






ಕೊಯ್ಯುರು: ಮಲೆಬೆಟ್ಟು ಶ್ರೀ ವನದುರ್ಗಾ ದೇವಾಲಯದಲ್ಲಿ ನವರಾತ್ರಿ ಪೂಜಾ ಮಹೋತ್ಸವ ಅ.11 ರಿಂದ ಪ್ರಾರಂಭಗೊಂಡಿದ್ದು ಅ.20 ವರೆಗೆ ನವರಾತ್ರಿ ಪೂಜಾ ಮಹೋತ್ಸವವು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಅ.11 ರಂದು ಗಣಹೋಮ, ಮಲೆಬೆಟ್ಟು ಶ್ರೀರಾಮ ಭಜನಾ ಮಂಡಳಿಯಿಂದ ಕುಣಿತ ಭಜನಾ ಕಾರ್ಯಕ್ರಮ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.ಅ.12 ರಂದು ಭಕ್ತಿ ಸಂಗೀತ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಅ.13 ರಂದು ಕಿರಿಯಾಡಿ ಶ್ರೀ ಉಮಾಮಹೇಶ್ವರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಿತು.


ಅ.14 ರಂದು ರಾತ್ರಿ ಪೆರ್ಲ ಉಜಿರೆ ಶ್ರೀ ಲಕ್ಷ್ಮೀ ಜನಾರ್ಧನ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ, ನವರಾತ್ರಿ ಪೂಜೆ, ಶ್ರೀ ರಂಗಪೂಜೆ, ಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಅ.20 ರಂದು ವಿಜಯ ದಶಮಿ:ಅ.15 ರಂದು ಕೊಯ್ಯೂರು ಮಾವಿನಕಟ್ಟೆ ಶ್ರೀ ಗುರು ರಾಘವೇಂದ್ರ ಭಜಕ ವೃಂದದಿಂದ ಭಜನಾ ಕಾರ್ಯಕ್ರಮ , ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಅ.16 ರಂದು ರಾತ್ರಿ 7-30 ರಿಂದ ಶ್ರೀ ಸುನಿಲ್ ಚಂದ್ರ ಜೀವನ ಕಲೆ ಪ್ರತಿಷ್ಠಾನ ಮಂಗಳೂರು ವಲಯ ಮತ್ತು ಬಳಗದವರಿಂದ ಸತ್ಸಂಗ ಕಾರ್ಯಕ್ರಮ ನಂತರ ಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಅ.17 ರಂದು ಬೆಳಿಗ್ಗೆ 10 ರಿಂದ ಕಳೆಂಜದಲ್ಲಿ ದೈವಗಳಿಗೆ ಪರ್ವ, ಮಧ್ಯಾಹ್ನ 12.00 ರಿಂದ ಓಡಲ ಚಾಮುಂಡಿ ಬೆಟ್ಟ ಶಿವಪಾರ್ವತಿ ಮಹಿಳಾ ಭಜನಾ ಮಂಡಳಿ ವತಿಯಿಂದ ಭಜನಾ ಸೇವೆ, ದೇವಾಲಯದಲ್ಲಿ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7-30 ರಿಂದ ಭಕ್ತಿಗೀತೆ, ಭಜನಾ ಸ್ಪರ್ಧೆ, ನವರಾತ್ರಿ ಪೂಜೆ, ಶ್ರೀ ರಂಗಪೂಜೆ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಅ.18 ರಂದು ಬೆಳ್ತಂಗಡಿ ತಾಲೂಕು ಗಮಕ ಕಲಾ ಪರಿಷತ್ ಇದರ ಸದಸ್ಯರಿಂದ ಗಮಕ ನೃತ್ಯ ರೂಪಕ ನಂತರ ನವರಾತ್ರಿ ಪೂಜೆ, ಶ್ರೀರಂಗಪೂಜೆ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಅ.19 ರಂದು ರಾತ್ರಿ 7-30 ರಿಂದ ತುಳು ಶಿವಳ್ಳಿ ಕುವೆಟ್ಟು ವಲಯ ಇವರಿಂದ ಭಜನಾ ಕಾರ್ಯಕ್ರಮ, ನವರಾತ್ರಿ ಪೂಜೆ, ಶ್ರೀರಂಗಪೂಜೆ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಅ.20 ರಂದು ವಿಜಯ ದಶಮಿ, ಬೆಳಿಗ್ಗೆ 10-00 ರಿಂದ ಚಿತ್ರ ಬಿಡಿಸುವ ಸ್ಪರ್ದೆ, ರಂಗೋಲಿ ಸ್ಪರ್ಧೆ, ಕೊಯ್ಯೂರು ಶ್ರೀ ಪಂಚದುರ್ಗಾ ಯಕ್ಷಗಾನ ಕಲಾಸಂಘ ಇವರಿಂದ ತುಳು ಯಕ್ಷಗಾನ ತಾಳಮದ್ದಳೆ, ನಳ ದಮಯಂತಿ, ಮಧ್ಯಾಹ್ನ 12-30 ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.









