






ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ದರ್ಗಾ ಗಳಲ್ಲೊಂದಾದ ಗೇರುಕಟ್ಟೆ ಪರಪ್ಪು ವಲಿಯುಲ್ಲಾಹಿ ಫಕೀರ್ ಮುಹಿಯುದ್ದೀನ್ ದರ್ಗಾ ಶರೀಫ್ ನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುವ ಉರೂಸ್ ಕಾರ್ಯಕ್ರಮವು 2026 ನೇ ಡಿಸೆಂಬರ್ 12 ರಂದು ನಡೆಯಲಿದೆ ಎಂದು ಮೊಹಲ್ಲಾದ ಖಾಝಿಯಾದ ಸುಲ್ತಾನುಲ್ ಉಲಮಾ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ಘೋಷಿಸಿದ್ದಾರೆ.
ಆ ಪ್ರಯುಕ್ತ ಡಿಸೆಂಬರ್ 08 ರಿಂದ 12 ರವರೇಗೆ ತಾಜುಲ್ ಉಲಮಾ ಅನುಸ್ಮರಣೆ, ಧಾರ್ಮಿಕ ಕಾರ್ಯಕ್ರಮವು ಜಮಾಅತ್ ಗೌರವಾದ್ಯಕ್ಷರಾದ ಅಸ್ಸಯ್ಯದ್ ಜಮಲು ಲೈಲಿ ಝೈನುಲ್ ಆಬಿದೀನ್ ತಂಙಳ್ ಕಾಜೂರುರವರ ಗೌರವಾದ್ಯಕ್ಷತೆಯಲ್ಲಿ ನಡೆಯಲಿದೆ.ಆ ಪ್ರಯುಕ್ತ ಅ 16 ರಂದು ಶುಕ್ರವಾರ ಜುಮಾ ನಮಾಝಿನ ನಂತರ ಮಸೀದಿಯಲ್ಲಿ ನೂತನ ಉರೂಸ್ ಸಮಿತಿಯನ್ನು ರಚಿಸಲಾಯಿತು.


ಅಧ್ಯಕ್ಷತೆಯನ್ನು ಆಡಳಿತ ಸಮಿತಿಯ ಅಧ್ಯಕ್ಷರಾದ ಹಾಫಿಳ್ ಮಹಮ್ಮದ್ ಹನೀಫ್ ಮಿಸ್ಬಾಹಿ ವಹಿಸಿದ್ದರು. ಖತೀಬರಾದ ಎಫ್ ಎಚ್ ಮಹಮ್ಮದ್ ಮಿಸ್ಬಾಹಿ ಅಲ್ ಫುರ್ಖಾನಿ ದುವಾ ನೆರವೇರಿಸಿ ನೂತನ ಸಮಿತಿ ರಚಿಸಿದರು. ಆಡಳಿತ ಸಮಿತಿ ಉಪಾದ್ಯಕ್ಷರಾದ ಕುಂಞ ಅಬ್ದುಲ್ಲ ದಾರಿಮಿ ಹಾಗೂ ಬಹುತೇಕ ಜಮಾಅತರು ಉಪಸ್ಥಿತರಿದ್ದರು.
ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಕಾಜೂರು ತಂಙಳ್, ಅಧ್ಯಕ್ಷರಾಗಿ ಇರ್ಫಾನ್ ಎಸ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಕರೀಮ್ ಗೇರುಕಟ್ಟೆ, ಕೋಶಾಧಿಕಾರಿಯಾಗಿ ಅಬ್ದುಲ್ ಬಶೀರ್, ಉಪಾದ್ಯಕ್ಷರಾಗಿ ಸಂಶೀರ್ ಸಖಾಫಿ, ಹಮೀದ್ ಜಿ.ಡಿ, ಜೊತೆ ಕಾರ್ಯದರ್ಶಿಯಾಗಿ ಹಾರಿಶ್ ಮುಳ್ಳಗುಡ್ಡೆ, ನೌಷದ್ ಗೇರುಕಟ್ಟೆ, ಸದಸ್ಯರುಗಳಾಗಿ ಮಹಮ್ಮದ್ ಎನ್ ಎನ್, ಕೆ ಪಿ ರಫೀಕ್, ಸಿದ್ದೀಕ್ ಜಿ ಎಚ್, ಮಹಮ್ಮದ್ ಶರೀಫ್ ಜಿ, ಶಂಸು ಪದಗೋಳಿ, ರಿಜ್ವಾನ್ ಎಸ್ ಹಾಗೂ ಗೌರವ ಸಲಹೆಗಾರರಾಗಿ ಮಹಮ್ಮದ್ ಹನೀಫ್ ಮಿಸ್ಬಾಹಿ, ಅಬ್ದುಲ್ಲ ಕುಂಞ ದಾರಿಮಿ ಆಯ್ಕೆಯಾದರು.









