ನವಶಕ್ತಿ ಶ್ರೀಮತಿ ಕಾಶಿ ಬಾಬು ಶೆಟ್ಟಿ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ: ವಿಷ್ಣು ಸಹಸ್ರನಾಮ ಪಾರಾಯಣ

0

ಗುರುವಾಯನಕೆರೆ: ಶಕ್ತಿನಗರದ ನವಶಕ್ತಿ ನಿವಾಸದಲ್ಲಿ ಶ್ರೀಮತಿ ಕಾಶಿ ಬಾಬು ಶೆಟ್ಟಿ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಆಯೋಜಿಸಿರುವ ‘ಮಾತೃಸ್ಮೃತಿ’ ಕಾರ್ಯಕ್ರಮದ ಪೂರ್ವಭಾವಿಯಾಗಿ ಇಂದು ಮುಂಜಾನೆ ವಿಷ್ಣು ಸಹಸ್ರನಾಮ ಪಾರಾಯಣ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಡಾ. ಪ್ರದೀಪ್ ನಾವುರ ಹಾಗೂ ದಂತ ವೈದ್ಯ ಡಾ. ಶಶಿಧರ್ ಡೋಂಗ್ರೆ ಉದ್ಘಾಟಿಸಿದರು. ಬಳಿಕ ಡಾ. ಪ್ರದೀಪ್ ನಾವುರ ಅವರು ವಿಷ್ಣು ಸಹಸ್ರನಾಮ ಪಾರಾಯಣವನ್ನು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ನವಶಕ್ತಿ ಮನೆಯ ಕುಟುಂಬಸ್ಥರು ಉಪಸ್ಥಿತರಿದ್ದು, ಭಕ್ತಿಭಾವದಿಂದ ಪಾರಾಯಣದಲ್ಲಿ ಪಾಲ್ಗೊಂಡರು.ಶ್ರೀಮತಿ ಕಾಶಿ ಬಾಬು ಶೆಟ್ಟಿ ಅವರ ಸ್ಮರಣಾರ್ಥ ಅ. 13ರಂದು ಸಂಜೆ 6 ಗಂಟೆಗೆ ನವಶಕ್ತಿ ನಿವಾಸದಲ್ಲಿ ‘ಮಾತೃಸ್ಮೃತಿ’ ಕಾರ್ಯಕ್ರಮ ನೆರವೇರಲಿದೆ.

LEAVE A REPLY

Please enter your comment!
Please enter your name here