳ್ತಂಗಡಿಯ ಕೊಕ್ಕಡ ನಿವಾಸಿ ಕೃಷ್ಣ ಭಟ್ ಎಂಬುವರು ನೀಡಿದ ದೂರಿನಂತೆ, ಅಕ್ಟೋಬರ್ 18, 2026 ರಂದು ಬೆಳಿಗ್ಗೆ ಕೊಕ್ಕಡ ಗ್ರಾಮದ ಶ್ರೀ ಮಹಾ ಗಣಪತಿ ಸೇವಾ ಟ್ರಸ್ಟ್‌ನ ಕಟ್ಟಡದ ಅಂಗಡಿಯಲ್ಲಿ ರಾಘವ ಭಂಡಾರಿ ಹಾಗೂ ಅವರ ಕೆಲಸದವರು ವ್ಯಾಪಾರ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಈ ಹಿಂದೆ ಅದೇ ಅಂಗಡಿಯಲ್ಲಿ ವ್ಯಾಪಾರ ನಡೆಸುತ್ತಿದ್ದ ಹರೀಶ್, ಅವರ ಹೆಂಡತಿ, ಮಕ್ಕಳು ಹಾಗೂ ಇತರರು ಏಕಾಏಕಿ ಅಂಗಡಿಯೊಳಗೆ ಅಕ್ರಮವಾಗಿ ನುಗ್ಗಿದ್ದಾರೆ.

ಅಂಗಡಿಯಲ್ಲಿದ್ದ ಸುಮಾರು ₹25,000 ಅಂದಾಜು ಮೌಲ್ಯದ ಸ್ವತ್ತು ಹಾಗೂ ಕಟ್ಟಡಕ್ಕೆ ಹಾನಿ ಉಂಟುಮಾಡಿದ್ದಲ್ಲದೆ, ರಾಘವ ಭಂಡಾರಿ ಮತ್ತು ಅವರ ಕೆಲಸದವರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ **ಅ.ಕ್ರ: 78/2026, ಕಲಂ: 115(2), 118(1), 324(4), 329(4), 351(2), 352 R/W 190 BNS – 2023** ರಂತೆ ಪ್ರಕರಣ ದಾಖಲಾಗಿದೆ.ಪ್ರಕರಣ 2: ಸೌತಡ್ಕ ಬಳಿ ಅಂಗಡಿಗೆ ನುಗ್ಗಿ ಹಲ್ಲೆ ಹಾಗೂ ದೌರ್ಜನ್ಯಇನ್ನೊಂದು ಘಟನೆಯಲ್ಲಿ, ಸೌತಡ್ಕ ದೇವಸ್ಥಾನದ ಬಳಿ ಹರಿಶ್ಚಂದ್ರ ಎಂಬುವರು ಅಂಗಡಿ ನಡೆಸುತ್ತಿದ್ದಾಗ, ಆರೋಪಿಗಳಾದ ರಾಘವ ಭಂಡಾರಿ, ಲಿಂಗಪ್ಪ, ಕಿಶೋರ್ ಹಾಗೂ ಚೇತನ್ ಎಂಬುವರು ಅಂಗಡಿಗೆ ಅಕ್ರಮವಾಗಿ ಪ್ರವೇಶಿಸಿದ್ದಾರೆ.

ಅಂಗಡಿಯಲ್ಲಿದ್ದ ಸಾಮಗ್ರಿಗಳನ್ನು ಹೊರಗೆ ಎಸೆದು, ಹರಿಶ್ಚಂದ್ರ, ಅವರ ಪತ್ನಿ ಮತ್ತು ಕೆಲಸಗಾರರಿಗೆ ಅವಾಚ್ಯ ಶಬ್ದಗಳಿಂದ ಬೈದು, ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಿದ್ದಲ್ಲದೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಹರಿಶ್ಚಂದ್ರ ಅವರ ಪತ್ನಿ ದೂರು ನೀಡಿದ್ದಾರೆ.ಈ ದೂರಿನನ್ವಯ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ **ಅ.ಕ್ರ: 79/2026, ಕಲಂ: 329(4), 324(4), 352, 74, 118(1), 115(2), 351(2) R/W 3(5) BNS – 2023** ರಂತೆ ಮತ್ತೊಂದು ಪ್ರಕರಣ ದಾಖಲಾಗಿದೆ.ಪ್ರಸ್ತುತ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here