ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿಯಾಗಿದ್ದು ಉಜಿರೆ ಎಸ್ಡಿಎಂ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಸೌಜನ್ಯ ಅವರ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಮರು ತನಿಖೆಗೆ ಸುಪ್ರೀಂಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿರುವ ನ್ಯಾಯವಾದಿಗಳು ಹಾಗೂ ಹೋರಾಟಗಾರರಿಗೆ ಅಭಿನಂದನೆ ಸಲ್ಲಿಸುವ ಉzಶದಿಂದ ಅ.೧೦ರಂದು ರಾಷ್ಟ್ರೀಯ ಹಿಂದು ಜಾಗರಣ ವೇದಿಕೆ ಮತ್ತು ಪ್ರಜಾಪ್ರಭುತ್ವ ವೇದಿಕೆಯ ವತಿಯಿಂದ ಗೌರವ ಅಭಿನಂದನಾ ಸಭೆ ಮತ್ತು ಸೌಜನ್ಯ ಪರ ನ್ಯಾಯದ ಹೋರಾಟಗಾರರ ಸಹಭಾಗಿತ್ವದಲ್ಲಿ ಬೃಹತ್ ನ್ಯಾಯದ ನಡಿಗೆ ಮೆರವಣಿಗೆ ನಡೆಯಿತು.
ಬೆಳಗ್ಗೆ ಉಜಿರೆಯ ಕುಂಜರ್ಪದಿಂದ ಆರಂಭವಾದ ಮೌನ ಮೆರವಣಿಗೆ ಬೆಳ್ತಂಗಡಿ ಮುಖ್ಯ ರಸ್ತೆಯ ಮೂಲಕ ಸಾಗಿ ತಾಲೂಕು ಕ್ರೀಡಾಂಗಣ ತಲುಪಿತು.
ಬಳಿಕ ನಡೆದ ಅಭಿನಂದನಾ ಸಭೆಯಲ್ಲಿ ಮಾತನಾಡಿದ ರಾಷ್ಟ್ರೀಯ ಹಿಂದು ಜಾಗರಣ ವೇದಿಕೆ ಮತ್ತು ಪ್ರಜಾಪ್ರಭುತ್ವ ವೇದಿಕೆಯ ಮುಖ್ಯಸ್ಥರಾದ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು ಪ್ರಕರಣಕ್ಕೆ ಸಂಬಂಧಿಸಿದ ಸಾPಗಳು ನಾಶವಾಗಿವೆ ಎಂದು ಆರೋಪಿಸಿದರು.
ಸೌಜನ್ಯ ನಾಪತ್ತೆಯಾದ ಸಂದರ್ಭದಿಂದಲೇ ಹಲವು ದಾಖಲೆಗಳು ನಾಶವಾಗಿವೆ. ಈ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ ಅವರು ಸೌಜನ್ಯ ನಾಪತ್ತೆಯಾದಾಗಿನಿಂದ ಎಲ್ಲಾ ದಾಖಲೆಗಳನ್ನು ನಾಶ ಮಾಡಿದ ಎಲ್ಲಾ ತನಿಖಾಧಿಕಾರಿಗಳಿಗೂ ಧಿಕ್ಕಾರ ಎಂದು ಹೇಳಿದರು. ಸೌಜನ್ಯ ಪರ ಹೋರಾಟಗಾರರು ಎಲ್ಲದಕ್ಕೂ ತಯಾರಾಗಿ ನಿಂತವರು. ಅಧಿಕಾರಿಗಳು ಮಾಡಿದ ತಪ್ಪನ್ನು ನಾವು ಜನರ ಮುಂದಿಟ್ಟಿzವೆ ಎಂದು ಅವರು ಹೇಳಿದರು.
ಆ ಎರಡು ವಿಡಿಯೋಗಳು ಎಲ್ಲಿವೆ?: ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದ ವೇಳೆ ಅಂದಿನ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್ ಸ್ಥಳಕ್ಕೆ ಭೇಟಿ ನೀಡಿ ವಿಡಿಯೋ ದೃಶ್ಯಾವಳಿಗಳು ಲಭ್ಯವಾಗಿವೆ. ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಹೇಳಿದ್ದರು. ಹಾಗಾದರೆ ಆ ಎರಡು ಸಿಸಿಟಿವಿ ದೃಶ್ಯಾವಳಿಗಳು ಈಗ ಎಲ್ಲಿವೆ? ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿವೆಯೇ, ಮಂಗಳೂರು ಎಸ್ಪಿ ಕಚೇರಿಯಲ್ಲಿವೆಯೇ ಅಥವಾ ನ್ಯಾಯಾಲಯದಲ್ಲಿವೆಯೇ ಎಂದು ಪ್ರಶ್ನಿಸಿದ ಮಹೇಶ್ ಶೆಟ್ಟಿ ತಿಮರೋಡಿ ಅವರು ನೇತ್ರಾವತಿ ನದಿ ತೀರದ ಪ್ರದೇಶ ಹಾಗೂ ಬಸ್ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳ ಕುರಿತು ಸಮಗ್ರ ತನಿಖೆ ನಡೆಯಬೇಕು. ಸೌಜನ್ಯ ಪ್ರಕರಣದಲ್ಲಿ ನ್ಯಾಯ ದೊರಕುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು. ನಮಗೆ ನ್ಯಾಯ ಒದಗಿಸಿಕೊಡಿ. ಇಲ್ಲವಾದರೆ ಸೌಜನ್ಯ ಪರ ರಾಜ್ಯಾದ್ಯಂತ ಹೋರಾಟ ನಡೆಸಲಿzವೆ. ನನ್ನ ವಿರುದ್ಧ ಸುಳ್ಳು ಕೇಸ್ ಹಾಕಿ ಒಂದು ತಿಂಗಳಲ್ಲಿ ಆರು, ಏಳು ತಿಂಗಳಲ್ಲಿ ೯ ಕೇಸ್ ಹಾಕಿ ಗಡಿಪಾರಿಗೆ ಆದೇಶ ಮಾಡಲಾಯಿತು. ನಾನು ವಾಪಸ್ ಬರುವಾಗ ಡಿವೈಎಸ್ಪಿ ವಿಜಯ್ ಪ್ರಸಾದ್ ಅಮಾನತು ಆಗಿದ್ದಾರೆ. ಎಸಿ ಸ್ಟೆಲ್ಲಾ ವರ್ಗೀಸ್ ಅವರು ಯಾಕೆ ನನ್ನನ್ನು ಗಡಿಪಾರು ಮಾಡಿದ್ದಾರೆ. ಸೌಜನ್ಯ ಪ್ರಕರಣದಲ್ಲಿ ಯಾಕೆ ತಪ್ಪಿತಸ್ಥರನ್ನು ರಕ್ಷಿಸಲಾಗುತ್ತಿದೆ. ಯಾಕೆ ಇಂತಹ ತಪ್ಪನ್ನು ಮಾಡುತ್ತಿದ್ದೀರಿ. ಪ್ರಕರಣವನ್ನು ನೆಲ ಕಚ್ಚಿಸಿದ ಎಲ್ಲಾ ತನಿಖಾಧಿಕಾರಿಗಳಿಗೆ ಸುಪ್ರೀಂಕೋರ್ಟ್ ಚಾಟಿ ಬೀಸಿದೆ ಎಂದರು.
ಎಸ್ಐಟಿ ತನಿಖಾಧಿಕಾರಿಗಳಿಗೆ ಒತ್ತಡ ಹಾಕಿದರೆ ಮುತ್ತಿಗೆ: ಗಿರೀಶ್ ಮಟ್ಟಣ್ಣವರ್: ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣವರ್ ಮಾತನಾಡಿ ಸೌಜನ್ಯಾಳನ್ನು ಕೊಂದವರು ಯಾರು ಎಂದು ಪೊಲೀಸರು ಮತ್ತು ಜನಪ್ರತಿನಿಧಿಗಳಿಗೆ ಗೊತ್ತಿದೆ. ಆದರೆ ನೀವೇನಾದರು ತನಿಖೆ ಮಾಡಿದರೆ ಹೋರಾಟ ಮಾಡಿದರೆ, ಬಂಧಿಸಿದರೆ ನಿಮಗೆ ವೋಟ್ ಸಿಗುವುದಿಲ್ಲ, ವೋಟು ಕಳೆದುಕೊಳ್ಳುತ್ತೀರಿ ಎಂದು ಕೆಲವರು ಬೆದರಿಕೆ ಹಾಕುತ್ತಿzರೆ ಎಂದರು.
ಮಹೇಶ್ ಶೆಟ್ಟಿ ಅವರ ಗಡಿಪಾರಿಗೆ ಯತ್ನಿಸಿದ ಪರಿಣಾಮ ಇಂದು ಇಷ್ಟೊಂದು ಸಂಖ್ಯೆಯಲ್ಲಿ ಜನರು ಸೇರಿzರೆ. ಸಮಿತಿ ಮಾಡಿರುವುದು ಎಸ್ಐಟಿಗೆ ಬೈಯಲು ಅಲ್ಲ. ನಿಮ್ಮ ಜೊತೆ ನಾವಿzವೆ ಎನ್ನುವುದಕ್ಕೆ ಸಮಿತಿ ರಚಿಸಿzವೆ. ಪ್ರಕರಣ ನಡೆದು ೧೪ ವರ್ಷಗಳಾಯಿತು. ನ್ಯಾಯ ಸಿಗಲು ಇನ್ನೆಷ್ಟು ವರ್ಷಗಳು ಬೇಕು ? ನಿರಂತರವಾಗಿ ಹತ್ಯೆಗಳು ನಡೆಯುತ್ತಿವೆ. ಏಳು ಬರುಡೆಗಳು ಸಿಕ್ಕಿವೆ. ಇದರಲ್ಲಿ ಮೂರರದ್ದು ಡಿಎನ್ಎ ಪತ್ತೆಯಾಗಿದೆ. ಅದನ್ನು ನಮಗೆ ಒಪ್ಪಿಸಿ ಎಂದು ಕುಟುಂಬಸ್ಥರು ವಿನಂತಿಸುತ್ತಿzರೆ. ಹಾಗಿದ್ದರೂ ಅಕ್ರಮವಾಗಿ ಸಮಾಧಿ ಮಾಡಿದ್ದ ಸ್ಥಳಗಳನ್ನು ತೋರಿಸಿಕೊಟ್ಟ ನಮ್ಮನ್ನು ಬುರುಡೆ ಗ್ಯಾಂಗ್ ಎಂದು ಹೇಳುತ್ತಿzರೆ. ಅದರ ಬಗ್ಗೆ ನಮಗೆ ಹೆಮ್ಮೆ ಇದೆ. ಎಸ್ಐಟಿ ತನಿಖೆ ವೇಳೆ ತನಿಖಾಧಿಕಾರಿಗಳಿಗೆ ಒತ್ತಡ ಹಾಕಿದರೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ ಗಿರೀಶ್ ಮಟ್ಟಣ್ಣನವರ್ ನಮ್ಮ ಹೋರಾಟಕ್ಕೆ ಕೈ ಜೋಡಿಸುವಂತೆ ಮನವಿ ಮಾಡಿದರು. ನಮಗೆ ನ್ಯಾಯ ಸಿಗಲೇ ಬೇಕು. ಇಲ್ಲವಾದರೆ ದೊಡ್ಡ ದಂಗೆಗೆ ಕಾರಣವಾಗಲಿದೆ. ವಿನಾ ಕಾರಣ ಗಡಿಪಾರಿಗೆ ಯತ್ನಿಸಿದರೆ, ಪ್ರಕರಣ ದಾಖಲಿಸಿದರೆ ಇನ್ನು ಮುಂದೆ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದರು.
ಸೌಜನ್ಯಗೆ ನ್ಯಾಯ ಸಿಗುವ ಭರವಸೆ ಇದೆ-ಪ್ರಸನ್ನರವಿ: ಮಹಿಳಾ ಹೋರಾಟಗಾರ್ತಿ ಪ್ರಸನ್ನ ರವಿ ಮಾತನಾಡಿ ಸಿಐಡಿ, ಸಿಬಿಐ, ಪೊಲೀಸರು ಹಾಗೂ ವೈದ್ಯರು ಎಸಗಿzರೆ ಎನ್ನಲಾದ ತಪ್ಪುಗಳಿಂದಾಗಿ ಸೌಜನ್ಯಳಿಗೆ ಇನ್ನೂ ನ್ಯಾಯ ದೊರಕಿಲ್ಲ. ಈ ಬಾರಿಯಾದರೂ ನ್ಯಾಯ ಸಿಗುವ ಭರವಸೆ ಇದೆ. ಕಾನೂನಿಗೆ ಗೌರವ ನೀಡಿ ಇಷ್ಟು ದಿನ ಮೌನವಾಗಿzವೆ ಹೊರತು ಹೋರಾಟದಿಂದ ಹಿಂದೆ ಸರಿದಿಲ್ಲ ಎಂದು ಹೇಳಿದರು.
ಹೋರಾಟ ನಿರಂತರವಾಗಿರಲಿದೆ- ಮೋಹಿತ್ ಕುಮಾರ್: ಹೈಕೋರ್ಟ್ ನ್ಯಾಯವಾದಿ ಮೋಹಿತ್ ಕುಮಾರ್ ಮಾತನಾಡಿ ಧರ್ಮಸ್ಥಳದಲ್ಲಿ ೭೪ ಮೃತದೇಹಗಳನ್ನು ಯುಡಿಆರ್ ದಾಖಲಿಸದೆ ಅಕ್ರಮವಾಗಿ ಹೂಳಲಾಗಿದೆ. ಅಸಹಜ ಸಾವುಗಳ ವಿಚಾರ ಹೊರಗಡೆ ಬರಲು ಗ್ರಾಮ ಪಂಚಾಯತ್ ಉಪಾಧ್ಯPರು ಕಾರಣ. ಅವರು ಪ್ರೆಸ್ಮೀಟ್ ಮಾಡದೇ ಇರುತ್ತಿದ್ದರೆ ಈ ವಿಚಾರ ಹೊರ ಬರುತ್ತಿರಲಿಲ್ಲ. ಹೀಗಾಗಿ ಅವರಿಗೆ ಅಭಿನಂದನೆಗಳು ಸಲ್ಲಿಸಬೇಕು ಎಂದರು. ಅ.೧೦ರಂದು ಸಂತೋಷ್ ರಾವ್ ಧರ್ಮಸ್ಥಳದ ಪರಿಸರದ ಇರಲಿಲ್ಲ. ಅಂತಹ ವ್ಯಕ್ತಿಯನ್ನು ಪ್ರಕರಣದಲ್ಲಿ ಹಿಡಿದವರು ಯಾರು? ಅವರನ್ನು ತನಿಖೆ ಮಾಡಿದವರು ಮಹಾಬಲ ಶೆಟ್ಟಿ ಅವರು. ಆದರೆ ಇವರು ಇಲ್ಲಿನ ತನಿಖಾಧಿಕಾರಿ ಅಲ್ಲ. ಹಾಗಾದರೆ ಇವರನ್ನೇಕೆ ಅಲ್ಲಿಗೆ ಕಳುಹಿಸಲಾಯಿತು? ಅದಕ್ಕೆ ನಮಗೆ ದಾಖಲೆ ನೀಡಿದವರು ಪಂಚಾಯತ್ನ ಉಪಾಧ್ಯಕ್ಷರು. ಹೀಗಾಗಿ ಇವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದ ಮೋಹಿತ್ ಅವರು ನ್ಯಾಯ ದೊರಕುವವರೆಗೆ ಹೋರಾಟ ನಿರಂತರವಾಗಿರಲಿದೆ. ಪ್ರಕರಣದ ನೈಜ ಸಂಗತಿಗಳು ಹೊರಬಂದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಅವರು ಆಗ್ರಹಿಸಿದರು.
ಹೋರಾಟಕ್ಕೆ ಕೈ ಜೋಡಿಸಿzವೆ- ತಮ್ಮಣ್ಣ ಶೆಟ್ಟಿ: ದೈವ ಚಿಂತಕ ತಮ್ಮಣ್ಣ ಶೆಟ್ಟಿ ಮಾತನಾಡಿ ಸೌಜನ್ಯಳಿಗೆ ನ್ಯಾಯ ದೊರಕಿಸಿಕೊಡುವ ಉzಶದಿಂದ ಹೋರಾಟಕ್ಕೆ ಕೈ ಜೋಡಿಸಿzವೆ. ಎಸ್ಐಟಿ ಅಧಿಕಾರಿಗಳು ಪ್ರಕರಣದ ಎಲ್ಲ ಆಯಾಮಗಳನ್ನು ಪರಿಶೀಲಿಸಿ ಕ್ರೂರತೆಗೆ ಬಲಿಯಾದ ಸೌಜನ್ಯಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು. ನ್ಯಾಯವಾದಿಗಳಾದ ವಿಜಯ ವಾಸು ಪೂಜಾರಿ, ನವೀನ್ ಕುಮಾರ್, ದಿನೇಶ್ ಗಾಣಿಗ ಕುಂದಾಪುರ, ನೀತಿ ತಂಡದ ಜಯಂತ್ ಟಿ., ಅಹೋರಾತ್ರ, ಸುಪ್ರೀಂಕೋರ್ಟ್ ನ್ಯಾಯವಾದಿ ಶೇಖರ್ ಜಿ ದೇವಸ ಅವರ ಸಹೋದರ ಕೃಷ್ಣಪ್ಪ ಗೌಡ ದೇವಸ, ಬಾಂಬೆಯಲ್ಲಿ ಸೌಜನ್ಯ ಪರ ಜನರನ್ನು ಒಗ್ಗೂಡಿಸಿದ ಸುರೇಶ್ ಯಯ್ಯಾಡಿ ಉಪಸ್ಥಿತರಿದ್ದರು.
ಸಾವಿರಾರು ಮಂದಿ ಸಭೆಯಲ್ಲಿ ಭಾಗಿಯಾಗಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಅನಿಲ್ ಅಂತರ, ಪ್ರಕರಣ ನಡೆದು ೧೪ ವರ್ಷಗಳಾದರೂ ಈ ವ್ಯವಸ್ಥೆಯಡಿ ಇನ್ನೂ ನ್ಯಾಯ ಕೊಡಿಸಲು ಸಾಧ್ಯವಾಗಿಲ್ಲ ಎನ್ನುವ ನೋವು ನಮ್ಮಲ್ಲಿದೆ. ಹಿಂದಿನ ತನಿಖಾ ತಂಡಗಳು ಕೆಟ್ಟದಾಗಿ ತನಿಖೆ ನಡೆಸಿದ್ದಾರೆ. ಹೊಸ ಎಸ್ಐಟಿ ತಂಡವಾದರೂ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಬೇಕು. ಕಳೆದ ೧೪ ವರ್ಷಗಳಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಾ ಬಂದಿzವೆ. ಈಗಿನ ಎಸ್ಐಟಿ ತಂಡದ ನ್ಯಾಯ ಒದಗಿಸುತ್ತದೆ ಎಂಬ ನಂಬಿಕೆ ಇದೆ ಎಂದರು.
ಮಹೇಶ್ ಶೆಟ್ಟಿ ತಿಮರೋಡಿ ಸಹೋದರ ಮೋಹನ್ ಶೆಟ್ಟಿ ತಿಮರೋಡಿ ಅವರು ವಂದೇ ಮಾತರಂ ಗೀತೆ ಹಾಡಿದರು. ಬೆಳ್ತಂಗಡಿ ಡಿವೈಎಸ್ಪಿ ರೋಹಿಣಿ ಸಿ.ಕೆ. ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಗೀಶ್ರನ್ನು ತನಿಖೆ ನಡೆಸಿದರೆ ಸತ್ಯ ಹೊರ ಬರುತ್ತದೆ: ಆಗಿನ ತನಿಖಾಧಿಕಾರಿ ಯೋಗೀಶನನ್ನು ಹೊಡಿದು ನೇತು ಹಾಕಿದರೆ ಸತ್ಯ ಸಂಗತಿ ಹೊರ ಬೀಳುತ್ತದೆ. ಐದು ಮಂದಿಯನ್ನು ರಕ್ಷಿಸಿzನೆ ಎಂದು ದೈವದ ನಡೆಯಲ್ಲಿ ಯೋಗೀಶ್ ಹೇಳಿದ್ದಾರೆ. ನನ್ನ ಮನೆಗೆ ಬಂದಾಗಲೂ ಐದು ಜನ ಇದ್ದಾರೆ ಎಂದಿzರೆ. ಹೀಗಾಗಿ ನಿರಪರಾಧಿ ಸಂತೋಷ್ ರಾವ್ ಅವರಿಗೆ ಸೂಜಿಯಿಂದ ಚುಚ್ಚಿ ಪ್ರಕರಣವನ್ನು ತಾನೇ ಮಾಡಿದ್ದೆಂದು ಒಪ್ಪಿಕೊಳ್ಳುವಂತೆ ಒತ್ತಾಯಿಸಿದಂತೆ ಯೋಗೀಶನಿಗೆ ದಬ್ಬಣದಿಂದ ಚುಚ್ಚಿ ತನಿಖೆಗೆ ಒಳಪಡಿಸಿದಾಗ ಆತನ ಬಾಯಿಯಿಂದ ನೈಜ ಸಂಗತಿ ಹೊರ ಬೀಳಲಿದೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು.
ಇನ್ನಾದರೂ ನ್ಯಾಯ ಕೊಡಿಸಿ: ನನ್ನ ಮಗಳಿಗೆ ನ್ಯಾಯ ಒದಗಿಸಬೇಕು. ಅಂದಿನ ಅಧಿಕಾರಿಗಳು ಸಾPಗಳನ್ನು ನಾಶ ಮಾಡಿzರೆ. ಇನ್ನಾದರೂ ನ್ಯಾಯ ದೊರಕಿಸಿಕೊಡಿ ಎಂದು ಸೌಜನ್ಯಳ ತಾಯಿ ಕುಸುಮಾವತಿ ಚಂದಪ್ಪ ಗೌಡ ಕಣ್ಣೀರು ಸುರಿಸಿ ಮನವಿ ಮಾಡಿದರು.